ವಿಶೇಷ

ಚಾಕೊಲೆಟ್‍ನಲ್ಲಿ ಪುಟಿನ್

Sumana Upadhyaya

ಚಾಕೊಲೆಟ್ ಯಾರಿಗೆ ತಾನೆ ಇಷ್ಟವಿಲ್ಲ. ತಿನ್ನದೇ ಬಿಟ್ಟಾರೆಯೇ? ಆದರೆ ರಷ್ಯಾದ ನಿಕಿಟ  ಗ್ಯೂಸೆವ್ ಎಂಬ ಶಿಲ್ಪ ಕಲಾವಿದನಿಗೆ ಚಾಕೊಲೆಟ್ ಜೇಡಿಮಣ್ಣಿನ ಸಮಾನ. `ವೇದಾಂತಿ   ಹೇಳಿದನೂ ಹೊನ್ನೆಲ್ಲ ಮಣ್ಣು ಮಣ್ಣು...' ಎಂಬ ನಮ್ಮ ಜಿಎಸ್‍ಎಸ್‍ರ ಕವಿವಾಣಿಯನ್ನು ಈ  ಕಲಾವಿದ ಬೇರೆ ರೀತಿಯಲ್ಲಿ ಕೇಳಿಸಿಕೊಂಡಿರಬೇಕು.

ಹೀಗೆ ಈ ಕಲಾವಿದ ಚಾಕೊಲೆಟ್‍ನಲ್ಲಿ ಸೃಷ್ಟಿಸಿದ್ದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ವರನ್ನು! ಏಕೆಂದರೆ ಅವರು `ಸ್ವೀಟ್ ಪರ್ಸನ್' ಎಂದಿರಬಹುದು. ಆದರೆ ಈ ನಿಕಿಟ ಅವರು ಈ  ಹಿಂದೆ ಕೂಡ ಚಾಕೊಲೆಟ್ ಬಳಸಿ ಶಿಲ್ಪಗಳನ್ನು ಮಾಡಿದ್ದಿದೆ. ಅದು ಹದವಾಗಿದ್ದು ರಚನೆಗೆ  ಉತ್ತಮವೆನ್ನುವುದು ಈ ಕಲಾವಿದನ ಅಭಿಪ್ರಾಯ. ಪುಟಿನ್ ಅವರ ಈ ಶಿಲ್ಪ ಆಳೆತ್ತರವಿದ್ದು  ಅದಕ್ಕೆ 70 ಕೆಜಿ ಚಾಕೊಲೆಟ್ ಖರ್ಚಾಗಿದೆಯಂತೆ! ಶಿಲ್ಪವನ್ನು ಮುಟ್ಟಬಾರದು, ನೆಕ್ಕಬಾರದು,  ಕಚ್ಚಬಾರದಂತೆ! ಸುಮ್ಮನೆ ನೋಡಿ ಆಸ್ವಾದಿಸುವ ಟೇಸ್ಟ್ ಇದ್ದರೆ ಸಾಕಂತೆ! 

SCROLL FOR NEXT