ಸಾಂದರ್ಭಿಕ ಚಿತ್ರ 
ವಿಶೇಷ

ವಿದೇಶಿಗರ ಮೈಯ್ಯಲ್ಲಿ ಭಾರತದ ಟ್ಯಾಟೂ

ಸೆಲೆಬ್ರಿಟಿಗಳು ತಮ್ಮ ದೇಹದ ಎಲ್ಲಿಗೆ ಬೇಕಾದರೂ ಹಚ್ಚೆ ಹಾಕಿಸಿಕೊಳ್ಳಲಿ, ಪರವಾಗಿಲ್ಲ. ಆದರೆ ಅದು ಕಾಣುವಂತಿರಲಿ ಎಂಬುದು ಅಭಿಮಾನಿಗಳ ಆಸೆ. ...

ಸೆಲೆಬ್ರಿಟಿಗಳು ತಮ್ಮ ದೇಹದ ಎಲ್ಲಿಗೆ ಬೇಕಾದರೂ ಹಚ್ಚೆ ಹಾಕಿಸಿಕೊಳ್ಳಲಿ, ಪರವಾಗಿಲ್ಲ. ಆದರೆ ಅದು ಕಾಣುವಂತಿರಲಿ ಎಂಬುದು ಅಭಿಮಾನಿಗಳ ಆಸೆ. ಅದು ಅರ್ಥವಾಗುವ ಹಾಗೂ ಇದ್ದರೆ ಮತ್ತೂ ಸಂತೋಷ. ನಮ್ಮ ದೇಶದ ಅನೇಕ ಸೆಲೆಬ್ರಿಟಿಗಳ ಹಚ್ಚೆ ವಿದೇಶಗಳಪುರಾಣ ಪಾತ್ರಗಳಿಂದ, ಬುಡಕಟ್ಟು  ಚಿತ್ರಗಳಿಂದ ತುಂಬಿರುತ್ತದೆ. ಫಾರಿನ್ ಎನಿಸಿಕೊಂಡಿದ್ದೆಲ್ಲ ಗ್ಲಾಮರಸ್ ಎಂಬ ಅನಿಸಿಕೆ ಇದರ ಹಿಂದಿರಬಹುದು. ಇವರ ಮಧ್ಯೆ, ಭಾರತೀಯ ಚಿತ್ರ, ಪುರಾಣ ಶ್ಲೋಕ, ಸಂದೇಶಗಳನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವ ಇಂಟರ್‍ನ್ಯಾಶನಲ್ ಸೆಲೆಬ್ರಿಟಿಗಳೂ ಇದ್ದಾರೆ ಅಂದರೆ ನಂಬುತ್ತೀರಾ?

ಏಂಜೆಲಿನಾ ಜೂಲಿ ಇಂಥ ಸೆಲೆಬ್ರಿಟಿಗಳ ಸಾಲಿನಲ್ಲಿ ಮೊದಲಿನಲ್ಲಿದ್ದಾಳೆ. ಆಕೆಯ ಎಡ ತೋಳು ಮತ್ತು ಭುಜದ ಮೇಲೆ ಪಾಲಿ ಭಾಷೆಯಲ್ಲಿ ಬರೆದ ಬುದ್ಧನ ಉಪದೇಶದ ವಾಕ್ಯಗಳಿವೆ. `ವೈರಿಗಳು ನಿನ್ನಿಂದ ದೂರ ಹೋಗಲಿ. ನಿನ್ನಲ್ಲಿ ಶ್ರೀಮಂತಿಕೆ ಸೇರಿದರೆ ಚಿರಕಾಲ ಉಳಿಯಲಿ. ಅಪ್ಸರೆಯ ಸೌಂದರ್ಯ ನಿನ್ನದಾಗಲಿ. ಎಲ್ಲೇ ಹೋಗಲಿ ಬಹು ಮಂದಿ ನಿನ್ನನ್ನು ಸುತ್ತುವರಿಯಲಿ, ಕೀರ್ತಿಸಲಿ' ಎಂಬುದು ಇದರ ಅರ್ಥ. ಫುಟ್ಬಾಲ್ ತಾರೆ ಡೇವಿಡ್ ಬೆಕ್ ಹ್ಯಾಂ ಎಡಗೈಯಲ್ಲಿ ಆತನ ಹೆಂಡತಿಯ ಹೆಸರಿದೆ. ವಿಶೇಷವೆಂದರೆ `ವಿಕ್ಟೋರಿಯಾ' ಎಂಬ ಈ ಹೆಸರು ದೇವನಾಗರಿ ಲಿಪಿಯಲ್ಲಿದೆ. ಇನ್ನು ಗಾಯಕಿ, ಸಂಗೀತಗಾರ್ತಿ ಮಿಲಿ ಸೈರಸ್ ಎಡಗೈಯ ಮಣಿಕಟ್ಟಿನಲ್ಲಿ `ಓಂ' ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಯಾಕೆಂದರೆ ಆಕೆಗೆ ಸಂಗೀತದಂತೆ, ಜಗತ್ತಿನ ಆದಿ ಸಂಗೀತದಲ್ಲೂ ಆಸಕ್ತಿ. ಇದು ಆಕೆಯ ಮೈಯಲ್ಲಿರುವ ದಶಲಕ್ಷ ಟ್ಯಾಟೂಗಳಲ್ಲಿ ಒಂದು!

ಅಮೆರಿಕದ ನಟಿ ಜೆಸ್ಸಿಕಾ ಆಲ್ಬಾ ಬಲಗೈ ಮಣಿಗಟ್ಟಿನಲ್ಲಿ `ಪದ್ಮ' ಎಂದು ಹಿಂದಿಯಲ್ಲಿ ಬರೆಸಿಕೊಂಡವಳು. ಆಕೆಗೆ ತಾವರೆಯ ಶಕ್ತಿಯಲ್ಲಿ ನಂಬಿಕೆ. ಅಲಿಸ್ಸಾ ಮಿಲಾನೊ ಎಂಬ ಸ್ಟಾರ್ ಗಾಯಕಿ, ನಟಿಯ ಮೈಯ ಮೇಲೆ ಕೂಡ `ಓಂ'ಕಾರವಿದೆ. ಇನ್ನು ಬ್ರಿಟಿಷ್ ವಿನೋದಕಾರ, ನಟ ರಸ್ಸೆಲ್ ಬ್ರಾಂಡ್ ಧ್ಯಾನದ ಮೊರೆ ಹೋಗಿರುವವನು. ಒಮ್ಮೆ ಡ್ರಗ್ಸ್ ಮೊರೆ ಗಿದ್ದ ಈತ ಅದರಿಂದ ಚೇತರಿಸಿಕೊಂಡ ಳಿಕ ಹಿಂದುಧರ್ಮಕ್ಕೆ ಬಂದ. ಈತನ ಮೈಯಲ್ಲಿ ಸಂಸ್ಕೃತದಲ್ಲಿ `ಅನುಗಚ್ಛತು ಪ್ರವಾಹಃ' ಎಂದು ಬರೆದಿದೆ. ಅದರರ್ಥ `ಪ್ರವಾಹದ ಜತೆ ಸಾಗು' ಅಂತ. ತೋಳಿನಲ್ಲಿ ಕೃಷ್ಣನ ಚಿತ್ರವಿದೆ. ಅಮೆರಿಕದ ನಟಿ, ಗಾಯಕಿ ಕೇಟಿ ಪೆರ್ರಿ 2010ರಲ್ಲಿ ಈತನ ಹೆಂಡತಿಯಾದಳು. ಬ್ರಾಂಡ್ ಹಾಕಿಸಿಕೊಂಡ ಹಚ್ಚೆಯನ್ನು ಈಕೆ ಯಥಾವತ್ ಹಾಕಿಸಿಕೊಂಡಳು. ಈಗಿವರು ಬೇರೆಯಾಗಿದ್ದಾರೆ.

ಇನ್ನೊಬ್ಬಾಕೆ ಪಾಪ್ ಗಾಯಕಿ ಕಿಂಬರ್ಲಿ ವೈಟ್. ಆಕೆಯ ಕುತ್ತಿಗೆಯ ಹಿಂಬದಿಯಲ್ಲಿ ದೇವನಾಗರಿಯ `ಲೋಕಾ ಸಮಸ್ತಾ ಸುಖಿನೋ ಭವಂತು' ಶ್ಲೋಕವಿದೆ. ಮತ್ತೊಬ್ಬಳು ಗಾಯಕಿ ಬ್ರಿಟಾನಿ ಸ್ನೋಳ ಕೈಯ ಮೇಲೆ `ಅಭಯ' ಎಂದು ಬರೆದಿದೆ. ಅಮೆರಿಕದ ಇನ್ನೊಬ್ಬ ಸೆಲೆಬ್ರಿಟಿ ಬ್ರಾಂಡಿ ನಾರ್ವುಡ್ ತೋಳಿನಲ್ಲಿ ಗಣಪತಿಯ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಆಡಂ ಲೆವೈನ್ ಎಂಬ ಗಾಯಕನ ಹೊಟ್ಟೆಯ ಮೇಲೆ `ತಪಸ್ಸು' ಎಂಬ ಟ್ಯಾಟೂ ಇದೆ. ಈತ ಯಾವ ತಪಸ್ಸು ಮಾಡಿದ್ದಾನೊ ತಿಳಿಯದು. ಇನ್ನು ನಟಿ, ಹಾಡುಗಾತಿ ರಿಹಾನ್ನಳ ಸೊಂಟದ ಬಳಿ ಭಗವದ್ಗೀತೆಯ ಶ್ಲೋಕವಿದೆ. ಇನ್ನು ಟಾಮಿ ಲೀ ಎಂಬ ರಾಕ್‍ಸ್ಟಾರ್‍ನ ಮೈಯಲ್ಲಂತೂ ಹಲವಾರು ತಾವರೆಗಳು, ಓಂಗಳು ಇವೆ.

ಇವರಲ್ಲಿ ಕೆಲವರು ಹಾಕಿಸಿಕೊಂಡ ಹಚ್ಚೆಯಲ್ಲಿ ಸ್ಪೆಲ್ಲಿಂಗ್ ತಪ್ಪಿದೆ ನಿಜ; ಆದರೆ ಅವರು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ. ಹೆಚ್ಚಿನವರು `ಓಂ'ಕಾರಕ್ಕೆ ಮೊರೆ ಹೋಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಭಾರತೀಯ ಸಂಗೀತ, ಯೋಗ, ಧ್ಯಾನದ ಪ್ರಭಾವ ಇದೆ ಎಂದು ಗ್ರಹಿಸಬಹುದು. ಹೆಚ್ಚಿನ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಒಂದಲ್ಲ ಒಂದು ಹಂತದಲ್ಲಿ ಭಾರತೀಯ ಜೀವನ ವಿಧಾನ ಮತ್ತು ಅಧ್ಯಾತ್ಮದ ಬಗ್ಗೆ ಕುತೂಹಲಿಗರಾಗಿದ್ದಾರೆ. ಇವರಲ್ಲಿ ಮೂಡಿರುವ ಪ್ಯಾಶನ್ ಅಥವಾ ಫ್ಯಾಶನ್ನೇ ಈ ಟ್ಯಾಟೂಗಳಿಗೆ ಮೂಲ ಕಾರಣವಾಗಿದೆ ಅಷ್ಟೇ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT