ಇಸ್ರೋ 
ವಿಜ್ಞಾನ-ತಂತ್ರಜ್ಞಾನ

ಪೂರ್ಣ ಕಾರ್ಯಕ್ಕೆ ಮರಳಿದ ಇಸ್ರೋ: ಆಗಸ್ಟ್ 12 ರಂದು ಜಿಯೋ ಇಮೇಜಿಂಗ್ ಉಪಗ್ರಹ ಉಡಾವಣೆಗೆ ಯೋಜನೆ

ಆಗಸ್ಟ್ 12 ರಂದು ಜಿಎಸ್ಎಲ್ ವಿ-ಎಫ್ 10 ರಾಕೆಟ್ ನಿಂದ ಜಿಯೋ ಇಮೇಜಿಂಗ್ ಉಪಗ್ರಹ ಜಿಸ್ಯಾಟ್-1 ಉಡಾವಣೆ ಮಾಡಲು ಯೋಜನೆ ರೂಪಿಸುವುದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಂಪೂರ್ಣವಾಗಿ ಉಡಾವಣಾ ಚಟುವಟಿಕೆಗೆ ಮರಳುತ್ತಿದೆ.

ಬೆಂಗಳೂರು: ಆಗಸ್ಟ್ 12 ರಂದು ಜಿಎಸ್ಎಲ್ ವಿ-ಎಫ್ 10 ರಾಕೆಟ್ ನಿಂದ ಜಿಯೋ ಇಮೇಜಿಂಗ್ ಉಪಗ್ರಹ ಜಿಸ್ಯಾಟ್-1 ಉಡಾವಣೆ ಮಾಡಲು ಯೋಜನೆ ರೂಪಿಸುವುದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಂಪೂರ್ಣವಾಗಿ ಉಡಾವಣಾ ಚಟುವಟಿಕೆಗೆ ಮರಳುತ್ತಿದೆ.

ಇದು ಕೋವಿಡ್-19 ಸಾಂಕ್ರಾಮಿಕ ವೇಳೆಯಲ್ಲಿ ಬೆಂಗಳೂರು ಕೇಂದ್ರ ಕಚೇರಿಯಿಂದ ಉಡಾವಣೆಯಾಗುತ್ತಿರುವ ಎರಡನೇ ಉಪಗ್ರಹವಾಗಿದೆ. ಫೆಬ್ರವರಿ 28 ರಂದು ಬ್ರೆಜಿಲ್‌ನ ಭೂ ವೀಕ್ಷಣಾ ಉಪಗ್ರಹ ಅಮೆಜೋನಿಯಾ -1 ಮತ್ತು ಕೆಲ ವಿದ್ಯಾರ್ಥಿಗಳು ತಯಾರಿಸಿದ ಸಹ ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ 51 ಯಶಸ್ವಿ ಕಾರ್ಯಾಚರಣೆ ಮಾಡಿತ್ತು. 

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟದಿಂದ  2,268 ಕೆಜಿ ಸಾಮರ್ಥ್ಯದ ಗಿಸಾಟ್-1 ನ್ನು  ಕಳೆದ ವರ್ಷ ಮಾರ್ಚ್ 5 ರಂದು ಉಡಾಯಿಸಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಉಡಾವಣೆಗೂ ಒಂದು ದಿನ ಮೊದಲು ಮುಂದೂಡಲಾಯಿತು. ನಂತರ ಕೋವಿಡ್ ಲಾಕ್ ಡೌನ್ ಹೇರಿದ್ದರಿಂದ ಉಡಾವಣೆ ವಿಳಂಬವಾಯಿತು.

ಆ ಉಪಗ್ರಹ ಉಡಾವಣೆಯನ್ನು ಈ ವರ್ಷದ ಮಾರ್ಚ್ 28 ರಂದು ಉಡಾವಣೆ ಮಾಡಲು ವೇಳೆ ನಿಗದಿಪಡಿಸಲಾಗಿತ್ತು. ಆದರೆ, ಸಣ್ಣ ಸಮಸ್ಯೆಯಿಂದಾಗಿ ಅದನ್ನು ಮುಂದೂಡಲಾಯಿತು. ತದನಂತರ ಏಪ್ರಿಲ್ ಮತ್ತು ಮೇ ನಲ್ಲಿ ಉಡಾವಣೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಕೋವಿಡ್ ಎರಡನೇ ಅಲೆಯಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದ್ದರಿಂದ ಅದು ಸಹ ಕಾರ್ಯಗತಗೊಳ್ಳಲಿಲ್ಲ.

ಇದೀಗ ಆಗಸ್ಟ್ 10 ಸಂಜೆ 5-43ಕ್ಕೆ ಜಿಎಸ್ ಎಲ್ ವಿ-ಎಫ್ 10 ವಾಹಕದ ಮೂಲಕ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ಇಸ್ರೋ ಅಧಿಕಾರಿ ಶನಿವಾರ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭೂ ಪರಿವೀಕ್ಷಣಾ ಉಪಗ್ರಹ ತನ್ನ ಗಡಿಯಲ್ಲಿ ನೈಜ ಕಾಲದ ಚಿತ್ರಗಳನ್ನು ದೇಶಕ್ಕೆ ಪೂರೈಸಲಿದೆ. ನೈಸರ್ಗಿಕ ವಿಪತ್ತುಗಳ ತ್ವರಿತ ಮೇಲ್ವಿಚಾರಣೆಗೂ ಶಕ್ತವಾಗಿದೆ. ಜಿಯೋಸ್ಟೇಷನರಿ ಕಕ್ಷೆಯಲ್ಲಿ ಅತ್ಯಾಧುನಿಕ ಚುರುಕುಬುದ್ಧಿಯ ಭೂ ವೀಕ್ಷಣಾ ಉಪಗ್ರಹವನ್ನು ಇಡುವುದರಿಂದ ಪ್ರಮುಖ ಅನುಕೂಲಗಳಿವೆ ಎಂದು ತಜ್ಞರು ಹೇಳಿದ್ದಾರೆ. ಇದು ಭಾರತಕ್ಕೆ ಒಂದು ಅರ್ಥದಲ್ಲಿ ಗೇಮ್ ಚೆಂಜರ್ ಆಗಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT