ವಿಶೇಷ

'ಊರು ಭಂಗ' ಕೃತಿ ಬಿಡುಗಡೆ, ಬರೆದ ಮೇಲೆ ಎಲ್ಲವೂ ಸ್ವ-ಅನುಭವವೇ ಎಂದ ವಿವೇಕ್

Guruprasad Narayana

ಬೆಂಗಳೂರು: ಕನ್ನಡದ ಪ್ರಮುಖ ಕಥೆಗಾರ ವಿವೇಕ್ ಶಾನಭಾಗ್ ಅವರ ಮೂರನೆ ಕಾದಂಬರಿ 'ಊರು ಭಂಗ' ಕಾದಂಬರಿಯನ್ನು ಕಥೆಗಾರ, ಗೀತ ರಚನಕಾರ ಜಯಂತ ಕಾಯ್ಕಿಣಿ ನಗರದ ಇಂಡಿಯನ್ ಇನ್ಷ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ಅನಾವರಣಗೊಳಿಸಿದರು.


ನಂತರ ನಡೆದ ಜಯಂತ ಕಾಯ್ಕಿಣಿ ಅವರೊಂದಿಗಿನ ಸಂವಾದದಲ್ಲಿ, ವಿವೇಕ್ ಶಾನಭಾಗ್ ತಮ್ಮ ಬರವಣಿಗೆಯ ಗುಟ್ಟುಗಳನ್ನು ಬಿಚ್ಚಿಟ್ಟರು. ತಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಬರೆಯುವ ಸಂಗತಿಗಳು ತಮ್ಮ ಅನುಭವದ ಭಾಗವೇ ಎಂಬ ಪ್ರಶ್ನೆಗೆ, ತಾವು ಕಥೆ ಅಥವಾ ಕಾದಂಬರಿಯಲ್ಲಿ ಬರೆದ ಮೇಲೆ ಎಲ್ಲವೂ ನನ್ನ ಅನುಭವಕ್ಕೆ ಬಂದಂತೆಯೇ ಎಂಬ ಜಾಣ್ಮೆಯ ಉತ್ತರ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿ ಕಾದಂಬರಿ ಮತ್ತು ಕಥೆ ಬರೆಯುವ ಕ್ರಿಯೆಯಲ್ಲಿನ ವ್ಯತ್ಯಾಸಗಳನ್ನು ವಿವರಿಸಿದ ವಿವೇಕ್, ಕಥೆಯಲ್ಲಿ ಹೇಳಲಾಗದ ಎಷ್ಟೋ ಸಂಗತಿಗಳನ್ನು ಕಾದಂಬರಿಗಳಲ್ಲಿ ಹೇಳಬಹುದು ಎಂದರು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಉದಾಹರಣೆ ತೆಗೆದುಕೊಂಡು, ಕಾಡು ಒಂದು ಪಾತ್ರವಾಗಬಹುದಾದರೆ ಅದು ಕಾದಂಬರಿಯಲ್ಲಿ ಮಾತ್ರವೇ, ಕಥೆಯಲ್ಲಿ ಅದು ಅಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕವಯತ್ರಿ ಪ್ರತಿಭಾ ನಂದಕುಮಾರ್ ಕಾದಂಬರಿಯ ಆಯ್ದ ಭಾಗಗಳನ್ನು ವಾಚಿಸಿದರು.

SCROLL FOR NEXT