ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ (ಸಂಗ್ರಹ ಚಿತ್ರ) 
ವಿಶೇಷ

ಜ್ಞಾನ ದಾಸೋಹಿ ಗುರುವಿಗೆ ನಮನ

"ಗುರು" ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಜೀವಿಯ ಜೈವಿಕ ಕ್ರಿಯೆಗಳು ಸುಗಮವಾಗಿ ನಡೆಯಲು ಜೀವಕೋಶಗಳ ನಡುವೆ, ಅಂಗಾಂಗಗಳ ನಡುವೆ ಹೊಂದಾಣಿಕೆಯ ಕಾರ್ಯನಡೆಯಲು...

"ಗುರು" ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಜೀವಿಯ ಜೈವಿಕ ಕ್ರಿಯೆಗಳು ಸುಗಮವಾಗಿ ನಡೆಯಲು ಜೀವಕೋಶಗಳ ನಡುವೆ, ಅಂಗಾಂಗಗಳ ನಡುವೆ ಹೊಂದಾಣಿಕೆಯ ಕಾರ್ಯನಡೆಯಲು ಮೆದುಳಿನ ಮಾರ್ಗದರ್ಶನ ಅಗತ್ಯ. ಗುರುವಿನ ವಿಶೇಷಣಗಳನ್ನು ಮೆದುಳಿನಲ್ಲಿ ಕಾಣಬಹುದು. ದೇಹಕ್ಕೆ ಮೆದುಳು ಗುರುವಿನಂತೆ. ಸಕ್ರಿಯವಾದ ಮೆದುಳು ಸ್ವಸ್ಥನ ಪುಣ್ಯ. ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೆದುಳು ಇಲ್ಲದವರ ಬದುಕು ಜೀವನವನ್ನು ಗ್ರಹಿಸುವ,  ವಿವಕ್ಷಿಸುವ, ತಿಳಿಯಲು ಆಗದಂತೆ ಅಂಧಕಾರಕ್ಕೆ ತಳ್ಳುತ್ತದೆ. ವಾಸ್ತವವಾಗಿ ಇಂತಹ ಅಂಧಕಾರಕ್ಕೆ ಉಜ್ವಲವಾದ ಬೆಳಕನ್ನು ಕರುಣಿಸುವವನೇ ಗುರು. ಅದ್ವಯಾ ತಾರಕಾ ಉಪನಿಷತ್ತಿನ ೧೪, ೧೮, ಶ್ಲೋಕ ೫ ರಲ್ಲಿ ಹೇಳಿರುವಂತೆ ಗುರುವಿನ ಅರ್ಥ "ಗುಕಾರೊಂಧಕಾರತ್ವಾತ್ ರುಕಾರೊ ತನ್ನಿವಾರಕಃ" 'ಗು' ಎಂದರೆ ಅಂಧಕಾರ, 'ರು' ಎಂದರೆ ನಾಶಪಡಿಸುವುದು . ಒಟ್ಟಾರೆಯಾಗಿ ಅಂಧಕಾರವನ್ನು ನಾಶಪಡಿಸಿ ಬೆಳಕಿನೆಡೆಗೆ ಕೊಂಡೊಯ್ಯುವವನೇ ಗುರು.

ಪುರಾತ ಗ್ರಂಥಗಳಲ್ಲಿ 'ಗುರು' ಎಂಬ ಪದದ ಬಳಕೆ ಯೆಥೇಚ್ಛವಾಗಿ ಆಧ್ಯಾತ್ಮ ಗುರುಗಳಿಗೆ ಮಾತ್ರ ಉಪಯೋಗಿಸಲ್ಪಟ್ಟಿದೆ. ಗುರುವನ್ನು ಅತಿಮಾನುಷನಂತೆ ಆತನ ಹಿರಿಮೆಯನ್ನು ಬಣ್ಣಿಸಿದ್ದೂ ಉಂಟು. "ಗುರು ಗೀತಾ"ದಲ್ಲಿ ಹೇಳಿರುವಂತೆ 'ಗು' ಎಂದರೆ ಗುಣಗಳನ್ನು ಮೀರಿ , 'ರು' ಎಂದರೆ ಆಕಾರ ರಹಿತವಾದ ವ್ಯಕ್ತಿ . ಗುರುವನ್ನು ಯಾವ ರೂಪದಲ್ಲಿಯಾದರು, ಯಾರಲ್ಲಿಯಾದರೂ, ಯಾವಾಗಾಲಾದರು ಕಾಣಬಹುದು. ದಾರಿತಪ್ಪಿದಾಗ ದಿಕ್ಕು ಸೂಚಿಸುವ ಯಾವುದೇ ಪ್ರಾಕೃತಿಕ, ಅಥವಾ ಜೈವಿಕ ಅಂಶ ಗುರುವಾಗಬಲ್ಲದು. ಭೌತಿಕ ರೂಪವೇ ಇಲ್ಲದ 'ಗುರು'ಎನ್ನುವ ಅಂಶ ಆಧ್ಯಾತ್ಮ ಲೋಕದ ಶ್ರೇಷ್ಠ ರತ್ನವೇ ಸರಿ. ಗುರುವನ್ನು ಕಾಣದವರು ಮಾನಸಿಕವಾಗಿ ಅಂಧರಿದ್ದಂತೆ. ಸಂಸ್ಕೃತದಲ್ಲಿ ಅನಾಥ ಎನ್ನುವ ಪದಕ್ಕೆ "ಒಬ್ಬ ಗುರುವನ್ನೂ ಹೊಂದಿಲ್ಲದ ವ್ಯಕ್ತಿ "  ಎನ್ನುವ ಅರ್ಥ ಇದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ  "ಗುರು, ದೇವರು ಮತ್ತು ಸ್ವಯಂ(ಆತ್ಮ)" ಈ ಮೂವರು ಪರಮ ಪೂಜ್ಯವಾದವರು ಎಂದು ಮೈತ್ರಯನಿಯ ಉಪನಿಷತ್ತಿನಲ್ಲಿ ತಿಳಿಸಲಾಗಿದೆ. ಇಂದು ಗುರು ಎನ್ನುವ ಪದ "ಶಿಕ್ಷಕ " ಎನ್ನುವ ಪದಕ್ಕೆ ಸಮನಾಗಿ ಉಪಯೋಗಿಸಲ್ಪಡುತ್ತಿದೆ.

"ಮಹಾಭಾರತದಲ್ಲಿ" ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಸನ್ನಿವೇಶ ಜ್ಞಾನ ಸಂಪತ್ತನ್ನು ತುಂಬಿಸಿದ ಸಂವಾದ. ದಾಯಾದಿಗಳು ಮತ್ತು ಧರ್ಮ ಇವೆರಡರ ನಡುವೆ ಯಾವುದು ಮುಖ್ಯ?. ಧರ್ಮಕ್ಕಾಗಿ ನಮ್ಮನ್ನು ಪೋಷಿಸಿ, ಪಾಲಿಸಿ, ನನ್ನೊಡನಿದ್ದ ಬಂಧುಗಳನ್ನು ಕೊಲ್ಲಬೇಕೆ ಎನ್ನುವ ಗೊಂದಲಕ್ಕೀಡಾದ ಅರ್ಜುನ ನಿರ್ದೇಶನಕ್ಕಾಗಿ, ಉತ್ತರಕ್ಕಾಗಿ ಕೃಷ್ಣನಲ್ಲಿ ಶಿಷ್ಯನಾಗಿ ಮೊರೆಇಡುತ್ತಾನೆ. " ಭಗವದ್ಗೀತಾ ಬೋಧನೆ ಅಮೂಲ್ಯವಾದುದು. ಅಂದು ಮತ್ತು ಇಂದು ಜಾತಿ ಮತ ಭೇದವಿಲ್ಲದೆ ಉಕ್ಕಿ ಬರುವ ಭಕ್ತಿ, ಪ್ರೀತಿ, ಗೌರವ ಗುರುವಿನೆಡೆಗೆ ಮಾತ್ರ. ಗುರುವಿಲ್ಲದೆ ಶಕ್ತಿಯ ಪಕ್ವತೆಗೆ ಹೊರಳಾಡಿ, ದೊರಕಿದರೂ ದೊರಕದಂತಾಗುವ ಗುರುವನ್ನು ತನ್ನದೇ ರೂಪದಲ್ಲಿ ಕಾಣುವ ಏಕಲವ್ಯನ ಪಾತ್ರ ಮನಕಲುಕುವಂಥದ್ದು. ಗುರು ಕೃಪೆಯಿಂದಲೇ ಜನಿಸಿದ , ಯುಕ್ತಿಯಿಂದ ಕೂಡಿದ್ದ ಅಭಿಮನ್ಯು ಚಕ್ರವ್ಯೂಹದಿಂದ ಹೊರಬರುವುದನ್ನು ಗುರು ತಿಳಿಸದೇ ಇದ್ದರಿಂದ ಶಕ್ತನಾದರು ರಣರಂಗದಲ್ಲಿ ಬಲಿಯಾಗುವ ಈ ಪಾತ್ರ ಗುರುವಿನ ಮಹತ್ವವನ್ನು ತಿಳಿಸುತ್ತದೆ. ಸ್ವ ಗುರುವಾಗಿ ಹಾಗೂ ಗುರು ಅನುಗ್ರಹಕ್ಕೆ ಒಳಗಾಗಿ ಸಾತ್ವಿಕ ಹೊಣೆ ನಿರ್ವಹಿಸಿದ ವಿದುರ ಮಾದರಿಯ ಗುರು.

