ಡೀಗೊ ಮರಡೋನಾ, ರೋಸಿಯೋ ಒಲಿವಾ (ಸಂಗ್ರಹ ಚಿತ್ರ) 
ವಿಶೇಷ

'ದೇವರು' ಮೋಜು ಮಾಡಿದನು

ಹಾಸಿಗೆ ಸುಖ ಇವನಿಗಿಷ್ಟ! ಆ ಮನೆಯಲ್ಲಿ ನಿಶ್ಯಬ್ದದ ಮೇಳ, ಅವನು ಅಲ್ಲಿನ...

ಆ ಮನೆಯಲ್ಲಿ ನಿಶ್ಯಬ್ದದ ಮೇಳ, ಅವನು ಅಲ್ಲಿನ ಸೋಪಾದ ಮೇಲೆ ಕುಳಿತು ಟೀವಿ ನೋಡುತ್ತಿದ್ದ, ಮತ್ತೊಂದು ಬದಿಯ ಸೋಪಾದ ಮೇಲೆ ಅವಳಿದ್ದಳು. ಪತ್ರಿಕೆಯನ್ನು ತಿರುವಿ ಹಾಕುತ್ತಾ, ಮೊಬೈಲನ್ನೂ ದಿಟ್ಟಿಸುತ್ತಿದ್ದಳು. ಇದ್ದಕ್ಕಿದ್ದಂತೆ ಅವನಿಗೇನಾಯ್ತೋ ಏನೋ....

ರಿಮೋಟನ್ನು ಅಲ್ಲೇ ಬಿಸಾಕಿ, ದಿಢೀರನೇ ಎದ್ದು ಬಂದು ಅವಳ ಕಪಾಳಕ್ಕೆ ಬಾರಿಸಿದ. ಅವಳು ಅಸಹಾಯಕಳಾಗಿ ಚೀರುತ್ತಾಳೆ. ಮುಂದೇನಾಯ್ತು? ಅದೇ ನಿಗೂಢ!

ಇಂಥದ್ದೊಂದು ಸ್ಫೋಟಕ ವಿಡಿಯೋ ತುಣುಕನ್ನು ಅರ್ಜೆಂಟೀನಾ ಟಿವಿ ಚಾನೆಲ್ಲೊಂದು ಬಿತ್ತರಿತು. ಜಗತ್ತು ಅಚ್ಚರಿಯಲ್ಲಿ ರೆಪ್ಪೆ ಅರಳಿಸಿದ್ದು ಆಗಲೇ. ಆದರೆ, ಅವನು ಮಾತ್ರ ಉಲ್ಟಾ ಹೊಡೆದ. 'ನಾನು ಆಕೆಯನ್ನು ಹೊಡೆಯಲಿಲ್ಲ.

ಮೊಬೈಲ್ ಕಸಿದುಕೊಳ್ಳಲೆತ್ನಿಸಿದೆಯಷ್ಟೇ' ಎಂದು ನುಣುಚಿಕೊಂಡ. ಆದರೆ. ಆಕೆಯದು ರಕ್ಷಣಾತ್ಮಕ ಆಟ. 'ಈ ವಿಡಿಯೋ ತುಣುಕು ಪ್ರಸಾರವಾಗಲು ನಾನು ಕಾರಣಳಲ್ಲ' ಎಂದು ಸ್ಪಷ್ಟನೆ ಕೊಟ್ಟಳು. ಇಲ್ಲಿ 'ಅವನು' ಫುಟ್ಬಾಲ್ ದಂತಕತೆ ಮರಡೋನಾ. 'ಅವಳು' ರೋಸಿಯೋ ಒಲಿವಾ. ಕಸಿವಿಸಿ ಮೂಡಿಸಿತು.

'20ನೇ ಶತಮಾನದ ಫಿಫಾ ಆಟಗಾರ', 1986 ರಲ್ಲಿ ಅರ್ಜೆಂಟಿನಾಕ್ಕೆ ವಿಶ್ವಕಪ್ ತಂದುಕೊಟ್ಟವನ ಬದುಕಲ್ಲಿ ಇದೇನು ಗಲಿಬಿಲಿ? ಅವರಿಗೂ ಗೊತ್ತಾಗಲಿಲ್ಲ. ಡೀಗೊ ಮರಡೋನಾ ಈ 53 ನೇ ವಯಸ್ಸಿನ 22 ವಯಸ್ಸಿನ ರೋಸಿಯೋ ಜೊತೆ ಹೀಗೆ ಗೊಂದಲದ ಸಂಬಂಧ ಇಟ್ಟುಕೊಂಡಿದ್ದ. ಈತನ ಇವಳೊಬ್ಬನ ಜೊತೆ ಮಾತ್ರ ಮಲಗಿದವನಲ್ಲಿ. ಇವನೊಂದಿಗೆ ಲೈಂಗಿಕ ಸುಖ ಹಂಚಿಕೊಂಡ ಹುಡುಗಿಯರಿಗೆ ಲೆಕ್ಕವೇ ಇಲ್ಲ.


ಹಾಸಿಗೆ ಸುಖ ಇವನಿಗಿಷ್ಟ!
ರೋಸಿಯೋ ಒಲಿವಾ ಕೂಡ ಫುಟ್ಬಾಲ್ ಆಟಗಾರ್ತಿಯೇ. 53 ವರ್ಷದ ಮರಡೋನಾ 2013ರ 'ವ್ಯಾಲೆಟೆನ್ಸ್ ಡೇ'ಯಂದು ರೋಮ್‌ನ ಅತ್ಯಾಧುನಿಕ ಹೋಟೆಲ್ಲೊಂದರ ಪಾರ್ಟಿಯಲ್ಲಿ ಅವಳೊಂದಿಗೆ ಕಳ್ಳಭೇಟಿ ಇಟ್ಟುಕೊಂಡಿದ್ದ. ಇದೇ ವೇಳೆ ಈತನ ಮಾಜಿ ಗೆಳತಿ ವೆರೋನಿಕಾ ಓಜೆಡಾ, 'ನಾನು ಮರಡೋನಾಳ ಜೀವದ ಗೆಳತಿ. ನನ್ನ ಹೊಟ್ಟೆಯಲ್ಲಿ ಅವನ 4 ತಿಂಗಳ ಮಗುವಿದೆ' ಎಂಬ ಸ್ಟೇಟ್‌ಮಂಟ್ ಕೊಟ್ಟು ಆ ದಿನದ ಸಂಭ್ರಮಕ್ಕೆ ತಣ್ಣೀರೆರಚಿದಳು. ಆದರೆ, ಅವಳೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದನ್ನು ಮರಡೋನಾ ಸಂಪೂರ್ಣ ತಳ್ಳಿಹಾಕಿದ. 'ಅವಳು ಬೇರಾರದ್ದೋ ಜೊತೆ ಮಲಗಿದ್ದಾಳೆ. ಅದು ಅವರದ್ದೇ ಮಗು' ಅಂತಲೂ ಹೇಳಿಬಿಟ್ಟ. ಎರಡು ಮಗುವಿನ ತಾಯಿ ವೆರೋನಿಕಾ ಇವತ್ತಲ್ಲ ನಾಳೆ ಮರಡೋನ ಮತ್ತೆ ಬರುತ್ತಾನೆಂದು ಕಾಯುತ್ತಲೇ ಇದ್ದಾಳೆ.

ಅಫೇರೆಲ್ಲ ಟೆಂಪರರಿ!
ಮರಡೋನಾ ಒಂದು ಹುಡುಗಿಯೊಂದಿಗೆ ಜಾಸ್ತಿ ದಿನ ಸಂಸಾರ ನಡೆಸುವುದಿಲ್ಲ. ಅದರಲ್ಲೂ ತನ್ನ ಅರ್ಧ ವಯಸ್ಸಿಗಿಂತ ಚಿಕ್ಕವಳಾಗಿದ್ದ ರೋಸಿಯೋ ಜೊತೆ ಈತ ಸಂಬಂಧ ಇಟ್ಟುಕೊಂಡಾಗ ಕಟ್ಟಾ ಅಭಿಮಾನಿಗಳೂ ಕ್ಯಾಕರಿಸಿ ಉಗಿದರು. ಮಾಧ್ಯಮಗಳೂ ಅಬ್ಬರಿಸಿ ಸುಮ್ಮನಾದವವು. ರೋಸಿಯೋ ಮಾತ್ರ ಮರಡೋನಾನ ಹುಳುಕುಗಳು, ಅನೈತಿಕ ಸಂಬಂಧಗಳನ್ನು ಬಯಲಿಗೆಳೆಯುವುದಾಗಿ ಹೇಳಿಕೊಳ್ಳುತ್ತಲೇ ಇದ್ದಾಳೆ. ಈ ಕಾರಣಕ್ಕೇ ಅವನು ಅವಳನ್ನು ಹತ್ತಿಕ್ಕಲೆತ್ನಿಸುತ್ತಿರುವುದು. ತನ್ನ ಬೆಲೆ ಬಾಳುವ ಆಭರಣಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಿರುವುದು.

ಹೆಂಡ್ತಿಗೂ ಕೈ ಕೊಟ್ಟಿದ್ದ!

ಮರಡೋನಾ 1984ರಲ್ಲಿ ಕ್ಲೌಡಿಯಾ ವಿಲ್ಲಾಘನೆಯನ್ನು ಮದ್ವೆ ಆಗಿದ್ದ. ಇಬ್ಬರು ಹೆಣ್ಮಕ್ಕಳೂ ಹುಟ್ಟಿದರು. ಆದರೆ, 2004ರಲ್ಲಿ ಈತ ಡೈವೋರ್ಸ್ ಕೊಟ್ಟ. ಅಷ್ಟರಲ್ಲೇ ಈತ ಇಟಲಿಯ ರೂಪದರ್ಶಿಯೊಂದಿಗೆ ಸಂಬಂಧ ಇಟ್ಟುಕೊಂಡು, ಒಂದು ಮಗುವನ್ನೂ ಹುಟ್ಟಿಸಿದ್ದ,
ಆ ಮಗ ತನಗೆ ಹುಟ್ಟಿದ್ದಲ್ಲ ಅಂತ ಈತ ಹೇಳಿದಾಗ ಪ್ರಕರಣ ಇಟಲಿಯ ಕೋರ್ಟಿನ ಮೆಟ್ಟಿಲೇರಿತು. ಡಿಎನ್‌ಎ ಪರೀಕ್ಷೆಗೂ ನಿರಾಕರಿಸಿದ. ಆದರೆ, 2003ರಲ್ಲಿ ಆತ ತನ್ನ ಮಗನೇ ಎಂದು ಮರ ಡೋನಾ ಒಪ್ಪಿಕೊಂಡ. ಇದೇ ಹೊತ್ತಿನಲ್ಲಿ ಬ್ಯೂನಸ್ ಐರೀಸ್‌ನ ನೈಟ್ ಕ್ಲಬ್ಬಿನ ಸುಂದರಿಗೂ ಈತ ತಾಯಿಭಾಗ್ಯ ಕರುಣಿಸಿದ್ದ. ಅವಳಿಗೂ ಇಬ್ಬರು ಹೆಣ್ಮಕ್ಕಳು. ಇನ್ನು ಕ್ಯೂಬಾ ಮತ್ತು ಅರ್ಜೆಂಟಿನಾದ ಇನ್ನಿಬ್ಬರು ಮಹಿಳೆಯರು ಜೀವನಾಂಶ ನೀಡುವಂತೆ ಮರಡೋನಾ ವಿರುದ್ಧ ಕೋರ್ಟಿನ ಮೆಟ್ಟಿಲೇರಿದ್ದಾರೆ. ಈ ದೇವರಿಗೆ ಆ ಮೇಲಿನ ದೇವರೇ ಬಂದು ಬುದ್ಧಿ ಹೇಳಬೇಕೇನೋ...

ಈ ದೇವರು ಡ್ರಗ್ ಪ್ರಿಯ

ಮರಡೋನಾ ಹೇಳಿದಂತೆ ಚೆಂಡು ಕೇಳುತ್ತಿತ್ತು. ಆದರೆ, ಈತನ ಮಾತನ್ನು ಅವನ ಮನಸ್ಸೇ ಕೇಳುತ್ತಿರಲಿಲ್ಲ. ಈತ ಡ್ರಗ್ಸ್ ಪ್ರಿಯ. ಈತ ಇಲ್ಲಿಯವರೆಗೂ ಬದುಕಿದ್ದಾನೆ ಎಂದರೆ ಇದರ ಕ್ರೆಡಿಟ್ಟೆಲ್ಲ ವೈದ್ಯರಿಗೇ ಸಲ್ಲುತ್ತದೆ. 1983ರಲ್ಲಿ ನೆಪೋಲಿ ತಂಡದ ವರ ಆಡುವಾಗಲೇ ಈತ ಕೊಕೈನನ್ನು ಇಷ್ಟಪಟ್ಟು ಸೇವಿಸುತ್ತಿದ್ದ. 2000ದಲ್ಲಂತೂ ಈತ ಅಮಲೇರಿಸತ್ತ ಅಂತಲೇ ಆಗಿತ್ತು. ಐಸಿಯುನಲ್ಲಿ ವಾರಗಟ್ಟಲೆ ಅಡ್ಮಿಟ್ ಆಗಿದ್ದ. 2007ರಲ್ಲಿ ಅತೀವ ಆಲ್ಕೋಹಾಲ್ ಸೇವಿಸಿ ಆಸ್ಪತ್ರೆ ಸೇರಿದ. ಒಂದು ತಿಂಗಳಲ್ಲಿ ಇನ್ನೇನು ಸಾಯ್ತಾನೆ ಅಂತಲೇ ವದಂತಿ ಹರಡಿತ್ತು. ಎತ್ ಖಡಕ್ಕಾಗಿ ಹೇಳಿದ ಮೇಲೆ ಈಗ ಮಾದಕದ್ರವ್ಯ ಸೇವನೆ ಬಿಟ್ಟಿದ್ದಾನೆ. ಅದು ಎಷ್ಟು ದಿನದ ತನಕವೋ ಗೊತ್ತಿಲ್ಲ.

-ಮಲ್ಲಿಕಾರ್ಜುನ್ ಕರಿಯಪ್ಪನವರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT