ವಿಶೇಷ

೨೫ ಸಾವಿರ ಬ್ರಿಟಿಶ್ ವಿದ್ಯಾರ್ಥಿಗಳಿಗೆ ಭಾರತದ ವಿವಿಗಳಲ್ಲಿ ವಿದ್ಯಾಭ್ಯಾಸ

Guruprasad Narayana

ಪಾಟ್ನಾ: ಬಾರತ-ಬ್ರಿಟಿಶ್ ನಡುವೆ ಶೈಕ್ಷಣಿಕ ದ್ವಿಪಕ್ಷೀಯ ಸಂಬಂಧ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ೨೫ ಸಾವಿರ ಬ್ರಿಟಿಶ್ ವಿದ್ಯಾರ್ಥಿಗಳು ಮುಂದಿನ ಐದು ವರ್ಷಗಳಲ್ಲಿ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಲಿದ್ದಾರೆ ಎಂದು ಬ್ರಿಟಿಶ್ ರಾಯಭಾರ ಕಛೇರಿಯ ಹಿರಿಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಯು ಕೆ ಪೀಳಿಗೆ- ಎಂಬ ಯೋಜನೆಯನ್ನು ಸಿದ್ಧಪಡಿಸಿರುವ ಬ್ರಿಟಿಶ್ ರಾಯಭಾರ ಕಛೇರಿ ಮುಂದಿನ ಐದು ವರ್ಷಗಳಲ್ಲಿ ೨೫ ಸಾವಿರ ಬ್ರಿಟಿಶ್ ವಿದ್ಯಾರ್ಥಿಗಳು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಹಾಯ ಮಾಡಲಿದೆ ಎಂದು ಬ್ರಿಟಿಶ್ ರಾಯಭಾರ ಕಛೇರಿಯ ಹಿರಿಯ ಅಧಿಕಾರಿ ಆಂಡ್ರ್ಯೂ ಸೋಪರ್ ಹೇಳಿದ್ದಾರೆ.

ಯು ಕೆ ಯಲ್ಲಿಯೇ ಒಳ್ಳೆಯ ಶೈಕ್ಷಣಿಕ ಸಂಸ್ಥೆಗಳಿದ್ದು, ಅಲ್ಲಿನ ವಿದ್ಯಾರ್ಥಿಗಳು ಇಲ್ಲಿ ಓದುವುದರಿಂದ ಅವರಿಗಾಗುವ ಉಪಯೋಗವೇನು ಎಂಬ ಪ್ರಶ್ನೆಗೆ, ಭಾರತದಲ್ಲೂ ಒಳ್ಳೆಯ ಶೈಕ್ಷಣಿಕ ಸಂಸ್ಥೆಗಳಿದ್ದು, ನಮ್ಮ ದೇಶದ ವಿದ್ಯಾರ್ಥಿಗಳ ಆಯ್ಕೆಯ ವಿಷಯಗಳಲ್ಲಿ ಒಳ್ಳೆಯ ಸಾಧನೆ ಮಾಡುವ ಅವಕಾಶವಿದೆ ಎಂದಿದ್ದಾರೆ.

"ಶಿಕ್ಷಣ, ಭಾರತ ಮತ್ತು ಯು ಕೆ ಯ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಸುವುದರಲ್ಲಿ ಮುಖ್ಯಪಾತ್ರ ವಹಿಸಲಿದೆ" ಎಂದಿದ್ದಾರೆ. ಹಾಗೆಯೆ ಭಾರತೀಯ ವಿದ್ಯಾರ್ಥಿಗಳು ಯು ಕೆ ಯಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಕಲಿಯಲು ಅನುವುಮಾಡಿಕೊಡಲಾಗುತ್ತದೆ ಎಂದಿದ್ದಾರೆ. ಇಂಗ್ಲೆಂಡ್ ನಲ್ಲಿ ವಿಶ್ವದ ಅತ್ಯುತ್ತಮ ೬ ವಿಶ್ವವಿದ್ಯಾಲಯಗಳಲ್ಲಿ ೪ ವಿಶ್ವವಿದ್ಯಾಲಯಗಳಿದ್ದು, ಹಾಗೆಯೇ ವಿಶ್ವದ ಅತ್ಯುತ್ತಮ 200 ಶೈಕ್ಷಣಿಕ ಸಂಸ್ಥೆಗಳಲ್ಲಿ ೩೦ ಸಂಸ್ಥೆಗಳನ್ನು ಇಂಗ್ಲೆಂಡ್ ಹೊಂದಿದೆ.

SCROLL FOR NEXT