ವಿಶೇಷ

ದನಗಾಹಿ ಕವಿಯಾದದ್ದು

ಸಮಯ ಕಳೆಯಲೆಂದು ಅವರು ಒಬ್ಬೊಬ್ಬರೇ ಹಾಡಬೇಕೆಂದು ಬಯಸಿ...

ಈ ಘಟನೆ ಕ್ರಿ.ಶ.657 ರಿಂದ 680ರ ನಡುವೆ ಇಂಗ್ಲೆಂಡ್ ದೇಶದಲ್ಲಿ ನಡೆದದ್ದು. ಇಂಗ್ಲೆಂಡಿನ ವೈಟ್‌ಬಿ ಕ್ರೈಸ್ತ ಮಠದಲ್ಲಿ ಒಂದು ಚಳಿಗಾಲದ ರಾತ್ರಿ ಅಲ್ಲಿನ ಕೆಲಸಗಾರರೆಲ್ಲ ಅಡುಗೆ ಮನೆಯಲ್ಲಿ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಸಮಯ ಕಳೆಯಲೆಂದು ಅವರು ಒಬ್ಬೊಬ್ಬರೇ ಹಾಡಬೇಕೆಂದು ಬಯಸಿ, ಒಬ್ಬೊಬ್ಬರೇ ಸರದಿ ಪ್ರಕಾರ ಹಾಡಲು ತೊಡಗಿದರು.

ಕಟ್ಟಿಗೆಯವನು, ನಂತರ ಅಡುಗೆಯವನು, ರೈತ, ಕಮ್ಮಾರ ಹೀಗೆ ಒಬ್ಬೊಬ್ಬರೇ ತಮಗೆ ಬಂದ ಹಾಗೆ ಹಾಡತೊಡಗಿದರು. ಅಲ್ಲಿಯೇ ಮೂಲೆಯಲ್ಲಿ ಕಾಡ್‌ಮನ್ ಎಂಬ ದನಗಾಹಿ ಮುದುಡಿ ಕುಳಿದ್ದ. ಅವನಿಗೆ ಹಾಡಲು ಬರುತ್ತಿರಲಿಲ್ಲ ಮತ್ತು ಅವರೆಲ್ಲ ಹಾಡುವುದು ಅವನಿಗೆ ಇಷ್ಟವಾಗಲೂ ಇಲ್ಲ. ಸಂಕೋಚ ಪ್ರವೃತ್ತಿಯವನಾದ ಅವನು ಹಾಡುವ ಸರದಿ ತನಗೆ ಬಂದರೆ ಹಾಡಬೇಕಾದೀತೆಂದು ತಿಳಿದು, ನಿಧಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿ, ಕತ್ತಲಲ್ಲಿ ಯಾರಿಗೂ ಕಾಣದಂತೆ ದನದ ಕೊಟ್ಟಿಗೆಗೆ ಹೋಗಿ ಅಲ್ಲಿಯೇ ಒಂದು ಮೂಲೆಯಲ್ಲಿ ಮಲಗಿಕೊಂಡ.

ಇತ್ತ ಹಾಡುತ್ತಿದ್ದ ಎಲ್ಲರ ಸರದಿ ಮುಗಿದು ಮುಂದೆ ಯಾರದ್ದೆಂದು ಯೋಚಿಸುವಾಗ ಅವರಿಗೆ ದನಗಾಹಿಯ ನೆನಪು ಬಂತು. ಅವನು ಕುಳಿತಿದ್ದೆಡೆ ಹೋಗಿ ನೋಡಿದಾಗ ಅವನಾಗಲೇ ಅಲ್ಲಿಂದ ತೆರಳಿದ್ದು ಕಂಡು ಬಂತು.

ದನದ ಕೊಟ್ಟಿಗೆಯಲ್ಲಿ ಕುಳಿತಿದ್ದ ಕಾಡ್‌ಮನ್ ಅಲ್ಲಿಯೇ ಮಲಗಿದ್ದ. ಸೊಗಸಾಗಿ ನಿದ್ದೆ ಸಹ ಬಂತು. ಕನಸಿನಲ್ಲಿ ಪ್ರಜ್ವಲಿಸುವ ಒಂದು ಆಕೃತಿ ಬಂದು ತನಗಾಗಿ ಹಾಡೊಂದನ್ನು ಹಾಡಬೇಕೆಂದು ಆದೇಶಿಸಿದಂತಾಯಿತು. ವಿಶ್ವದ ಸೃಷ್ಟಿಯ ಕುರಿತು ತನಗೆ ಗೊತ್ತಿಲ್ಲದಂತೆ ಹಾಡಲು ತೊಡಗಿದ.

ಬೆಳಗಾದರೂ ಅವನ ಕಂಠದಿಂದ ಹಾಡು ಹೊರಹೊಮ್ಮುತ್ತಲೇ ಇತ್ತು.  ಹಾಡಿನ ಮಾಧುರ್ಯ ಮತ್ತು ಆದರಲ್ಲಡಗಿರುವ ಸತ್ವ ಎಲ್ಲರಿಗೂ ಇಷ್ಟವಾಯಿತು. ಆದೊಂದು ಅತಿ ಸುಂದರವಾದ, ನೈಜವಾದ ಮತ್ತು ಮಧುರವಾದ ಗೀತೆಯಾದುದರಿಂದ ಅದನ್ನೊಬ್ಬ ಬರೆದಿಟ್ಟುಕೊಂಡ. ಅಲ್ಲಿಂದ ಆ ದನಗಾಹಿ ಅನೇಕ ಕವನಗಳನ್ನು ರಚಿಸಿ ಒಬ್ಬ ದೊಡ್ಡ ಕವಿಯೇ ಆದ.

ಹೀಗೆ ಇಂಗ್ಲೆಂಡಿನ ಮೊದಲ ಕವಿಯಾಗಿ ಕಾಡ್‌ಮನ್ ಹೊರಹೊಮ್ಮಿದ. ಈ ಘಟನೆಯನ್ನು ಇಂಗ್ಲೆಂಡ್ ದೇಶದ ಇತಿಹಾಸದ ಜನಕನೆಂದೇ ಹೆಸರಾದ ಬೀಡ್ ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!