ವಿಶೇಷ

ಅಮೆರಿಕಾದಲ್ಲಿ ಗಿನ್ನೆಸ್ ದಾಖಲೆ ಸೃಷ್ಟಿಸಿದ ಭಾರತೀಯ ಧರ್ಮಗುರುವಿನ ಹುಟ್ಟುಹಬ್ಬದ ಕೇಕ್

Sumana Upadhyaya
ನ್ಯೂಯಾರ್ಕ್: ಭಾರತದ ಧಾರ್ಮಿಕ ಗುರು ದಿವಂಗತ ಶ್ರೀ ಚಿನ್ಮೊಯ್ ಅವರ 85ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಅಮೆರಿಕಾದ ಭಕ್ತರು ಅತ್ಯಂತ ಹೆಚ್ಚು ಕ್ಯಾಂಡಲ್ ಗಳನ್ನು ಕೇಕ್ ಮೇಲಿಟ್ಟು ಉರಿಸಿರುವುದು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ. ಅವರ ಹುಟ್ಟುಹಬ್ಬದ ನಿಮಿತ್ತ ತಂದ ಕೇಕ್ ಮೇಲೆ 72,585 ಕ್ಯಾಂಡಲ್ ಗಳನ್ನು ಇರಿಸಿ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ.
ಶ್ರೀ ಚಿನ್ಮೊಯ್ ಎಂದು ಜನಪ್ರಿಯರಾಗಿರುವ ಚಿನ್ಮೊಯ್ ಕುಮಾರ್ ಘೋಷ್ 1964ರಲ್ಲಿ ನ್ಯೂಯಾರ್ಕ್ ಗೆ ಹೋದ ಮೇಲೆ ಅಲ್ಲಿನ ಜನರಿಗೆ ಧ್ಯಾನವನ್ನು ಹೇಳಿಕೊಟ್ಟಿದ್ದರು.
ನ್ಯೂಯಾರ್ಕ್ ನಲ್ಲಿರುವ ಶ್ರೀ ಚಿನ್ಮೊಯ್ ಕೇಂದ್ರದಲ್ಲಿ 100 ಜನರ ತಂಡ ಸೇರಿ ಕೇಕ್ ತಯಾರಿಸಿ ಪ್ರತಿಯೊಬ್ಬರೂ ಮೋಂಬತ್ತಿಗಳನ್ನಿಟ್ಟು ಉರಿಸಿದ್ದಾರೆ. ಸುಮಾರು 40 ಸೆಕೆಂಡ್ ಗಳ ಕಾಲ ಮೊಂಬತ್ತಿಯನ್ನು ಉರಿಸಲಾಯಿತು. 
ಸ್ಪಾಂಜ್ ಕೇಕ್ ನ್ನು ವೆನಿಲ್ಲಾ ಸಿಹಿಯಿಂದ ಅಲಂಕರಿಸಲಾಗಿತ್ತು. ದೊಡ್ಡ ಆಯತಾಕಾರದಲ್ಲಿ 80.5 ಅಡಿ ಉದ್ದ ಮತ್ತು ಎರಡು ಅಡಿ ಅಗಲದ ಕೇಕನ್ನು ತಯಾರಿಸಲಾಗಿತ್ತು.
ಈ ಹಿಂದೆ ಏಪ್ರಿಲ್ ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಮೈಕ್ಸ್ ಹಾರ್ಡ್ ಲೆಮೊನೆಡ್ 50,151 ಮೊಂಬತ್ತಿಗಳನ್ನು ಕೇಕ್ ಮೇಲಿಟ್ಟು ಉರಿಸಿ ಸುದ್ದಿಯಾಗಿತ್ತು.
SCROLL FOR NEXT