ಸಿಗಾರ್ ಸೇವನೆಯ ಹವ್ಯಾಸ ಇರುವವರಿಗೆ ಒಳ್ಳೆಯ ಸುದ್ದಿ. ಜಗತ್ತಿನ ಅತ್ಯಂತ ದುಬಾರಿ ಸಿಗಾರ್ ಭಾರತಕ್ಕೆ ಬಂದಿದೆ.
'ಗೂರ್ಖಾ' ಬ್ರಾಂಡ್‍ನ ಈ ಸಿಗಾರ್‍ಗಳು ವಿಶ್ವದಲ್ಲೇ ದುಬಾರಿ ಎಂದು ಖ್ಯಾತಿ. ಹಾಲಿವುಡ್ ಸ್ಟಾರ್‍ಗಳಿಂದ ಹಿಡಿದು ದೊಡ್ಡ ದೊಡ್ಡ ರಾಜಮನೆತನದವರಿಗೆಲ್ಲ ಪ್ರಿಯವಾದ ಈ ಸಿಗಾರ್‍ಗಳು ಈಗ ಐದು ಫ್ಲೇವರ್ ಗಳಲ್ಲಿ ಭಾರತದಲ್ಲಿ ಲಭ್ಯ.
ಗ್ರಾಂಡ್ ರಿಸರ್ವ್, ಸೆಲ್ಲರ್ ರಿಸರ್ವ್, ರಾಯಲ್ ಚಾಲೆಂಜ್, ಈಸ್ಟ್ ಇಮಡಿಯಾ ರೋಗ್ ಮತ್ತು ಹಿಸ್ ಮೆಜೆಸ್ಟೀಸ್ ಸರ್ವಿಸ್. ಬೆಲೆ 1000 ರು.ನಿಂದ ಶುರುವಾಗುತ್ತದೆ. 'ಹಿಸ್ ಮೆಜೆಸ್ಟೀಸ್ ಸರ್ವಿಸ್'ನ ಬೆಲೆ ನೀವು ಕೇಳಿದರೆ ಮಾತ್ರ ಹೇಳುತ್ತಾರೆ. ಕೈಝಾದ್ ಹನ್ಸೋತಿಯಾ ಎಂಬ ಎನ್ನಾರೈ ಈ ಸಂಸ್ಥೆಯ ಮಾಲಿಕ. ಸಿಗಾರ್ ಸೇವನೆ ಇಂದಿಗೂ ನಮ್ಮಲ್ಲಿ ಅತಿ ಶ್ರೀಮಂತರ ಖಯಾಲಿಯಾಗಿರುವುದರಿಂದ ನಾವು ಇವುಗಳ ಫೋಟೊ ನೋಡಿ ನಲಿಯಬಹುದು.