ವಿಶೇಷ

ನವೆಂಬರ್ ೨೬ ರಿಂದ ನಾಲ್ಕು ದಿನಗಳ ಕಾಲ ಆಳ್ವಾಸ್ ನುಡಿಸಿರಿ

Guruprasad Narayana

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿ ಸಮ್ಮೇಳನ ನವಂಬರ್ ತಿಂಗಳ 26, 27, 28 ಮತ್ತು 29ರ ದಿನಾಂಕಗಳಂದು 4 ದಿನಗಳ ಕಾಲ ನಡೆಯಲಿದೆ. ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭವು ‘ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್’ ವೇದಿಕೆಯಲ್ಲಿ ನವಂಬರ್ 26ರಂದು ಸಂಜೆ 6.00 ಗಂಟೆಗೆ ನೆರವೇರಲಿದೆ. ಉಳಿದಂತೆ 3 ದಿನಗಳ ಸಮ್ಮೇಳನವು ಪ್ರತಿವರ್ಷದಂತೆ ರತ್ನಾಕರವರ್ಣಿ ವೇದಿಕೆಯಲ್ಲಿ, ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಲಿದೆ.

ನಾಡಿನ ಹಿರಿಯ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ‘ಕರ್ನಾಟಕ : ಹೊಸತನದ ಹುಡುಕಾಟ’ ಪರಿಕಲ್ಪನೆಯಲ್ಲಿ ಸಮ್ಮೇಳನದ ಗೋಷ್ಠಿಗಳು ಜರುಗಲಿವೆ.

ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ನಿಘಂಟುಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಲ್ಲಿ ಸಂಶೋಧನೆ ನಡೆಸಿರುವ ಹಿರಿಯ ಸಾಹಿತಿ ಟಿ ವಿ ವೆಂಕಟಾಚಲಶಾಸ್ತ್ರಿ ಸಮ್ಮೇಳನದ ಅಧ್ಯಕ್ಷರು. ಕತೆಗಾರರಾಗಿ, ಕಾದಂಬರಿಗಾರರಾಗಿ, ಅನುವಾದಕರಾಗಿ, ಸಂಘಟಕರಾಗಿ ಉತ್ತಮ ಆಡಳಿತಗಾರರಾಗಿ ಹೆಸರುವಾಸಿಯಾದವರು ಡಾ.ವೀಣಾ ಶಾಂತೇಶ್ವರ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ.
1. ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ - ಸಾಹಿತ್ಯ, ಪ್ರವಚನ
2. ಡಾ.ಸುಮತೀಂದ್ರ ನಾಡಿಗ             - ಸಾಹಿತ್ಯ
3. ಶ್ರೀ ಎಸ್.ವಿ.ರಾಜೇಂದ್ರ ಸಿಂಗ್ ಬಾಬು     - ಚಲನಚಿತ್ರ
4. ವಿದ್ವಾನ್ ಶ್ರೀ ಆರ್.ಕೆ.ಪದ್ಮನಾಭ         - ಶಾಸ್ತ್ರೀಯ ಸಂಗೀತ
5. ಡಾ.ಬಿ.ಎನ್.ಸುಮಿತ್ರಾ ಬಾಯಿ         - ಸಾಹಿತ್ಯ
6. ಶ್ರೀ ಈಶ್ವರ ದೈತೋಟ             - ಮಾಧ್ಯಮ
7. ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ     - ಯಕ್ಷಗಾನ ಭಾಗವತಿಕೆ
8. ಶ್ರೀ ವರ್ತೂರು ನಾರಾಯಣ ರೆಡ್ಡಿ         _ ಕೃಷಿ
9. ಶ್ರೀ ಶಿಲ್ಪಿ ಹೊನ್ನಪ್ಪಚಾರ್             - ಶಿಲ್ಪಕಲೆ
10. ಶ್ರೀ ಸೈಯ್ಯದ್ ಸಲ್ಲಾವುದ್ದೀನ್ ಪಾಷಾ     - ಸಂಸ್ಕೃತಿ ಸೇವೆ

SCROLL FOR NEXT