ವಿಶೇಷ

ಸೂರ್ಯನನ್ನೇ ಮಾರುವ ಮಹಿಳೆ; ನಿರಾಕರಿಸಿದ್ದಕ್ಕೆ ಈಬೇ ಮೇಲೆ ದ್ಯಾವೆ

Guruprasad Narayana

ಲಂಡನ್: ಸೂರ್ಯನ ಮೇಲೆ ನಿವೇಶನಗಳನ್ನು ಮಾರಲು ಈಬೇ ಅಂತರ್ಜಾಲ ಮಾರಾಟ ತಾಣ ನಿಷೇಧಿಸಿದ್ದಕ್ಕೆ, ೫೪ ವರ್ಷದ ಸ್ಪ್ಯಾನಿಶ್ ಮಹಿಳೆ ಅಂತರ್ಜಾಲ ಈ-ಕಾಮರ್ಸ್ ದೈತ್ಯನ ಮೇಲೆ ಕಾನೂನು ದ್ಯಾವೆ ಹೂಡಿದ್ದಾಳೆ. ಸ್ಪೇನ್ ನ ವಿಗೋದ ಮರಿಯಾ ದುರಾನ್ ಎಂಬಾಕೆ ೨೦೧೦ ರಿಂದಲೂ ಸೂರ್ಯ ತನ್ನದು ಎಂದು ಹಕ್ಕು ಸಾಧಿಸುತ್ತಿದ್ದು, ಸೌರಶಕ್ತಿ ಬಳಕೆದಾರರ ಮೇಲೆ ಕೂಡ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾ ಬಂದಿದ್ದಾಳೆ.

ಈಬೇ ನಲ್ಲಿ ಖಾತೆ ತೆರೆಯುವುದಕ್ಕೂ ಮೊದಲು ಸ್ಪೇನ್ ನ ನೋಟರಿ ಕಚೇರಿಯಲ್ಲಿ 'ಸೂರ್ಯ'ನನ್ನು ತನ್ನ ಹೆಸರಿಗೆ ನೊಂದಾಯಿಸಿಕೊಂಡಿರುವ ಮಹಿಳೆ ಒಂದು ಚದರ ಮೀಟರ್ ಸೂರ್ಯನ ಜಾಗವನ್ನು ೧ ಯುರೋಗೆ ಮಾರಲು ಮುಂದಾಗಿದ್ದಳು. ಆದರೆ ಎರಡು ವರ್ಷದ ನಂತರ ಈ ಖಾತೆಯನ್ನು ಈಬೇ ನಿರ್ಭಂಧಿಸಿತ್ತು.

ಈಬೇ ಮೇಲೆ ದ್ಯಾವೆ ಹೂಡುವುದಾಗಿ ಬೆದರಿಕ್ಕೆ ಹಾಕಿದ್ದ ಮಹಿಳೆಯ ಹಕ್ಕನ್ನು ಈಗ ಸ್ಪ್ಯಾನಿಶ್ ಕೋರ್ಟ್ ಮನ್ನಿಸಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ. ಇದರ ವಿಚಾರಣೆ ಮುಂದಿನ ತಿಂಗಳು ಜರುಗಲಿದ್ದು, ತನಗೆ ಸಂದಾಯವಾಗಬೇಕಿದ್ದ ೭೫೦೦ ಪೌಂಡುಗಳನ್ನು ದುರಾನ್ ಬೇಡಿಕೆಯಿಟ್ಟಿದ್ದಾರೆ.

ನ್ಯಾಯಾಲಯದ ಹೊರಗೆ ಈ ವ್ಯಾಜ್ಯವನ್ನು ಬಗೆಹರಿಕೊಳ್ಳುವ ಈಬೇ ಬೇಡಿಕೆಯನ್ನು ಮಹಿಳೆ ತಿರಸ್ಕರಿಸಿದ್ದು, ತನ್ನ ಸ್ವಂತ ಅಂತರ್ಜಾಲ ತಾಣದಲ್ಲಿ ಸೂರ್ಯನನ್ನು ಮಾರುವುದನ್ನು ಮುಡುವರೆಸಿದ್ದಾಳೆ.

ಸೂರ್ಯನ ಮೇಲೆ ಯಾವ ದೇಶವೂ ಹಕ್ಕೊತ್ತಾಯ ಮಂಡಿಸುವಂತಿಲ್ಲ ಎಂಬ ಅಂತರಾಷ್ಟ್ರೀಯ ಒಪ್ಪಂದವಿದೆ ಆದರೆ ಇದಕ್ಕೆ ವ್ಯಕ್ತಿಗಳು ಬದ್ಧರಾಗಿರಬೇಕಿಲ್ಲ ಎಂದಿದ್ದಾರೆ ದುರಾನ್!

SCROLL FOR NEXT