ವಿಜ್ಞಾನ-ತಂತ್ರಜ್ಞಾನ

ಮುಂದಿನ ವರ್ಷ ಜೂನ್‌ನಲ್ಲಿ ಚಂದ್ರಯಾನ-3 ಉಡಾವಣೆ: ಇಸ್ರೋ

Nagaraja AB

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ವರ್ಷ ಜೂನ್‌ನಲ್ಲಿ ಚಂದ್ರಯಾನ-3  ಉಡಾವಣೆ ಮಾಡಲು ಯೋಜಿಸಿದೆ. ಇದು ಭವಿಷ್ಯದ ಅಂತರ-ಗ್ರಹ ಪರಿಶೋಧನೆಗಳಿಗೆ ನಿರ್ಣಾಯಕವಾಗಿದೆ.

ಮುಂದಿನ ವರ್ಷದ ಆರಂಭದಲ್ಲಿ ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನ ಯಾನಕ್ಕಾಗಿ  'ಅಬಾರ್ಟ್ ಮಿಷನ್' ನ ಮೊದಲ ಪರೀಕ್ಷಾರ್ಥ ಹಾರಾಟ ಮಾಡಲಾಗುತ್ತಿದೆ. ಮುಂದಿನ ವರ್ಷ ಜೂನ್ ನಲ್ಲಿ ಮಾರ್ಕ್ -3 (ಎಲ್ ವಿಎಂ3)  ಉಡಾವಣಾ ವಾಹಕದ ಮೂಲಕ ಚಂದ್ರಯಾನ-3 ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಅಬಾರ್ಟ್ ಮಿಷನ್ ಯಶಸ್ವಿಯಾಗಿ ನಡೆಸಿದ ನಂತರ 2024 ರ ಅಂತ್ಯದ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಕಕ್ಷೆಗೆ ಹಾರಿಸಲು ಇಸ್ರೋ ಯೋಜಿಸಿರುವುದಾಗಿ ಅವರು ಮಾಹಿತಿ ನೀಡಿದರು. 2019ರಲ್ಲಿ ಕೈಗೊಳ್ಳಲಾಗಿದ್ದ ಚಂದ್ರಯಾನ -2 ಕಾರ್ಯಾಚರಣೆಯಲ್ಲಿ  ರೋವರ್ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಚಂದ್ರಯಾನ 3 ಇದೀಗ ಸಜ್ಜಾಗಿದೆ. ಇದು ಚಂದ್ರಯಾನ-2 ಪ್ರತಿರೂಪವಲ್ಲ, ರೋವರ್ ಇದೆ. ಎಂಜಿನಿಯರಿಂಗ್ ಗಮನಾರ್ಹವಾಗಿ ವಿಭಿನ್ನವಾಗಿದೆ. ಕಳೆದ ಬಾರಿಯಂತೆ ಸಮಸ್ಯೆಯಾಗದಂತೆ ಇನ್ನಷ್ಟು ಗಟ್ಟಿಗೊಳಿಸಿದ್ದೇವೆ ಎಂದು ಸೋಮನಾಥ್ ಹೇಳಿದರು.

ಅನೇಕ ಬದಲಾವಣೆ ಮಾಡಲಾಗಿದೆ. ಇಂಪೆಕ್ಟ್ ಲೆಗ್ ಗಳು ಬಲವಾಗಿರುತ್ತವೆ. ಇದು ಉತ್ತಮವಾದ ಉಪಕರಣವನ್ನು ಹೊಂದಿರುತ್ತದೆ. ಏನಾದರೂ ವಿಫಲವಾದಲ್ಲಿ, ಬೇರೆ ಯಾವುದನ್ನಾದರೂ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು. ಪ್ರಯಾಣಿಸಬೇಕಾದ ಎತ್ತರವನ್ನು ಲೆಕ್ಕಾಚಾರ ಮಾಡಲು, ಅಪಾಯ-ಮುಕ್ತ ಸ್ಥಳಗಳನ್ನು ಗುರುತಿಸಲು ಮತ್ತು ಉತ್ತಮ ಸಾಫ್ಟ್‌ವೇರ್  ಹೊಂದಲು ರೋವರ್ ಕೂಾ ವಿಭಿನ್ನ ವಿಧಾನಗಳನ್ನು ಹೊಂದಿರುತ್ತದೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದರು. 

SCROLL FOR NEXT