ವಿಶೇಷ

೮೦೦ ವರ್ಷದ ಚೈನಾ ಬುದ್ಧ ಪ್ರತಿಮೆಗೆ ಜೀರ್ಣೋದ್ಧಾರ

Guruprasad Narayana

ಬೀಜಿಂಗ್: ಏಳು ವರ್ಷಗಳ ಕೆಲಸ ಬಳಿಕ ೮೦೦ ವರ್ಷಗಳ ಪ್ರಾಚೀನತೆಯ ಬುದ್ಧ ಪ್ರತಿಮೆಯ ಜೀರ್ಣೋದ್ಧಾರ ಕಾರ್ಯವನ್ನು ಚೈನಾ ಅಧಿಕಾರಿಗಳು ಪೂರ್ಣಗೊಳಿಸಿದ್ದರೆ.

ಚಾಂಗ್ಕ್ಬಿಂಗ್ ಮುನ್ಸ್ಲಿಪಾಲಿಟಿ ಪ್ರಾಂತದ ದಾಜುವಿನಲ್ಲಿ ಈಗ ೧೦೦೦ ಕೈಗಳಿರುವ 'ಕ್ವಿನ್ಶೋ ಗ್ವಾನ್ಯಿನ್' ಮರುಹುಟ್ಟು ಪಡೆದಿರುವುದನ್ನು ನೋಡಬಹುದಾಗಿದೆ.

ಒಂದು ದಶಲಕ್ಷ ಚಿನ್ನದ ಲೇಪನಗಳನ್ನು ಬಳಸಿ ೮೩೦ ಕೈಗಳನ್ನು ಸರಿಪಡಿಸಿದ್ದಾರೆ ಮತ್ತು ಮೂರ್ತಿಯನ್ನು ಸಂಪೂರ್ಣ ಸ್ವಚ್ಚಗೊಳಿಸಲಾಗಿದೆ. ೨೦೦೮ರಲ್ಲಿ ಪ್ರಾರಂಭವಾದ ಈ ಜೀರ್ಣೋದ್ಧಾರ ಕಾರ್ಯಕ್ಕೆ ಸುಮಾರು ೧೦ ಮಿಲಿಯನ್ ಡಾಲರ್ಗಳನ್ನು ವ್ಯಯಿಸಲಾಗಿದೆ.

ಇತಿಹಾಸದಲ್ಲಿ ನಡೆದಿರುವ ಅತಿ ದೊಡ್ಡ ಜೀರ್ಣೋದ್ಧಾರ ಕಾರ್ಯಗಳಲ್ಲಿ ಇದು ನಾಲ್ಕನೆಯದು ಎಂದು ಬಣ್ಣಿಸಲಾಗಿದೆ. ಮುಂದಿನ ೫೦ ವರ್ಷಗಳವರೆಗೆ ಈ ಮೂರ್ತಿ ನಿರಂತರವಾಗಿ ಹೊಳೆಯಲಿದೆ ಎನ್ನಲಾಗಿದೆ.

೭.೭ ಮೀಟರ್ ಎತ್ತರ ಮತ್ತು ೧೨.೫ ಮೀಟರ್ ಅಗಲವಿರುವ ಈ ಮೂರ್ತಿ ದಕ್ಷಿಣ ಸಾಂಗ್ ರಾಜಂಶದ (೧೧೨೭ ರಿಂದ ೧೨೭೯) ಕಾಲದಲ್ಲಿ ಕೆತ್ತನೆ ಮಾಡಲಾಗಿದೆ ಎನ್ನಲಾಗುತ್ತದೆ. ಇದು ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಗೆ ೧೯೯೯ರಲ್ಲಿ ಸೇರಿಸಲಾಗಿತ್ತು.

ಶತಕಗಳ ನಂತರ ಇದರ ಬಣ್ಣ ಕಳೆಗುಂದಿತ್ತು ಹಾಗು ಚಿನ್ನದ ಲೇಪನಗಳು ಸುಲಿದುಬಿದ್ದಿದ್ದವು.

SCROLL FOR NEXT