ಆಂಧ್ರ ಪ್ರದೇಶದ ಗ್ರಾಮವೊಂದರ ಚಿತ್ರ 
ವಿಶೇಷ

ಈ ಗ್ರಾಮಸ್ಥರು ಸ್ವಾತಂತ್ರ್ಯ ಸಿಕ್ಕ ನಂತರ ಅಪರಾಧವನ್ನೇ ಕಂಡಿಲ್ಲ!

ಆಂಧ್ರ ಪ್ರದೇಶದ ಗ್ರಾಮೀಣ ಪ್ರದೇಶಗಳು ಅಪರಾಧ ಪ್ರಕರಣಗಳಿಗೆ ಸುದ್ದಿ ಮಾಡುತ್ತಿದ್ದರೆ ಇಲ್ಲಿನ ಶ್ರೀಕಾಕುಲಂ...

ಶ್ರೀಕಾಕುಲಂ: ಆಂಧ್ರ ಪ್ರದೇಶದ ಗ್ರಾಮೀಣ ಪ್ರದೇಶಗಳು ಅಪರಾಧ ಪ್ರಕರಣಗಳಿಗೆ ಆಗಾಗ ಸುದ್ದಿ ಮಾಡುತ್ತಿದ್ದರೆ ಇಲ್ಲಿನ ಶ್ರೀಕಾಕುಲಂ ಜಿಲ್ಲೆಯ ಕಾವಿಟಿ ಮಂಡಲ್ ನ ಗ್ರಾಮ ಇದಕ್ಕೆ ಅಪವಾದ. 
ಸುಮಾರು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲಾ ಕೇಂದ್ರದಿಂದ 110 ಕಿಲೋ ಮೀಟರ್ ದೂರದಲ್ಲಿರುವ ಬೈರಿಪುರಂ ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಿದ ನಂತರ ಒಂದೇ ಒಂದು ಅಪರಾಧ ನಡೆದಿಲ್ಲ. 15 ವರ್ಷಗಳ ಹಿಂದೆ ಕಾನೂನು ವ್ಯಾಜ್ಯದ ಕೇಸು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಬಿಟ್ಟರೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಗ್ರಾಮವನ್ನು ಅಪರಾಧ ಮುಕ್ತವಾಗಿ ಇಡುವುದು ನಮ್ಮ ಗ್ರಾಮದ ಸಂಪ್ರದಾಯ. ಸಣ್ಣ ವಿವಾದಗಳೇನಾದರೂ ನಡೆದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮದ ಮುಖ್ಯಸ್ಥರ ಬಳಿ ಹೋಗುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.
ನಮ್ಮಲ್ಲಿ ಕೆಲ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಸರಿಪಡಿಸಿಕೊಂಡು ದೊಡ್ಡ ಕುಟುಂಬದವರಂತೆ ಜೀವನ ಮಾಡುತ್ತೇವೆ. ನನ್ನ ಬಾಲ್ಯದಿಂದಲೇ ಇಲ್ಲಿ ಯಾವ ಅಪರಾಧ ನಡೆದಿದ್ದನ್ನೂ ನಾನು ಕೇಳಿಲ್ಲ ಮತ್ತು ನೋಡಿಲ್ಲ. ನಮ್ಮ ಪೂರ್ವಜರು ಗ್ರಾಮವನ್ನು ವಿವಾದ ಮುಕ್ತವಾಗಿ ಇಟ್ಟಿದ್ದಾರೆ. ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಸೀಪನ ವೆಂಕಟ ರಮಣ ಎಂಬ ಗ್ರಾಮದ ಮುಖ್ಯಸ್ಥರು.
