ಬಾಲ್ಯ ವಿವಾಹ ಕುರಿತ ವೀಡಿಯೋದಲ್ಲಿ ನಟಿಸಿದ ವೃದ್ಧ ಮತ್ತು ಬಾಲಕಿ 
ವಿಶೇಷ

ಬಾಲಕಿ ಮತ್ತು ವೃದ್ಧನ ಮದುವೆ ನೋಡಿ ಬೆರಗಾದ ಜನ

65 ವರ್ಷದ ವೃದ್ಧ ಮತ್ತು 12 ವರ್ಷದ ಬಾಲಕಿ ಟೈಮ್ ಸ್ಕ್ವಾರ್ ನ ಮಧ್ಯದಲ್ಲಿ ನಿಂತುಕೊಂಡು ಫೋಸ್ ಕೊಡುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಂಡಿರಾ...

ನ್ಯೂಯಾರ್ಕ್: 65 ವರ್ಷದ ವೃದ್ಧ ಮತ್ತು 12 ವರ್ಷದ ಬಾಲಕಿ ಟೈಮ್ ಸ್ಕ್ವಾರ್ ನ ಮಧ್ಯದಲ್ಲಿ ನಿಂತುಕೊಂಡು ಫೋಸ್ ಕೊಡುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂದುಕೊಂಡಿರಾ, ತಾತ ಮೊಮ್ಮಗಳಾಗಿರಬಹುದು ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ. ಅವರು ನಿಂತುಕೊಂಡು ಫೋಸ್ ಕೊಡುತ್ತಿರುವುದು ಮದುಮಗ-ಮದುಮಗಳ ಗೆಟಪ್ಪಿನಲ್ಲಿ. ಫೋಟೋಗ್ರಾಫರ್ ರಸ್ತೆ ಬದಿಯಲ್ಲಿ ಜನಜಂಗುಳಿ ಮಧ್ಯೆ ನಿಂತು ಫೋಟೋ ತೆಗೆಯುತ್ತಿರುತ್ತಾನೆ.

ಒಬ್ಬ ದಾರಿಹೋಕ ಮಹಿಳೆ ಬಂದು ಎಲ್ಲಿ ನಿನ್ನ ಅಮ್ಮ ಎಂದು ಹುಡುಗಿಯಲ್ಲಿ ಕೇಳುತ್ತಾಳೆ. ಆದರೆ ಬಾಲಕಿ ಉತ್ತರಿಸುವುದಿಲ್ಲ. ವೃದ್ಧ ಉತ್ತರಿಸಿ ಆಕೆ ಮನೆಯಲ್ಲಿದ್ದಾಳೆ ಎನ್ನುತ್ತಾರೆ. ''ಇವಳು ಇಷ್ಟು ಚಿಕ್ಕವಳು ಎಂದಾಗ, ಹೌದು, ಆದರೆ ಅವಳ ಅಪ್ಪ-ಅಮ್ಮ ಮದುವೆಯಾಗಲು ಒಪ್ಪಿಗೆ ನೀಡಿದ್ದು ಎನ್ನುತ್ತಾರೆ.

ಮತ್ತೊಬ್ಬ ಬಂದು ವೃದ್ಧನಲ್ಲಿ ನೀನು ಮಾಡಿದ ಕ್ರಮ ಸರಿಯಿಲ್ಲ. ನೀನೊಬ್ಬ ಮಾನಸಿಕ ರೋಗಿ ಎಂದೆಲ್ಲಾ ಬಯ್ಯುತ್ತಾನೆ. ಮತ್ತೊಬ್ಬ ಹೆಂಗಸು ಇವರಿಬ್ಬರ ಜೋಡಿಯನ್ನು ನೋಡಿ ಅಳುತ್ತದೆ, ಹಲವರನ್ನು ಈ ಸತಿಪತಿಗಳು ಆಶ್ಚರ್ಯ, ಆತಂಕಗಳಿಂದ ನೋಡುವಂತೆ ಮಾಡುತ್ತಾರೆ.
ಹಾಗಾದರೆ ಏನಿದು ಅಂತ ಈ ಸುದ್ದಿ ಓದುತ್ತಿರುವ ನಿಮಗೂ ಗೊಂದಲವುಂಟಾಗಿರಬಹುದು. ಇವರಿಬ್ಬರು ನಿಜವಾಗಿ ಮದುವೆಯಾದವರಲ್ಲ. ಸುಮ್ಮನೆ ಪ್ರದರ್ಶನ ನೀಡಿದ್ದು, ಬಾಲ್ಯವಿವಾಹ ಸಮಾಜಕ್ಕೆ ಹೇಗೆ ಪಿಡುಗು ಎಂಬುದನ್ನು ಜನಕ್ಕೆ ತೋರಿಸಿಕೊಡಲು ಇವರು ಮಾಡಿದ ಒಂದು ಸಾಮಾಜಿಕ ಪ್ರಯೋಗವಷ್ಟೆ.

ಯೂಟ್ಯೂಬ್ ನ ಕಾಬಿ ಪರ್ಸಿನ್ ಅವರು ವಿಡಿಯೋ ಮಾಡಿ ಎಲ್ಲೆಡೆ ಪ್ರಸಾರ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಸುಮಾರು 33 ಸಾವಿರ ಮಂದಿ ಹೆಣ್ಣು ಮಕ್ಕಳು ಒತ್ತಾಯಪೂರ್ವಕವಾಗಿ ಮದುವೆಯಾಗುತ್ತಾರೆ. ಅದರಿಂದ ಉಂಟಾಗುವ ದುಷ್ಪರಿಣಾಮಗಳೇನು ಎಂಬುದನ್ನು ಈ ಮೂಲಕ ಸಂದೇಶ ಸಾರುವ ಪ್ರಯತ್ನ ಮಾಡಿದ್ದಾರೆ ಕಾಬಿ ಪರ್ಸಿನ್.

ಅಮೆರಿಕದ ಜನ ವೃದ್ಧ ಬಾಲಕಿಯೊಬ್ಬಳನ್ನು ಮದುವೆಯಾಗುವುದನ್ನು ಒಪ್ಪಿಕೊಳ್ಳಲಿಲ್ಲ. ಜಗತ್ತಿನ ಬೇರೆ ರಾಷ್ಟ್ರಗಳಲ್ಲಿಯೂ ಈ ಬದಲಾವಣೆ ಬರಬೇಕು. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ಪ್ರಕಾರ, 2050ರ ವೇಳೆಗೆ ಜಗತ್ತಿನಾದ್ಯಂತ 1.2 ಶತಕೋಟಿ ಬಾಲಕಿಯರನ್ನು ಬಲವಂತವಾಗಿ ಬಾಲ್ಯ ವಿವಾಹಕ್ಕೆ ಪ್ರೇರೇಪಿಸಲಾಗುತ್ತದೆ ಎಂದು ಅಂಕಿಅಂಶ ಹೇಳುತ್ತದೆ. ಇಂತಹ ವೀಡಿಯೋ ಯೂಟ್ಯೂಬ್ ನಲ್ಲಿ ಆಗಾಗ ಬರುತ್ತಿದ್ದು ವಿಶ್ವದೆಲ್ಲೆಡೆ ಲಕ್ಷಾಂತರ ಜನರು ವೀಕ್ಷಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT