ವಿಶೇಷ

ಆ ತುಟಿಗಳು

ಬರಿಯ ಚರ್ಮದ ತೀಟೆಗಾಗಿ ಗಂಡನ್ನು ಸಮೀಪಿಸುವ ಹೆಣ್ಣು, ಹೆಣ್ಣಿನ ಬಳಿ ಸುಳಿದಾಡುವ ಗಂಡು...

ಗಂಡು ಹೆಣ್ಣಿನ ಸಮಾಗಮಕ್ಕೆ ಒಂದು ಘನತೆ ಇರಬೇಕು. ಬರಿಯ ಚರ್ಮದ ತೀಟೆಗಾಗಿ ಗಂಡನ್ನು ಸಮೀಪಿಸುವ ಹೆಣ್ಣು, ಹೆಣ್ಣಿನ ಬಳಿ ಸುಳಿದಾಡುವ ಗಂಡು ಉತ್ತಮರಲ್ಲ. ಮಿಲನದ ಮಂಚದಲ್ಲಿ ಕೇವಲ ಕಾಮದ ಒಗರು ಇರಬಾರದು. ಅಲ್ಲಿ ಪ್ರೇಮದ ನವುರೂ ಇರಬೇಕು. ಆಗಷ್ಟೇ ಅದು ಶ್ರೇಷ್ಠವೆನಿಸುತ್ತದೆ. ಹಾಗಿದ್ದರೆ ವೇಶ್ಯೆಯರ ಗತಿ?
 
ಇದು ಜಗತ್ತಿನ ಅತ್ಯಂತ ಪ್ರಾಚೀನ ವೃತ್ತಿ. ಸಂಸ್ಕೃತ ಕಾವ್ಯ ನಾಟಕಗಳಲ್ಲಿ ವೇಶ್ಯಾವಾಟಿಕೆಗಳ ವರ್ಣನೆ ಧಾರಾಳ. ಕವಿಗಳೂ ಸಾಕಷ್ಟು ರಸಿಕರೇ ಇದ್ದುದರಿಂದ, ಈ ಭಾಗಗಳನ್ನು ಮನೋಹರ ವರ್ಣನೆಗಳಿಗೆ ಮೀಸಲಿಟ್ಟಿದ್ದಾರೆ. ಅಲ್ಲಿ ಗೌರವಾನ್ವಿತ ವೇಶ್ಯೆಯರೂ ಸಾಕಷ್ಟು ಮಂದಿ ಇದ್ದರು. ಆದರೆ ಕೆಲ ಕವಿಗಳಿಗಳಿಗೆ ವೇಶ್ಯೆಯರನ್ನು ಕಂಡರೆ ಆಗದು. ಅಂಥವರು ಆ ಬಗ್ಗೆ ಜಿಗುಪ್ಸೆ ಹುಟ್ಟಿಸುವ ಚಿತ್ರಣ ಕೊಡುತ್ತಾರೆ.

ವೇಶ್ಯೆಯರ ತುಟಿಗಳು ಮೇಲ್ನೋಟಕ್ಕೆ ಚೆಲುವೆಯಾಗಿಯೂ ಎಳೆಚಿಗುರಿನಂತ ಕೋಮಲವಾಗಿಯೂ ತೋರುತ್ತದೆ. ಆದರೆ ಅವು ಗೂಢಚರರು, ಸೈನಿಕರು, ಕಳ್ಳರು, ಚೇಟಕರು(ಪಿಂಪ್‌ಗಳು), ವಿಟಪುರುಷರು, ಸೋಗುಗಾರ ನಟರು ಮುಂತಾದವರು ಉಗುಳುವ ಪಾತ್ರೆಗಳಲ್ಲವೇ? ಅಂಥವುಗಳನ್ನು ಕುಲೀನನಾದ ಪುರುಷನು ಚುಂಬಿಸಲುಂಟೇ ವೇಶ್ಯೆಯರ ಬಗ್ಗೆ ಜಿಗುಪ್ಸೆ ಹುಟ್ಟಿಸಲೆಂದೇ ಕವಿ ಇದನ್ನು ಬರೆದಂತಿದೆ. ಆದರೆ ವಿಟರು ಇರುವವರೆಗೆ ಜಾರಿಣಿಯರೂ ಇರುತ್ತಾರೆ ಎಂಬುದನ್ನು ಮರೆಯುವಂತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