ಪೊಲೀಸ್ ದಾಖಲೆಗಳು ಕೂಡ ಇದನ್ನೇ ಹೇಳುತ್ತವೆ. ಗ್ರಾಮಸ್ಥರು ತಮ್ಮಷ್ಟಕ್ಕೆ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ. ತಮ್ಮ ಗ್ರಾಮದ ಮುಖ್ಯಸ್ಥರು ಕೊಡುವ ತೀರ್ಮಾನವನ್ನು ಗೌರವಿಸುತ್ತಾರೆ. ಸ್ವಾತಂತ್ರ್ಯ ಬಂದ ನಂತರ ಒಂದೇ ಒಂದು ಕೇಸು ದಾಖಲಾಗಿದೆಯಷ್ಟೆ ಎನ್ನುತ್ತಾರೆ ಕಾವಿಟಿ ಸಬ್ ಇನ್ಸ್ ಪೆಕ್ಟರ್ ಕೆ.ವಾಸು ನಾರಾಯಣ. ಅಪರಾಧ, ವಿವಾದಗಳಾದಾಗ ಅವುಗಳನ್ನು ಬಗೆಹರಿಸಲು ಏನು ಮಾದರಿ ಅನುಸರಿಸುತ್ತಾರೆ ಎಂದು ತಿಳಿಯಲು ಕಾನೂನು ಘಟಕದ ಅಧಿಕಾರಿಗಳು ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿದ್ದರಂತೆ.
ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸಿನ ಬಗ್ಗೆ ವಿಚಾರಿಸಿದರೆ, ಕೃಷಿ ಭೂಮಿಗೆ ಸಂಬಂಧಪಟ್ಟಂತೆ ಎರಡು ಗುಂಪಿನ ಮಧ್ಯೆ ವಿವಾದ ಶುರುವಾಯಿತು. ಆರೋಪಿಗಳು ಪಕ್ಕದ ಗ್ರಾಮದವರಂತೆ. ವಿವಾದ ಕಂದಾಯ ಜಮೀನಿಗೆ ಸಂಬಂಧಪಟ್ಟದ್ದಾಗಿದ್ದರಿಂದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ವೆಂಕಟ ರಮಣ ಹೇಳುತ್ತಾರೆ. ಇಲ್ಲಿನ ಶೇಕಡಾ 82 ಜನ ವಿದ್ಯಾವಂತರಾಗಿದ್ದಾರೆ.
ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಯಿದೆ, ಸಮಾರಂಭಕ್ಕೆ ಸಭಾಂಗಣ, ಚರಂಡಿ ವ್ಯವಸ್ಥೆ, ಪ್ರತಿ ಮನೆಗಳಿಗೆ ನೀರಿನ ಪೂರೈಕೆಗೆ ಪೈಪ್ ಲೈನ್ ವ್ಯವಸ್ಥೆಯಿದೆ. ಪಲಲ್ಟ ವಾಸುದೇವ ನಾಯ್ಡು ಗ್ರಾಮದ ಮೊದಲ ಅಧ್ಯಕ್ಷರಾಗಿದ್ದು, ಇಂದು ಅವರ ವಂಶದವರು ಅಧಿಕಾರ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನಮ್ಮಲ್ಲಿ ಗ್ರಾಮ ಸಮಿತಿಯಿದ್ದು ಅಲ್ಲಿ ವಿವಾದಗಳ ವಿಚಾರಣೆಯಾಗಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಇತ್ತೀಚೆಗೆ ವಿಚ್ಛೇದನಕ್ಕೆ ಹೊರಟಿದ್ದ ಐವರು ದಂಪತಿಗಳನ್ನು ಸಮಾಲೋಚನೆ ನಡೆಸಿದ ನಂತರ ವಿಚ್ಛೇದನದ ಯೋಚನೆ ಬಿಟ್ಟು ಇಂದು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಗ್ರಾಮದ ಮತ್ತೊಬ್ಬ ಮುಖ್ಯಸ್ಥ ಪಿರಿಯ ಆನನಾದ್ ರಾವ್ ಹೇಳುತ್ತಾರೆ.
ರಾಜಕೀಯ ಪಕ್ಷಗಳ ಬಗ್ಗೆ ಕೇಳಿದಾಗ, ಕೆಲವರು ಇಲ್ಲಿ ಟಿಡಿಪಿಯನ್ನು ಬೆಂಬಲಿಸಿದರೆ, ಮತ್ತೆ ಕೆಲವರು ವೈಎಸ್ ಆರ್ ಸಿಗೆ ಬೆಂಬಲ ನೀಡುತ್ತಾರೆ. ಆದರೆ ನಮ್ಮ ನಿತ್ಯ ಜೀವನದಲ್ಲಿ ರಾಜಕೀಯವನ್ನು ದೂರ ಇಡಲು ಪ್ರಯತ್ನಿಸುತ್ತೇವೆ. ಜಾತಿಯ ವಿಚಾರದಲ್ಲಿಯೂ ಇದೇ ನಿಯಮ ಅನುಸರಿಸುತ್ತೇವೆ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!