ನವದೆಹಲಿ: ಅಂತರ್ಜಾಲ ಸರ್ಚ್ ದೈತ್ಯ ಗೂಗಲ್, ದಿವಂಗತ ಹಿಂತೂಸ್ತಾನಿ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ೯೬ನೇ ಜನ್ಮ ದಿನಾಚರಣೆ ಅಂಗವಾಗಿ ಗುರುವಾರ ಸಿತಾರ್ ಡೂಡಲ್ ಬಿಡಿಸುವ ಮೂಲಕ ಗೌರವ ಸಲ್ಲಿಸಿದೆ.
೨೦ ಶತಮಾನದ ಅತ್ಯುತ್ತಮ ಸಂಗೀತಕಾರರಲ್ಲಿ ಒಬ್ಬರಾಗಿದ್ದರು ಸಿತಾರ್ ವಾದಕ ಪಂಡಿತ್ ರವಿಶಂಕರ್.
ಕಲಾವಿದ ಕೆವಿನ್ ಲಾಗ್ಲಿನ್ ರಚಿಸಿರುವ ಈ ಡೂಡಲ್ ಚಿತ್ರದಲ್ಲಿ ಸಿತಾರ್ ಅನ್ನು ಉದ್ದಕ್ಕೆ ನಿಲ್ಲಿಸಿ, ಅದರ ಸುತ್ತ ಬಳ್ಳಿಯ ರೂಪದಲ್ಲಿ ಗೂಗಲ್ ಎಂದು ಇಂಗ್ಲಿಶ್ ಅಕ್ಷರಗಳನ್ನು ಬರೆಯಲಾಗಿದೆ.
೧೯೯೯ರಲ್ಲಿ ಭಾರತದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ನೀಡಿ ರವಿಶಂಕರ್ ಅವರಿಗೆ ಗೌರವಿಸಲಾಗಿತ್ತು. ಅವರು ಡಿಸೆಂಬರ್ ೧೧, ೨೦೧೨ ರಲ್ಲಿ ನಿಧನರಾಗಿದ್ದರು.