ಮೈಸೂರು: ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿನೂತನ ‘ವಿಂಡ್ ಟ್ರೀ’ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದಿಂದ ಗಾಳಿಯ ಶಕ್ತಿಯನ್ನು ಬಳಸಿಕೊಂಡು ಎಲೆಕ್ಟ್ರಿಕ್ ವಾಹನಗಳು (EVಗಳು), ಮೊಬೈಲ್ ಫೋನ್‌ಗಳು ಮತ್ತು LED ಬಲ್ಬ್‌ಗಳನ್ನು ಚಾರ್ಜ್ ಮಾಡಬಹುದು.
ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮೊಹಮ್ಮದ್ ರಶೀದ್, ಮೊಹಮ್ಮದ್ ಅದ್ನಾನ್, ಮೊಹಮ್ಮದ್ ಅಜೀಬ್ ಮತ್ತು ಮೊಹಮ್ಮದ್ ತಲ್ಹಾ ಅವರು ಮೂಲಮಾದರಿಯನ್ನು ರಚಿಸಿದ್ದಾರೆ. 'ವಿಂಡ್ ಟ್ರೀ' ಪರಿಕಲ್ಪನೆಯಲ್ಲಿ ವಿದ್ಯುತ್ ಉತ್ಪಾದಿಸಲು ಹೆಲಿಕಲ್ ಬ್ಲೇಡ್‌ಗಳನ್ನು ಬಳಸುತ್ತದೆ. ಸಾಂಪ್ರದಾಯಿಕ ಗಾಳಿ ಟರ್ಬೈನ್‌ಗಳಿಗಿಂತ ಭಿನ್ನವಾಗಿ, ಇದರಲ್ಲಿ ಕೃತಕ ಮರಗಳನ್ನು ಬಳಸಲಾಗುತ್ತದೆ. ಅಲ್ಲಿ ಎಲೆಗಳು ವಿದ್ಯುತ್ ಉತ್ಪಾದಿಸಲು ಸಮತಲ ಟರ್ಬೈನ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.
ಸೀಮಿತ ಸ್ಥಳಾವಕಾಶವಿರುವ ಪ್ರದೇಶಗಳಲ್ಲಿ ಅಳವಡಿಸಬಹುದಾದ ಪೋರ್ಟಬಲ್ ಮಾದರಿಯನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು ಸುಮಾರು 15,000 ರೂ. ವೆಚ್ಚ ಮಾಡಿದ್ದಾರೆ. ಪ್ರಸ್ತುತ ವಿಂಡ್ ಟರ್ಬೈನ್ (ಪವನ ವಿದ್ಯುತ್ ಉತ್ಪಾದಿಸುವ ರಾಟೆಗಳು) ವಿದ್ಯುತ್ ಉತ್ಪಾದಿಸಲು ದೊಡ್ಡ ಸ್ಥಳ ಮತ್ತು ನಿರಂತರ ಹೆಚ್ಚಿನ ವೇಗದ ಗಾಳಿಯ ಅಗತ್ಯವಿರುತ್ತದೆ. ಪವನ ಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ನಮಗೆ ಆದರ್ಶ ರಚನೆ ಮತ್ತು ಪರಿಕಲ್ಪನೆಯ ಅಗತ್ಯವಿದೆ ಎಂದು ಮೊಹಮ್ಮದ್ ರಶೀದ್ ದಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಗೆ ವಿವರಿಸಿದರು.
"ವಿದ್ಯುತ್ ಬಳಕೆಯನ್ನು ಹೆಚ್ಚಿಸುವುದರೊಂದಿಗೆ, ಪ್ರಾಥಮಿಕ ಮೂಲದ ಮೇಲಿನ ಹೊರೆ ಕಡಿಮೆ ಮಾಡುವುದು ಮತ್ತು ಹೆಚ್ಚು ಪರಿಣಾಮಕಾರಿ ಮೂಲಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದಿಸಲು ನಾವು ಏರೋ-ಲೀಫ್ ವಿಂಡ್ ಟರ್ಬೈನ್ ಅನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಅವರು ಹೇಳಿದರು.
‘ವಿಂಡ್ ಟ್ರೀ’ ಮಾದರಿಯ ವಿಶಿಷ್ಟತೆಯನ್ನು ಒತ್ತಿ ಹೇಳಿದ ರಶೀದ್, ಕೃತಕ ಮರಗಳನ್ನು ಹೋಲುವಂತೆ ಟರ್ಬೈನ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೃತಕ ಏರೋ ಎಲೆಗಳು ಕಡಿಮೆ ತೀವ್ರತೆಯ ಗಾಳಿಯನ್ನು ಬಳಸಿಕೊಂಡು ಲಂಬ ಅಕ್ಷದ ಮೇಲೆ ತಿರುಗುವ ಮೈಕ್ರೋಟರ್ಬೈನ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. " ಒಂದು ಮರದ ರೂಪದಲ್ಲಿ ವಿದ್ಯುತ್ ಶಕ್ತಿ-ಉತ್ಪಾದಿಸುವ ವ್ಯವಸ್ಥೆ ರಚಿಸುವುದು ಈ ಕಲ್ಪನೆಯಾಗಿದೆ. ಪ್ರತಿ ಎಲೆಯು ಮಿನಿ ವಿಂಡ್ ಟರ್ಬೈನ್ ಆಗಿ ಕಾರ್ಯನಿರ್ವಹಿಸುತ್ತದೆ. ಕಡಿಮೆ ಗಾಳಿಯ ವೇಗ ಮತ್ತು ಪ್ರಕ್ಷುಬ್ಧತೆಯನ್ನು ಸೆರೆಹಿಡಿಯುವುದು ಈ ವಿಧಾನಕ್ಕೆ ಕೇಂದ್ರವಾಗಿದೆ, ಇದು ಎಲೆಗಳ ಪ್ರಸರಣದ ಮೂಲಕ ಶಕ್ತಿ ಮತ್ತು ಸ್ವಾಯತ್ತತೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ಮೊಹಮ್ಮದ್ ಅದ್ನಾನ್ ಮಾತನಾಡಿ ವಿಂಡ್ ಟ್ರೀ ಶಕ್ತಿ ಪರಿವರ್ತನೆಯ ದಕ್ಷತೆಯನ್ನು ಹೆಚ್ಚಿಸುವುದು ಪ್ರಾಥಮಿಕ ಗುರಿಯಾಗಿದೆ ಎಂದರು.