ವಿಶೇಷ

ರೌಲಿಂಗ್ 'ಹ್ಯಾರಿ ಪಾಟರ್' ಖುರ್ಚಿ ೪ ಲಕ್ಷ ಡಾಲರ್ ಗೆ ಮಾರಾಟ

Guruprasad Narayana

ನ್ಯೂಯಾರ್ಕ್: ಖ್ಯಾತ ಬರಹಗಾರ್ತಿ ಜೆ ಕೆ ರೌಲಿಂಗ್ ಅವರು ಹ್ಯಾರಿ ಪಾಟರ್ ಪುಸ್ತಕ ಸರಣಿಯ ಮೊದಲೆರಡು ಪುಸ್ತಕಗಳನ್ನು ಬರೆಯಲು ಬಳಸಿದ್ದ ಓಕ್ ಮರದ ಖುರ್ಚಿ ಹರಾಜಿನಲ್ಲಿ ದಾಖಲೆ ೩,೯೪,೦೦೦ ಡಾಲರ್ ಮೊತ್ತಕ್ಕೆ ಮಾರಾಟವಾಗಿದೆ.

ಹ್ಯಾರಿ ಪಾಟರ್ ಸರಣಿಯ 'ಫಿಲಾಸ್ಪರ್ಸ್ ಸ್ಟೋನ್' ಮತ್ತು ಚೇಂಬರ್ ಆಫ್ ಸೆಕ್ರೆಟ್ಸ್' ಪುಸ್ತಕಗಳನ್ನು ಲೇಖಕಿ ೧೯೩೦ ರ ಈ ಖುರ್ಚಿಯ ಮೇಲೆ ಬರೆದಿದ್ದಂತೆ.

ಬುಧವಾರ ಹೆರಿಟೇಜ್ ಆಕ್ಷನ್ಸ್ ಇದನ್ನು ಮಾರಾಟ ಮಾಡುವುದಕ್ಕೂ ಮೊದಲು ಈ ಖುರ್ಚಿ ಈಗಾಗಲೇ ಎರಡು ಬಾರಿ ಹರಾಜಾಗಿತ್ತಂತೆ.

ಮಕ್ಕಳ ವಿರುದ್ಧದ ದೌರ್ಜನ್ಯ ತಡೆಯಲು ಹೋರಾಡುತ್ತಿರುವ ಒಂದು ಸಂಸ್ಥೆಗೆ ದೇಣಿಗೆಯಾಗಿ ನೀಡುವುದಕ್ಕೂ ಮೊದಲು ಈ ಖುರ್ಚಿಯ ಮೇಲೆ "ನಾನು ಈ ಖುರ್ಚಿಯ ಮೇಲೆ ಕುಳಿತು ಹ್ಯಾರಿ ಪಾಟರ್ ಬರೆದದ್ದು" ಎಂದು ರೌಲಿಂಗ್ ನಮೂದಿಸಿದ್ದರಂತೆ.

SCROLL FOR NEXT