ದಯಾನಿಧಿ ಮಾರನ್ (ಸಂಗ್ರಹ ಚಿತ್ರ) 
ವಿಶೇಷ

323 ಅಲ್ಲ, ಮಾರನ್ ಸಹೋದರರು ಅಕ್ರಮವಾಗಿ ಪಡೆದಿದ್ದು 764 ಹೈಸ್ಪೀಡ್ ಸಂಪರ್ಕ!

ಮಾರನ್ ಸಹೋದರರು ಬಿಎಸ್‌ಎನ್‌ಎಲ್ ಲೈನ್‌ಗಳನ್ನು ಅಕ್ರಮವಾಗಿ ಬಳಸಿಕೊಂಡ ಹಗರಣದ ಸಂಬಂಧ ಎರಡು ಪ್ರಮುಖ ತಪ್ಪು ಗ್ರಹಿಕೆಗಳು ಸಂಭವಿಸಿವೆ. ಮೊದಲನೆಯದು....

ದೂರಸಂಪರ್ಕ ಖಾತೆ ಮಾಜಿ ಸಚಿವ ದಯಾನಿಧಿ ಮಾರನ್ ಹಾಗೂ ಸನ್ ನೆಟ್ವರ್ಕ್ ನ ಮಾಲೀಕ ಕಲಾನಿಧಿ ಮಾರನ್  ಚೆನ್ನೈನ ತಮ್ಮ ಬೋಟ್ ಹೌಸ್ ಮನೆಯಲ್ಲಿ ಅಕ್ರಮವಾಗಿ ಬಿಎಸ್ಎನ್ಎಲ್ ಸಂಸ್ಥೆಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡ ಹಗರಣವನ್ನು ಇಂಡಿಯನ್ ಎಕ್ಸ್ ಪ್ರೆಸ್ ಬಯಲಿಗೆಳೆದು 4 ವರ್ಷಗಳಾಗಿವೆ.

2011 ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಈ ಹಗರಣವನ್ನು ಬಯಲಿಗೆಳೆದಿದ್ದು, ಹಗರಣದ ಸಂಬಂಧ ಎರಡು ಪ್ರಮುಖ ತಪ್ಪು ಗ್ರಹಿಕೆಗಳು ಸಂಭವಿಸಿವೆ. ಮೊದಲನೆಯದು ಈ ಹಿಂದಿನ ವರದಿಯಂತೆ ಬಿಎಸ್ಎನ್ಎಲ್ ನಿಂದ ಅಕ್ರಮವಾಗಿ ಪಡೆದಿದ್ದು 323 ಹೈಸ್ಪೀಡ್ ಸಂಪರ್ಕಗಳನ್ನಲ್ಲ ಎಂಬುದು. ವಾಸ್ತವದಲ್ಲಿ ಮಾರನ್ ಸಹೋದರರು ಅಕ್ರಮವಾಗಿ 764  ಹೈ ಡೇಟಾ ಕ್ಯಾಪಾಸಿಟ್ ಗಳನ್ನು ಪಡೆದಿದ್ದರು! ಎರಡನೆಯದ್ದೇನೆಂದರೆ ಅಕ್ರಮ ಸಂಪರ್ಕಗಳು ಕಾರ್ಯನಿರ್ವಹಿಸಿದ ಅವಧಿಯನ್ನು 6 ತಿಂಗಳು ಎಂದು ಹೇಳಲಾಗಿದೆ. ಆದರೆ ಅಕ್ರಮವಾಗಿ ಪಡೆದಿದ್ದ ಹೈಸ್ಪೀಡ್ ಸಂಪರ್ಕಗಳು ಕಾರ್ಯನಿರ್ವಹಿಸಿದ್ದು 36 ತಿಂಗಳು ಅಂದರೆ ಜುಲೈ 2004 ರಿಂದ 2007 ವರೆಗೆ.    
ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಸತ್ಯವಾಗಿದ್ದ ಅಂದಿನ ಈ ಎರಡು ಎಣಿಕೆಗಳ ಆಧಾರದಲ್ಲೇ ವಂಚನೆಯ ಪ್ರಾಬಲ್ಯವನ್ನು ಅಂದಾಜಿಸಲಾಗಿತ್ತು. ಆದರೆ ಹಗರಣದ ಬಗ್ಗೆ ನಡೆದ ತನಿಖೆ ವಾಸ್ತವವಾಗಿ ನಡೆದಿದ್ದ ವಂಚನೆಯ ಪ್ರಮಾಣವನ್ನು ಕುಗ್ಗಿಸಿತ್ತು. 2011 ರಲ್ಲಿ ಹೊರಬಂದ ವಂಚನೆಯ ಪ್ರಮಾಣಕ್ಕಿಂತಲೂ ವಾಸ್ತವದಲ್ಲಿ ನಡೆದಿರುವ ವಂಚನೆಯ ಪ್ರಮಾಣ ಬೃಹದಾಕಾರವಾಗಿದೆ.    

