ಗ್ರಹಗಳ ನರ್ತನ ಖಗೋಳ ಕೌತುಕ 
ವಿಜ್ಞಾನ-ತಂತ್ರಜ್ಞಾನ

Planet Parade: ಅತ್ಯಪರೂಪದ ಖಗೋಳ ಕೌತುಕ; ಜ್ಯೋತಿಷ್ಯಶಾಸ್ತ್ರದಲ್ಲೂ ಮಹತ್ವ, ಬರಿಗಣ್ಣಲ್ಲೇ ನೋಡಬಹುದು!

ಈ ವಾರಾಂತ್ಯದಲ್ಲಿ ಅಂದರೆ ಜನವರಿ 25ರಂದು ಬಹಳ ಅಪರೂಪವಾದ ಖಗೋಳ ಘಟನೆಯೊಂದು ನಡೆಯಲಿದ್ದು, ಅಪರೂಪದ ಗ್ರಹಗಳ ಸಂಯೋಗ ನಡೆಯಲಿದೆ.

ನವದೆಹಲಿ: ಈ ವಾರಾಂತ್ಯದಲ್ಲಿ ಅತ್ಯಪರೂಪದ 'ಖಗೋಳ ಕೌತುಕ'ವೊಂದು ನಡೆಯಲಿದ್ದು, ಆಕಾಶದಲ್ಲಿ ನಡೆಯುವ ಈ ವಿಸ್ಮಯವನ್ನು ನೋಡಲು ವಿಜ್ಞಾನಿಗಳ ಸಹಿತ ಜಗತ್ತಿನಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.

ಹೌದು.. ಈ ವಾರಾಂತ್ಯದಲ್ಲಿ ಅಂದರೆ ಜನವರಿ 25ರಂದು ಬಹಳ ಅಪರೂಪವಾದ ಖಗೋಳ ಘಟನೆಯೊಂದು ನಡೆಯಲಿದ್ದು, ಅಪರೂಪದ ಗ್ರಹಗಳ ಸಂಯೋಗ ನಡೆಯಲಿದೆ. ಅಂದರೆ ಆ ದಿನ ಸೌರಮಂಡಲದ ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ತಮ್ಮ ಸಂಚಾರ ಮಾಡಲಿದೆ.

ಸೂರ್ಯಾಸ್ತದ ನಂತರ ಶುಕ್ರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯಲಿದೆ. ಇದರಲ್ಲಿ ಮಂಗಳ ಗ್ರಹ ಇನ್ನಷ್ಟು ಹೊಳಪನ್ನು ಸುರಿಸಲಿದೆ. ಬೇರೆ ಖಗೋಳ ಘಟನೆಗಳಿಗಿಂತ ವಿಭಿನ್ನವಾಗಿ ಈ ಗ್ರಹಗಳ ಸಂಯೋಗ ನಡೆಯಲಿದ್ದು, ಇದನ್ನು ಬರಿ ಕಣ್ಣಿನಲ್ಲೇ ನೋಡಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಗ್ರಹಗಳ ನರ್ತನ

ಸೌರಮಂಡಲದ ಹಲವು ಗ್ರಹಗಳು ಸಾಲಾಗಿ ನಿಂತಂತೆ ಭಾಸವಾಗುವ ಈ ರಚನೆ, ಬಾಹ್ಯಾಕಾಶ ಪ್ರಿಯರಿಗೆ ಹಬ್ಬವಾಗಲಿದೆ. ಈ ಅಪರೂಪದ ಘಟನೆಯಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ಒಂದೇ ನೇರ ಸಾಲಿನಲ್ಲಿ ಇರುವುದಿಲ್ಲ. ಈ ರಚನೆಯು ಆಕಾಶದಲ್ಲಿ ಗ್ರಹಗಳು ನರ್ತಿಸುವಂತೆ ಒಂದು ಸುಂದರ ಭ್ರಮೆಯನ್ನು ಉಂಟುಮಾಡುತ್ತದೆ.

ಬರಿಗಣ್ಣಿನಲ್ಲೇ ನೋಡಲು ಸಾಧ್ಯ

ವಿಜ್ಞಾನದ ಪ್ರಕಾರ, ಗ್ರಹಗಳ ವಿಭಿನ್ನ ಪರಿಭ್ರಮಣ ಅವಧಿಗಳಿಂದಾಗಿ ಇಂತಹ ಸಾಲುಗಳು ಉಂಟಾಗುತ್ತವೆ. ಭೂಮಿಯಿಂದ ಈ ಘಟನೆಗಳನ್ನು ವಿರಳವಾಗಿ ಮಾತ್ರ ನೋಡಬಹುದು. 2025ರ ಜನವರಿಯಲ್ಲಿ ನಡೆಯುವ ಗ್ರಹಗಳ ಸಾಲು ವಿಶೇಷವಾದದ್ದು. ಇದನ್ನು ಬರಿಗಣ್ಣಿನಿಂದಲೇ ನೋಡಬಹುದು. ಮಾತ್ರವಲ್ಲದೆ ದೂರದರ್ಶಕದಿಂದ ನೋಡಿದರೆ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ.

ಜ್ಯೋತಿಷ್ಯಶಾಸ್ತ್ರದಲ್ಲೂ ಮಹತ್ವ

ಹೀಗೆ ಹಲವು ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಅಪರೂಪ. ಜ್ಯೋತಿಷ್ಯದ ಪ್ರಕಾರ ಈ ಖಗೋಳ ಘಟನೆ ಮಹತ್ವದ ಬದಲಾವಣೆಗಳನ್ನು ಸೂಚಿಸುತ್ತದೆ ಎನ್ನಲಾಗಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವ. ಜ್ಯೋತಿಷ್ಯ ಶಾಸ್ತ್ರವು ಇಂತಹ ಅಪರೂಪದ ಗ್ರಹ ಸಾಲು ಬರುವುದನ್ನು ಗ್ರಹಗಳ ಶಕ್ತಿ ಹೆಚ್ಚಳ ಎಂದು ಪರಿಗಣಿಸುತ್ತದೆ. ಸಂವಹನದ ಗ್ರಹ ಬುಧವು ಆಳವಾದ ಸಂಭಾಷಣೆಗಳನ್ನು ಪ್ರೇರೇಪಿಸಬಹುದು. ಪ್ರಕಾಶಮಾನವಾದ ಶುಕ್ರ ಪ್ರೀತಿ ಮತ್ತು ಸೌಂದರ್ಯವನ್ನು ಸೂಚಿಸುತ್ತದೆ. ಮಂಗಳ ಉತ್ಸಾಹ ಮತ್ತು ಉದ್ವೇಗವನ್ನು ಸೂಚಿಸುತ್ತದೆ. ಗುರು ಜ್ಞಾನವನ್ನು ನೀಡುತ್ತದೆ. ಶನಿ ಶಿಸ್ತನ್ನು ನೀಡುತ್ತದೆ.

ಸೂರ್ಯಾಸ್ತದ ನಂತರ ಈ ಅಪರೂಪದ ಖಗೋಳ ಘಟನೆಯನ್ನು ವೀಕ್ಷಿಸಬಹುದು. ಸಂಜೆ ಆಕಾಶದಲ್ಲಿ ಗ್ರಹಗಳು ಆಕಾಶಕ್ಕೆ ರತ್ನಗಳನ್ನು ಜೋಡಿಸಿದಂತೆ ಕಾಣುತ್ತವೆ. ಶುಕ್ರ ಮತ್ತು ಗುರು ಅತ್ಯಂತ ಪ್ರಕಾಶಮಾನವಾಗಿ ಕಾಣಿಸುತ್ತವೆ. ಮಂಗಳ ಗ್ರಹವು ವಿಶಿಷ್ಟವಾದ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಜನವರಿ 25ರಂದು ನಡೆಯುವ ಈ ಅಪರೂಪದ ಘಟನೆಯನ್ನು ಖಗೋಳ ಆಸಕ್ತರು ತಪ್ಪಿಸಿಕೊಳ್ಳಬಾರದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT