ವಿಶೇಷ

ವಿವಿಧ ಭಾಷೆಯ ಬೈಬಲ್ ಗ್ರಂಥ ಸಂಗ್ರಹ ಈಕೆಯ ಧರ್ಮ!

Vishwanath S
ಮಂಡ್ಯ: ಎಂ.ಕಾಂ ಪದವೀಧರೆಯಾಗಿರುವ ಅಕ್ವಿಲ್ ಕೆರಿನ್ ಎಂಬುವರು ಕಳೆದ ಹಲವು ವರ್ಷಗಳಿಂದ ವಿವಿಧ ಭಾಷೆಗಳ ಬೈಬಲ್ ಗ್ರಂಥಗಳ ಸಂಗ್ರಹವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. 
ಮಂಡ್ಯದ ಕ್ರಿಶ್ಚಿಯನ್ ಕಾಲೋನಿ ನಿವಾಸಿಯಾಗಿರುವ ಅಕ್ವಿಲ್ ಕೆರಿನ್ ಗೆ ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ಮೇಲೆ ಎಲ್ಲಿಲ್ಲದ ಪ್ರೀತಿ. ವಿದೇಶಿ ಭಾಷೆಗಳಲ್ಲಿ ಮುದ್ರಣಗೊಂಡಿರುವ ಶತಮಾನಗಳ ಇತಿಹಾಸ ಇರುವ ಬೈಬಲ್ ಗಳನ್ನು ಸಂಗ್ರಹ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. 
28 ಭಾಷೆಗಳಲ್ಲಿ: ಈವರೆಗೆ ಅಕ್ವಿಲ್ ಕೆರಿನ್, 8 ವಿದೇಶಿ ಹಾಗೂ ಭಾರತದ 28 ಭಾಷೆಗಳಲ್ಲಿ ಮುದ್ರಣಗೊಂಡಿರುವ ಬೈಬಲ್ ನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಅಂಧರು ಶ್ರವಣದ ಮೂಲಕ ತಿಳಿದುಕೊಳ್ಳಲು ಸಹಕಾರಿಯಾಗುವ ಟಾಕಿಂಗ್ ಬೈಬಲ್, ಭೂತ ಗನ್ನಡಿ ಸಹಾಯದಿಂದ ಓದುವ ಗ್ರಾಂನಿಂದ ಹಿಡಿದು ಕೆಜಿವರೆಗೆ ಭಾರವುಳ್ಳ ಬೈಬಲ್, ಕೀ ಬಂಚ್ ನಲ್ಲಿ ಇಟ್ಟುಕೊಳ್ಳಬಹುದಾದ ಪುಟ್ಟ ಗಾತ್ರದ ಬೈಬಲ್ ಇವರಲ್ಲಿದೆ. 
ಹೀಬ್ರೂ, ಗ್ರೀಕ್ ಪೋರ್ಚ್ಗೀಸ್, ರಷ್ಯನ್, ಅರೇಬಿಕ್, ಉರ್ದು, ನೇಪಾಳ(ವಿದೇಶ ಭಾಷೆ) ಹಾಗೂ ಕನ್ನಡ, ಹಿಂದಿ, ತೆಲುಗು, ತಮಿಳು, ಬಂಗಾಳಿ, ಪಂಜಾಬಿ, ಮರಾಠಿ, ತುಳು, ಮಲೆಯಾಳಂ ಸೇರಿದಂತೆ ಭಾರತದ 28 ಭಾಷೆಗಳಲ್ಲಿ ಮುದ್ರಿತವಾಗಿರುವ ಬೈಬಲ್ ಗಳನ್ನು ಸಂಗ್ರಹಿಸಿ ಸಂರಕ್ಷಿಸಿದ್ದಾರೆ. 
SCROLL FOR NEXT