ಹಗರಣ ಬಯಲಿಗೆ ಬಂದು 4 ವರ್ಷಗಳೇ ಕಳೆದರು ಇನ್ನೂ ವಂಚನೆಯ ಪ್ರಮಾಣವನ್ನು ಕುಗ್ಗಿಸುವ ಯತ್ನ ನಡೆಯುತ್ತಲಿದ್ದು, ಹಗರಣದಿಂದ ಉಂಟಾಗಿದ್ದ ನಷ್ಟ ಕೇವಲ 1 .8 ಕೋಟಿಯಷ್ಟು ಎಂದು ಹೇಳಲಾಗುತ್ತಿದೆ. ಬಿಎಸ್ಎನ್ಎಲ್ ಸಂಸ್ಥೆಯ ಸಂಪನ್ಮೂಲಗಳನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ಬಳಸಲಾಗಿತ್ತು ಎಂಬ ಮಾರನ್ ಸಹೋದರರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ವಂಚನೆಯಿಂದ ಉಂಟಾದ ನಷ್ಟದ  ಪ್ರಮಾಣವನ್ನು ಕಡಿಮೆಗೊಳಿಸುವ ಯತ್ನ ನಡೆದಿದೆ. ಮಾರನ್ ಅವರು ತಮ್ಮ ಒಡೆತನದ ಸನ್ ಟಿವಿಯ ಕಾರ್ಯಕ್ರಮಗಳ ವೇಗದ ಪ್ರಸಾರಕ್ಕಾಗಿ ಬಿಎಸ್ಎನ್ಎಲ್ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡು ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿರುವುದಕ್ಕೆ ಮಾರನ್ ನಿವಾಸದಿಂದ  ಸನ್ ಟಿವಿ ಕಚೇರಿವರೆಗೆ 764 ಹೈಸ್ಪೀಡ್ ಸಂಪರ್ಕ ಸಾಧಿಸಲು ಹಾಕಲಾಗಿರುವ ನೆಲದಡಿಯಲ್ಲಿ ಕೇಬಲ್ ಸಾಕ್ಷಿಯಾಗಿದೆ.

ವಾಣಿಜ್ಯ ದೃಷ್ಟಿಯಿಂದ ನೋಡಿದರೆ ಇದರಿಂದಾಗಿ ಉಂಟಾಗಿರುವ ನಷ್ಟ ನೂರಾರು ಕೋಟಿಗಳಷ್ಟಾಗುತ್ತದೆ. ಮಾರನ್ ಸಹೋದರರ ಹೇಳಿಕೆಯಂತೆ ಒಂದು ವೇಳೆ ಅದನ್ನು ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಿದ್ದರೆ ಅದು ಅಪರಾಧ ಹೇಗಾಗುತ್ತದೆ? ಹಾಗೆ ಬಳಸಿದ್ದೆ ಅದ್ದಲ್ಲಿ ಮಾರನ್ ಸಹೋದರರು ಸುಲಭವಾಗಿ ಆರೋಪ ಮುಕ್ತರಾಗುತ್ತಾರೆ. ಆಡಳಿತಾತ್ಮಕ ಉದ್ದೇಶಕ್ಕೆ ಎಂದಾದ ಮೇಲೆ ಚೆನ್ನೈ ಟೆಲಿಫೋನ್ಸ್ ನ ಪ್ರಧಾನ ವ್ಯವಸ್ಥಾಪಕರ ಹೆಸರಿನಲ್ಲಿ 764 ಹೈಸ್ಪೀಡ್ ದೂರವಾಣಿ ಸಂಪರ್ಕಗಳನ್ನು ಬಿಎಸ್ಎನ್ ಎಲ್ ಕಚೇರಿಗೆ ಪಡೆಯುವ ಬದಲು ಮಾರನ್ ನಿವಾಸಕ್ಕೇಕೆ ಪಡೆಯಲಾಯಿತು?
ಆಡಳಿತಾತ್ಮಕ ಉದ್ದೇಶ ಎಂದಾದ ಮೇಲೆ ರಹಸ್ಯ ಮತ್ತು ದಾಖಲೆ ರಹಿತ ದೂರವಾಣಿ ವ್ಯವಸ್ಥೆಯ ಅವಶ್ಯಕತೆಯಾದರು ಏನು? ಸತ್ಯ ಏನೆಂದರೆ ಆಡಳಿತಾತ್ಮಕ ಉದ್ದೇಶದ ಹೆಸರಿನಲ್ಲಿ ಮಾರನ್ ಸಹೋದರರು 764  ಹೈಸ್ಪೀಡ್ ಲೈನ್ ಗಳನ್ನು ಕಳ್ಳತನದಿಂದ ಉಪಯೋಗಿಸಿಕೊಂಡಿದ್ದರು. ಆಡಳಿತಾತ್ಮಕ ಉದ್ದೇಶಗಳಿಗಾಗಿ ಹೈಸ್ಪೀಡ್ ಲೈನ್ ಗಳನ್ನು ಪಡೆಯುವುದಕ್ಕಾದರೂ 1 .8 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಇದೇ ಮೊತ್ತವನ್ನು 'ನಷ್ಟ' ಎಂದು ನಂಬಿಸಲಾಗುತ್ತಿದೆ. ಆದರೆ ಮೂರ್ಖರು ಮಾತ್ರ  764 ಹೈಸ್ಪೀಡ್ ಲೈನ್ ಗಳನ್ನು ಆಡಳಿತಾತ್ಮಕ ಉದ್ದೇಶಕ್ಕೆ ಬಳಸಿರುವುದನ್ನು ಒಪ್ಪಲು ಸಾಧ್ಯ. ಮಾರನ್ ಸಹೋದರರು  ಬಿಎಸ್ಎನ್ಎಲ್ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಭೌತಿಕ ಪುರಾವೆಗಳು ಲಭ್ಯವಿದ್ದು ಅಪರಾಧ, ಸಂಚು, ಮೋಸ, ವಿಶ್ವಾಸ ಧ್ರೋಹ ಹಾಗೂ ಸನ್ ಟಿವಿ ಸಂಸ್ಥೆಗೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಲಾಗಿದೆ.    

 ಸನ್ ಸಂಸ್ಥೆಯ ವಾಣಿಜ್ಯೋದ್ದೇಶಗಳಿಗಾಗಿ ಬಿಎಸ್ಎನ್ಎಲ್ ಸಂಸ್ಥೆಯೇ 764 ಹೈಸ್ಪೀಡ್ ಲೈನ್ ಗಳನ್ನು ನೀಡಿದೆ ಎಂಬುದಾದರೆ ನಷ್ಟ ಎಂದು ಯಾವುದನ್ನು ಹೇಳಲು ಸಾಧ್ಯ? ಪ್ರತಿ ಸಂಪರ್ಕಕ್ಕೆ ಸನ್ ಟಿವಿ ಸಂಸ್ಥೆ ಬಿಎಸ್ಎನ್ಎಲ್ ಗೆ ವಾರ್ಷಿಕವಾಗಿ 10 ಲಕ್ಷ ರೂಪಾಯಿ ಬಾಡಿಗೆ ನೀಡಬೇಕಿತ್ತು. ಹೀಗೆ ಬಾಡಿಗೆ ಪಾವತಿಯಾದರೂ ಮಾರನ್ ಸಹೋದರರು ಪದೆದಿರುವ ಲೈನ್ ಗಳ ಸಂಖ್ಯೆಗೆ ವಾರ್ಷಿಕವಾಗಿ ಪಾವತಿಸಬೇಕಾದ ಮೊತ್ತ 76 .4 ಕೋಟಿಯಾಗುತ್ತದೆ. ಮೂರು ವರ್ಷಗಳಿಗೆ ಇದರ ಮೊತ್ತ 229 .2 ಕೋಟಿ ರೂಪಾಯಿಯಾಗುತ್ತದೆ. ಈ ಆಧಾರದಲ್ಲಿ ಹಗರಣಾದಿಂದ ಉಂಟಾಗಿರುವ ನಷ್ಟ ನೂರಾರು ಕೋಟಿಗಳಷ್ಟಾಗುತ್ತದೆ. ಅಲ್ಲದೇ ಇದೊಂದು ಪ್ರತ್ಯೇಕ ದೂರವಾಣಿ ವಿನಿಮಯ ಕೇಂದ್ರವಾಗಿದ್ದ ಕಾರಣದಿಂದ ತಮಗೆ ಬೇಕಾದಷ್ಟು ಜನರಿಗೆ ಉಚಿತ ಕರೆ ಸೌಲಭ್ಯವನ್ನು ನೀಡಿರುವ ಸಾಧ್ಯತೆ ಇದ್ದು ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ್ದ ತನಿಖೆಯಲ್ಲಿ ಸನ್ ನೆಟ್ವರ್ಕ್ ನ ಅನೇಕ ಅಧಿಕಾರಿಗಳು ಈ ಕದ್ದ ಸಂಪರ್ಕಗಳನ್ನು ಬಳಸುತ್ತಿದ್ದರು.  ಈ ಹಗರಣ  ಕಾನೂನು ವಂಚನೆ ಅಪರಾಧ ಮಾತ್ರವಲ್ಲದೇ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘನೆ ಅಪರಾಧವೂ ಆಗಿದೆ.  

ಅಂದಹಾಗೆ ಹಗರಣ ನಡೆದ ಸಂದರ್ಭದಲ್ಲಿ ಚೆನ್ನೈ ಟೆಲಿಫೋನ್ಸ್ ಗೆ ಸಿಜಿಎಂ ಆಗಿದ್ದವರು ಎಂಪಿ ವೇಲುಸ್ವಾಮಿ.  ಎಲ್. ಟಿ.ಟಿ.ಇ ಭಯೋತ್ಪಾದಕರಿಗೆ ಆಶ್ರಯ ನೀಡಿ ಜೈಲು ಪಾಲಾಗಿದ್ದ ಡಿಎಂಕೆ ಸಚಿವನ ಸೋದರಸಂಬಂಧಿ  ಎಂಪಿ ವೇಲುಸ್ವಾಮಿ ಪತ್ನಿ, ಸೇವಾಹಿರಿತನದ ಆಧಾರದಲ್ಲಿ ಸಿಜಿಎಂ ಆಗಬೇಕಿದ್ದ ಬಿಎಸ್ಎನ್ಎಲ್ ನೌಕರನನ್ನು ಬದಿಗಿರಿಸಿ ದಯಾನಿಧಿ ಮಾರನ್ ವೇಲುಸ್ವಾಮಿ ಅವರನ್ನು ಸಿಜಿಎಂ ಮಾಡಿದ್ದರು. ದೂರವಾಣಿ ಸಂಪರ್ಕಗಳನ್ನು ರಾಷ್ಟ್ರವಿರೋಧಿ ಚಟುವಟಿಕೆಗೆ ಬಳಸಿಕೊಳ್ಳಲಾಗಿದೆಯೋ ಇಲ್ಲವೋ ಎಂದು ಖಚಿತಪಡಿಸ್ಕೊಳ್ಳಲು ವೇಲುಸ್ವಾಮಿ ನೇಮಕದ ಬಗ್ಗೆ ತನಿಖೆ ನಡೆಯಬೇಡವೆ? ವೇಲುಸ್ವಾಮಿ ಚೆನ್ನೈ ಟೆಲಿಫೋನ್ಸ್ ನ ಸಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲೇ (2004 -2007) ಅವಧಿಯಲ್ಲಿ ಎಲ್. ಟಿ.ಟಿ.ಇ ವಿರುದ್ಧ ಯುದ್ಧ  ತಾರಕಕ್ಕೇರಿತ್ತು. ಎಲ್. ಟಿ.ಟಿ.ಇ ಉಗ್ರರಿಗೆ ಆಶ್ರಯ ಕೊಟ್ಟ ಸಂಬಂಧಿಯಾಗಿದ್ದ  ಜರ್ನಲ್ ಮ್ಯಾನೇಜರ್ ಹೆಸರಲ್ಲಿ  ಸನ್ ನೆಟ್ವರ್ಕ್ ಅಕ್ರಮವಾಗಿ ಬಳಸಿಕೊಂಡಿದ್ದ 764 ಹೈಸ್ಪೀಡ್ ಲೈನ್ ಗಳ ಹಗರಣದೊಂದಿಗೆ ತಳುಕು ಹಾಕಿಕೊಂಡಿದೆ ಈ ಬಗ್ಗೆ ಭದ್ರತಾ ತನಿಖೆ ಅಗತ್ಯವಲ್ಲವೇ?

ಮೂಲ ಲೇಖನ: ಎಸ್ ಗುರುಮೂರ್ತಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT