ವಿಶೇಷ

ಚೈನಾದಲ್ಲಿ ಜಗತ್ತಿಗೆ ತಿಳಿಯದ ಹೊಸ ಪಕ್ಷಿಯೊಂದು ಪತ್ತೆ

Guruprasad Narayana

ನ್ಯೂಯಾರ್ಕ್: ಸದಾ ನುಣುಚಿಕೊಳ್ಳುವ ಹಾಗೂ ವಿಭಿನ್ನವಾಗಿ ಹಾಡುವ ಹೊಸ ಪಕ್ಷಿಯೊಂದನ್ನು ಚೈನಾದಲ್ಲಿ ಅಂತರಾಷ್ಟ್ರೀಯ ಸಂಶೋಧಕರ ತಂಡವೊಂದು ಪತ್ತೆಹಚ್ಚಿದೆ.

ಸಿಶುಯನ್ ಬುಶ್ ವ್ಯಾಬ್ಲರ್ ಎಂದು ಕರೆಯಲಾಗಿರುವ ಈ ಪಕ್ಷಿ ಇಷ್ಟು ದಿನ ಹುಲ್ಲುಗಾವಲು ಮತ್ತು ಗೊಂಚಲುಗಳಲ್ಲಿ ಅಡಗಿ, ಬೆಳಕಿಗೆ ಬಂದಿರಲಿಲ್ಲ ಎಂದು ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.

"ಅತಿ ಒತ್ತೊತ್ತಾಗಿರುವ ಹುಲ್ಲು ಗೊಂಚಲಿನಲ್ಲಿ ಹಾಗು ಟೀ ಎಸ್ಟೇಟ್ ಗಳಲ್ಲಿ ಅಡಗಿ ಕುಳಿತುಕೊಳ್ಳುವ ಸಿಶುಯನ್ ಬುಶ್ ವ್ಯಾಬ್ಲರ್ ಪಕ್ಷಿ ತುಂಬಾ ರಹಸ್ಯವಾಗಿ ಬದುಕುತ್ತದೆ. ಆದುದರಿಂದ ಅದನ್ನು ಪತ್ತೆ ಹಚ್ಚುವುದು ಅತಿ ಕಷ್ಟದ ಕೆಲಸ" ಎಂದು ರಾಸ್ಮುಸ್ಸನ್ ಹೇಳಿದ್ದಾರೆ.

ರಸ್ಸೇಟ್ ಬುಶ್ ವ್ಯಾಬ್ಲರ್ ಈ ಪಕ್ಷಿಯ ಹತ್ತಿರದ ನಂಟ. ಈ ಎರಡು ವ್ಯಾಬ್ಲರ್ ಗಳನ್ನು ಒಂದೇ ಪರ್ವತ ಶ್ರೇಣಿಯಲ್ಲಿ ಕಾಣಬಹುದಾದರೂ, ಸಿಶುಯನ್ ಬುಶ್ ವ್ಯಾಬ್ಲರ್ ಕೆಳಮಟ್ಟದಲ್ಲಿ  ವಾಸಿಸುತ್ತದೆ.

SCROLL FOR NEXT