ವಿಶೇಷ

ಪ್ರೇಮದ ಕೀಟಗಳು

ಪ್ರಿಯಕರ ಅಥವಾ ಪ್ರಿಯತಮೆಯಾಗಿ ಕಾಯುತ್ತಿರುವಾಗ ಇನ್ಯಾರಾದಾರೂ ನಮ್ಮ ತಲೆ ತಿನ್ನುತ್ತ ಕೂತುಕೊಂಡಿದ್ದರೆ ಕೆಟ್ಟ ಸಿಟ್ಟು ...

ಪ್ರಿಯಕರ ಅಥವಾ ಪ್ರಿಯತಮೆಯಾಗಿ ಕಾಯುತ್ತಿರುವಾಗ ಇನ್ಯಾರಾದಾರೂ ನಮ್ಮ ತಲೆ ತಿನ್ನುತ್ತ ಕೂತುಕೊಂಡಿದ್ದರೆ ಕೆಟ್ಟ ಸಿಟ್ಟು ಬಂದೇ ಬರುತ್ತದೆ. ಇದು ಇಂದಿನ ಕತೆಯಲ್ಲ, ಎಂದಿನಿಂದಲೂ ಹೀಗೇ. ಇಲ್ಲೊಬ್ಬಳು ನಾಯಿಕೆ ಇದ್ದಾಳೆ. ನೋಡಿ

ಆಯಾತೇ ದಯಿತೇ ಮನೋರಥಶತೈರ್ನಿತ್ವಾ ಕಥಂಚಿದ್ದಿನಂ
ವೈದಗದ್ದ್ಯಾಪಗಮಾಜ್ಜಡೇ ಪರಿಜನೇ ದೀರ್ಘಾ ಕಥಾಂ ಕುರ್ವತಿ
ದಷ್ಟಾಸ್ಮೀತ್ಯಭಿಧಾಯ ಸತ್ವರಪದಂ ವ್ಯಾಧೂಯ ಚೀನಾಂಶುಕಂ
ತನ್ವಂಗ್ಯಾ ರತಿಕಾತರೇಣ ಮನಸಾ ನೀತಃ ಪ್ರದೀಪ ಶಮಮ್


ವಿದೇಶಕ್ಕೆ ಹೋಗಿರುವ ಪ್ರಿಯತಮನು ಸದ್ಯದಲ್ಲೇ ಬರಲಿದ್ದಾನೆ. ಆತ ಪ್ರತೀಕ್ಷೆಯಲ್ಲಿ ತರುಣಿ ಇದ್ದಾಳೆ. ಹಗಲು ಹೇಗೋ ಹೊತ್ತು ಕಳೆಯುತ್ತಾಳೆ- ಪ್ರಿಯತಮನ ಆಗಮನಾನಂತರ ಅಪ್ಪುಗೆ ಸಿಹಿಮುತ್ತು ಇತ್ಯಾದಿ ತನ್ನ ಮನೋರಥಗಳು ಹೇಗೆ ಈಡೇರಬಹುದು ಎಂದೆಲ್ಲ ಊಹಿಸಿಕೊಳ್ಳುತ್ತ . ಆದರೆ ಸಂಜೆಯಾದ ಕೂಡಲೆ ಆಕೆಯ ಕೆಲವು ಸಖಿಯರು ಬಳಿ ಬಂದು ಬೋರ್ ಹೊಡೆಸುವ ನೀರಸ ಮಾತು ಕತೆಯಲ್ಲಿ ನಿರತರಾಗುತ್ತಾರೆ. ಪ್ರಿಯನನ್ನು ಕೂಡಲು ಕಾತರಳಾದ ಅಳು ಇದನ್ನೆಂತು ಸಹಿಸಿಯಾಳು? ಇರುವೆ, ಸೊಳ್ಳೆ ಇತ್ಯಾದಿ ಕ್ರಿಮಿಕೀಟಗಳು  ತನ್ನನ್ನು ಕಚ್ಚುತ್ತಿವೆ ಎಂದು ಉಡುಗೆಯನ್ನು ಒದರುತ್ತಾ ಒಳಹೋಗಿ, ದೀಪವನ್ನು ಆರಿಸುತ್ತಾಳೆ. ದೀಪ ಆರಿಸಿದ್ದು, ಕ್ರಿಮಿಕೀಟಗಳು ಬರದಿರಲೆಂದಲ್ಲ, ಸಖಿಯರು ತೊಲಗಲಿ ಎಂಬುದಕ್ಕಾಗಿ.

ನೆನಪಿಡಿ, ಪ್ರೇಮಿಗಳ ಸಮಾಗಮದ ಮಧ್ಯೆ ಮೂಗು ತೂರಿಸಿ ಅವರ ಸಮಯ ಹಾಳು ಮಾಡಿದರೆ ನೀವು ಕ್ರಿಮಿಕೀಟಕ್ಕಿಂತ ಕಡೆಯಾಗುತ್ತೀರಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