ವಿಶೇಷ

ನದಿಗೆ ಹಾರಿ ವ್ಯಕ್ತಿಯೊಬ್ಬನ ಜೀವ ರಕ್ಷಿಸಿದ ಪೊಲೀಸ್

Mainashree

ಮಹಾರಾಷ್ಟ್ರ: ಸೇತುವೆಯಿಂದ ಜಿಗಿದು ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯನ್ನು ಕಾಪಾಡಲು ತನ್ನ ಜೀವವನ್ನೆ ಲೆಕ್ಕಿಸದೇ, ನದಿಗೆ ಹಾರಿದ ಪೊಲೀಸ್ ಆತನನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾನೆ.

ನಾಸಿಕ್ ಕುಂಭಮೇಳದ ಹಿನ್ನಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ನಾಸಿಕ್ ನ ಅಮರ್ ಧಾಮ್ ಸೇತುವೆ ಮೇಲೆ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ 20 ಅಡಿ ಎತ್ತರದ ಸೇತುವೆಯಿಂದ ನದಿಗೆ ಹಾರಲು ಯತ್ನಿಸಿದ್ದ. ಅವನನ್ನು ತಡೆಯಲು ಪೊಲೀಸರು ಯತ್ನಿಸುತ್ತಿದ್ದರಾದರೂ, ಪೊಲೀಸರನ್ನು ತಳ್ಳಿ ಆತ ನದಿಗೆ ಹಾರಿದ್ದಾನೆ. ತಕ್ಷಣ ಆ ಗುಂಪಿನಲ್ಲಿದ್ದ ಯುವ ಪೊಲೀಸ್ ತಮ್ಮ ಪ್ರಾಣ ಲೆಕ್ಕಿಸದೇ ಆತನನ್ನು ರಕ್ಷಿಸಲು ನದಿಗೆ ಹಾರಿದ್ದಾರೆ. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ನದಿಗೆ ಹಾರಿದ 24 ವರ್ಷದ ಮನೋಜ್ ಆ ವ್ಯಕ್ತಿಯ ಪ್ರಾಣ ಕಾಪಾಡಿದ್ದು, ತಮ್ಮ ಸಾಹಸ ಮೆರೆದಿದ್ದಾರೆ. ಇವರ ಈ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆತ ನಮ್ಮ ಮಾತು ಕೇಳದೇ ನೀರಿಗೆ ಹಾರಿಬಿಟ್ಟ. ನನಗೆ ಬೇರೆ ದಾರಿ ಕಾಣದೆ ಆತನನ್ನು ರಕ್ಷಿಸಬೇಕು ಎಂದು ನೀರಿಗೆ ಹಾರಿ ಆತನ ಪ್ರಾಣ ಕಾಪಾಡಿದೆ ಎಂದು ಟ್ರೈನಿ ಪೊಲೀಸ್ ಕಾನ್ಸ್ ಟೇಬಲ್ ಮನೋಜ್ ತಿಳಿಸಿದ್ದಾರೆ.

ಯುವ ಪೊಲೀಸ್ ಕಾನ್ಸಟೇಬಲ್ ಮನೋಜ್ ಧೈರ್ಯದ ಕೆಲಸವನ್ನು ಶ್ಲಾಘಿಸಿರುವ ಕಮಿಷನರ್ ಪ್ರವೀಣ್ ಟ್ವೀಟರ್ ನಲ್ಲಿ ಆತನ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

SCROLL FOR NEXT