ಪ್ರಸ್ತುತ ಜಗತ್ತಿನಲ್ಲಿ ಅಧ್ಯಾಪಕ, ಶಿಕ್ಷಕ ಈ ರೀತಿ ಅನೇಕ ವೃತ್ತಿಗಳು ಗುರುವಿನ ಲಕ್ಷಣಗಳನ್ನು ಮಾತ್ರ ಒಳಗೊಂಡಿವೆ. ನೈಜವಾಗಿ ಸಂಪೂರ್ಣವಾಗಿ ಗುರುವಾಗಿ ಜೀವನ ನಡೆಸುವವರು ಸಮಾಜದಲ್ಲಿ ಕಂಡು ಬರುವುದು ಬಹಳ ವಿರಳವಾಗಿದೆ. ಅಧ್ಯಾಪಕರುಗಳು ತಮ್ಮ ವೃತ್ತಿಯನ್ನು ಜೀವನಕ್ಕಾಗಿ ನಡೆಸುವಂತೆ ಮಾತ್ರ ಕಂಡುಬರುತ್ತದೆ. ಶಿಷ್ಯರ ಮೇಲಿನ ಜವಾಬ್ದಾರಿ, ಪ್ರೀತಿ ಇಂದಿನ ಸಮಾಜಕ್ಕೆ ಬೇಕಿಲ್ಲವಾದಂತೆ ಹಾಗೂ ಅಧ್ಯಾಪಕರ ಜೀವನದಲ್ಲಿ ಇದು ಪ್ರಮುಖವಾದ ವಿಷಯವಲ್ಲವಾದಂತೆ ತಿಳಿದುಬರುತ್ತದೆ. ಇವರ ನಡುವೆಯು ಸರ್ವಪಲ್ಲಿ ರಾಧಾಕೃಷ್ಣನ್ರವರಂತಹ ಆದರ್ಶ ಅಧ್ಯಾಪಕರು ಕಾಣಸಿಗುತ್ತಾರೆ. ೨೦೧೨ ಗಣತಿಯ ಪ್ರಕಾರ ಭಾರತದಲ್ಲಿ ೨, ೧೩೭, ೦೦೦ ರಷ್ಟು ಶಿಕ್ಷಕರಿದ್ದಾರೆ. ಜನಸಂಖ್ಯೆಯ ಮಹಾಪೂರವೇ ಹೊಂದಿರುವ ಭಾರತಕ್ಕೆ ಇವರ ಅವಶ್ಯಕತೆ ಇದೆ. ಆದರೆ ಇವರಿಗೆ ಬೋಧನೆಗಿಂತಾ ಇತರೆ ಹೊರೆಗಳು ಅವರ ವೃತ್ತಿಯ ಭಾಗವಾಗಿವೆ. ರಾಷ್ಟ್ರದ ಮುಂದಿನ ಪ್ರಜೆಯ ನಿರ್ವಹಣೆಯಲ್ಲಿ ಕೆಲಸಗಳ್ಳತನ ತೋರುವ ಅನೇಕ ಶಿಕ್ಷಕರಿಂದ ವಿದ್ಯಾರ್ಥಿಗಳ ಜೀವನಕ್ಕೆ ತೊಂದರೆಯಾಗುತ್ತಿದ.

ಸರ್ವಶ್ರೇಷ್ಠವಾದ ವಿದ್ಯಾಧಾನ ಮಾಡುವ ಸರ್ವಶ್ರೇಷ್ಠವಾದ ವೃತ್ತಿ ಶಿಕ್ಷಕವೃತ್ತಿ . ಇದು ಸದುಪಯೋಗವಾಗಬೇಕಿದೆ. ಶಿಕ್ಷಕನಿಗೆ ನೀಡಬೇಕಾದ ಗೌರವಕೂಡ ಹೆಚ್ಚಬೇಕು.
ನಾ ಮೇಲೊ ನೀ ಮೇಲೊ ಎಂದು ಬದುಕುವ ಇಂದಿನ ಪೀಳಿಗೆ ಗುರು ಇಲ್ಲದೆ ಬೇಕಾದುದನ್ನು
ಸಾದಿಸಬಹುದ ಎಂದು ನಂಬಿದವರಿದ್ದಾರೆ. ಹಠ, ಛಲ, ಆಸೆಯಿಂದ ಸಾಧನೆ ಸಾಧ್ಯ. ಆದರೆ ಮೌಲ್ಯಯುತವಾದ, ಮಾನವೀಯತೆಯ, ತೃಪ್ತಿಕರವಾದ, ವ್ಯಕ್ತಿತ್ವ ರೂಪಗೊಳ್ಳಲು ಗುರುವಿನ ಸಾಕ್ಷಾತ್ಕಾರ ಅಗತ್ಯ. ಸಮಾಜ ನೀರಿನಂತೆ , ಗುರು ನೀರನ್ನು ನೋಡುವ ವ್ಯಕ್ತಿಯಾದರೆ ಅದರ ಪ್ರತಿಬಿಂಬವೇ ಶಿಷ್ಯ. ಗುರುವೃಂದಕ್ಕೆ ನಮನ.

- ಚಾರುಶ್ರೀ ಕೆ.ಎಸ್.
ಬಿಐಈಟಿ ಇಂಜಿನಿಯರಿಂಗ್ ಕಾಲೇಜು
ದಾವಣಗೆರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT