ಮಂಗಳೂರು: ಮೀನು ಆಹಾರ ಅಂದ್ರೆ ಯಾರ ಬಾಯಲ್ಲಿ ನೀರೂರುವುದಿಲ್ಲ? ಮೀನು ಎಣ್ಣೆ ಮತ್ತು ಮೀನು ಆಹಾರದಲ್ಲಿ ತಾಜಾತನ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಬೇಡಿಕೆ. ಇಂತಹ ಗುಣಮಟ್ಟದ ಮೀನು ಎಣ್ಣೆ ಮತ್ತು ಮೀನು ಆಹಾರವನ್ನು ರಫ್ತು ಮಾಡುವುದಕ್ಕಾಗಿ, ಮಂಗಳೂರಿನ ಮುಕ್ಕಾ ಸೀ ಫುಡ್ ಸಂಸ್ಥೆಗೆ ಜಾಗತಿಕ ಮನ್ನಣೆ ದೊರೆತಿದೆ. ಈ ಸಂಸ್ಥೆ ರಫ್ತು ಮಾಡುವ ಮೀನು ಮತ್ತು ಶೀತಲೀಕರಿಸಿದ ಹಾಗೂ ಸಂಸ್ಕರಿಸಿದ ಮೀನು ಉತ್ಪನ್ನಗಳನ್ನು ಪರೀಕ್ಷಿಸುವ ರಫ್ತು ಪರೀಕ್ಷಾ ಏಜೆನ್ಸಿಯಿಂದ (ಎಕ್ಸ್ಪೋರ್ಟ್ ಇನ್ಸ್ಪೆಕ್ಷನ್ ಏಜೆನ್ಸಿ) ಇಂದ ಮಾನ್ಯತೆ ಪಡೆದಿರುವ ಏಕೈಕ ದಕ್ಷಿಣ ಭಾರತದ ಸಂಸ್ಥೆಯಾಗಿದೆ.
ಈ ಸಂಸ್ಥೆಗೆ ಎಪ್ ಕೆ ಸಿ ಸಿ ಐ ನಿಂದ ೨೦೧೧ ಮತ್ತು ೨೦೧೩ ರಲ್ಲಿ ಎಕ್ಸ್ಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ಕೂಡ ದೊರೆತಿದೆ. ಈ ಸಂಸ್ಥೆಯ ಉತ್ಪನ್ನಗಳು ಆಸ್ಟ್ರೇಲಿಯಾ, ಥಾಯ್ಲೆಂಡ್, ಕೊರಿಯಾ, ಬಾಂಗ್ಲ, ತೈವಾನ್, ಚಿಲಿ, ಟರ್ಕಿ, ಜಪಾನ್, ದಕ್ಷಿಣ ಅಮೇರಿಕಾ, ವಿಯೆಟ್ನಾಂ ಮುಂತಾದ ದೇಶಗಳಿಗೆ ರಫ್ತಾಗುತ್ತದೆ. ದಕ್ಷಿಣ ಭಾರತದಲ್ಲೂ ಈ ಸಂಸ್ಥೆಯ ಉತ್ಪನ್ನಗಳು ಜನಪ್ರಿಯತೆ ಗಳಿಸಿವೆ.
ಸಂಸ್ಥೆಯ ಗುಣಮಟ್ಟ ಕಾಯ್ದುಕೊಳ್ಳುವುದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಕೆ ಮೊಹಮ್ಮದ್ ಹ್ಯಾರಿಸ್.