adiga.sankathana.com ಅಂತರ್ಜಾಲ ತಾಣದ ಒಂದು ನೋಟ 
ವಿಶೇಷ

ಕವಿ ಅಡಿಗರ ಜನ್ಮೋತ್ಸವಕ್ಕೆ ಮಾಹಿತಿಪೂರ್ಣ ವೆಬ್ಸೈಟ್

ಕನ್ನಡ ನವ್ಯ ಕಾವ್ಯದ ಆದಿ ಕವಿ ಎಂದೇ ಪ್ರಖ್ಯಾತರಾದ ಎಂ ಗೋಪಾಲಕೃಷ್ಣ ಅಡಿಗರ ೯೮ನೇ ಜನ್ಮ ದಿನೋತ್ಸವ ಇಂದು. ಫೆಬ್ರವರಿ ೧೮ ೧೯೧೮ರಲ್ಲಿ ಜನಿಸಿದ ಅಡಿಗರು

ಬೆಂಗಳೂರು: ಕನ್ನಡ ನವ್ಯ ಕಾವ್ಯದ ಆದಿ ಕವಿ ಎಂದೇ ಪ್ರಖ್ಯಾತರಾದ ಎಂ ಗೋಪಾಲಕೃಷ್ಣ ಅಡಿಗರ ೯೮ನೇ ಜನ್ಮ ದಿನೋತ್ಸವ ಇಂದು. ಫೆಬ್ರವರಿ ೧೮ ೧೯೧೮ರಲ್ಲಿ ಜನಿಸಿದ ಅಡಿಗರು ಕನ್ನಡದ ಮೇರು ಕವಿಗಳಲ್ಲಿ ಒಬ್ಬರು.

ಅಡಿಗರ ದಿನೋತ್ಸವವಾದ ಇಂದು ಸದ್ದಿಲ್ಲದೇ ಅವರ ಬಗ್ಗೆ ಅತ್ಯುತ್ತಮ ಮಾಹಿತಿಯುಳ್ಳ ಅಂತರ್ಜಾಲ ತಾಣವೊಂದು ಪಾದಾರ್ಪಣೆಗೊಂಡಿದೆ. ಅಡಿಗರೇ ಓದಿರುವ ಕವನಗಳ ಆಡಿಯೋ ತುಣುಕುಗಳು, ಇತರ ಸಮಕಾಲೀನ ಸಾಹಿತಿಗಳು, ಯುವ ಸಾಹಿತಿಗಳು, ಸಾಹಿತ್ಯಾಸಕ್ತರು ಓದಿರುವ ಅಡಿಗರ ಕವನಗಳ ಆಡಿಯೋ, ಅಡಿಗರ ಕವನಗಳ ಬಗ್ಗೆ ವಿವಿಧ ಲೇಖಕರ ವಿಮರ್ಶೆಗಳು, ಅಡಿಗರ ಸಂದರ್ಶ, ಅಡಿಗರ ಚಿತ್ರಪಟಗಳು ಇತ್ಯಾದಿ ಮಾಹಿತಿಯನ್ನು ಒಳಗೊಂಡ ಈ ಅಂತರ್ಜಾಲ ತಾಣ ವಿನ್ಯಾಸ ಸರಳ ಮತ್ತು ಸುಂದರವಾಗಿದ್ದು ಓದುಗರ ಕಣ್ಮನ ಸೆಳೆದಿದೆ.

ಸಾಫ್ಟೇರ್ ಉದ್ಯೋಗು ಕುಂಟಾಡಿ ನಿತೇಶ್ ಈ ಮಾಹಿತಿಪೂರ್ಣ ವೆಬ್ಸೈಟ್ ನ ಸಂಪಾದಕ ಹಾಗೂ ವಿನ್ಯಾಸಕಾರ. "ಇದಿನ್ನೂ ಅಂತರ್ಜಾಲದ ಮೊದಲ ಆವೃತ್ತಿಯಾಗಿದ್ದು, ಜನರು ಹೆಚ್ಚೆಚ್ಚು ಓದಿದಂತೆ, ಸಮಯ ಕಳೆದಂತೆ ಇನ್ನೂ ಹೆಚ್ಚಿನ ವಿಷಯಗಳು ಈ ಜಾಲತಾಣಕ್ಕೆ ಸೇರ್ಪಡೆಯಾಲಿದೆ" ಎನ್ನುತ್ತಾರೆ ನಿತೇಶ್.

ಅಂತರ್ಜಾಲ ತಾಣದ ವಿಳಾಸ  http://adiga.sankathana.com/ ಹೀಗಿದ್ದು ಒಮ್ಮೆ ಅದನ್ನು ನೀವೂ ಕಾಣಿ, ಮತ್ತು ಅಡಿಗರ ಬಗೆಗೆ ವಿಶೇಷ ಮಾಹಿತಿಯಿದ್ದರೆ ನಮಗೆ ತಿಳಿಸಿ ಎನ್ನುತ್ತದೆ ತಾಣದ ಸಂಚಾಲಕ ಮಂಡಲಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

SCROLL FOR NEXT