ವಿಜ್ಞಾನ-ತಂತ್ರಜ್ಞಾನ

ಜೂನ್ 15, 2022 ರಂದು ಇಂಟರ್ನೆಟ್ ಎಕ್ಸ್‌ಪ್ಲೋರರ್ ಯುಗಾಂತ್ಯ: ಮೈಕ್ರೋಸಾಫ್ಟ್

Lingaraj Badiger

ವಾಷಿಂಗ್ಟನ್: 25 ವರ್ಷಗಳ ಕಾಲ ನೆಟಿಜನ್‌ಗಳ ಸೇವೆ ಸಲ್ಲಿಸಿದ ಸುದೀರ್ಘಕಾಲದ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮುಂದಿನ ವರ್ಷ ಜೂನ್ 15 ರಂದು ತನ್ನ ಸೇವೆ ಸ್ಥಗಿತಗೊಳಿಸಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

ಅನುಭವಿ ವೆಬ್ ಬ್ರೌಸರ್ ಅನ್ನು ವಿಂಡೋಸ್ 95 ನೊಂದಿಗೆ ಬಿಡುಗಡೆ ಮಾಡಲಾಗಿದೆ ಎಂದು ಟೆಕ್ ದೈತ್ಯ ಬುಧವಾರ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.

"ಇಂಟರ್ನೆಟ್ ಎಕ್ಸ್‌ಪ್ಲೋರರ್ 11 ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲಾಗುವುದು ಮತ್ತು ಜೂನ್ 15, 2022 ರಂದು ವಿಂಡೋಸ್ 10ರ ಕೆಲವು ಆವೃತ್ತಿಗಳು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬೆಂಬಲವಿಲ್ಲದೆ ಹೋಗುತ್ತವೆ" ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಮೈಕ್ರೋಸಾಫ್ಟ್ ಎಡ್ಜ್ ಪ್ರೋಗ್ರಾಂ ಮ್ಯಾನೇಜರ್ ಸೀನ್ ಲಿಂಡರ್ಸೆ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಂಡೋಸ್ 10 ನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ನ ಭವಿಷ್ಯವು ಮೈಕ್ರೋಸಾಫ್ಟ್ ಎಡ್ಜ್ ನಲ್ಲಿದೆ. ಮೈಕ್ರೋಸಾಫ್ಟ್ ಎಡ್ಜ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಗಿಂತ ವೇಗವಾಗಿ, ಹೆಚ್ಚು ಸುರಕ್ಷಿತ ಮತ್ತು ಆಧುನಿಕ ಬ್ರೌಸಿಂಗ್ ಅನುಭವ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

SCROLL FOR NEXT