ವಿಶೇಷ

೧೧೩ ವರ್ಷದ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ೧೦೦ ಕ್ಕೂ ಹೆಚ್ಚು ಮೊಮ್ಮಕ್ಕಳು, ಮುಮ್ಮಕ್ಕಳು, ಮರಿಮಕ್ಕಳು

Guruprasad Narayana

ಧರ್ಮಪುರಿ: ೧೧೩ ವರ್ಷದ ಕೃಷ್ಣಮ್ಮಾಲ್ ಅಜ್ಜಿ ಸೋಮವಾರ ಧರ್ಮಪುರಿಯಲ್ಲಿ ಕೊನೆಯುಸಿರೆಳೆದಿದ್ದು ಅವರ ಅಂತ್ಯಸಂಸ್ಕಾರಕ್ಕೆ ತಮ್ಮ ಪೀಳಿಗೆಯ ಮೊಮ್ಮಕ್ಕಳು, ಮುಮ್ಮಕ್ಕಳು, ಮರಿಮಕ್ಕಳೆಲ್ಲ ಸಂತತಿಯೇ ೧೦೦ ಹೆಚ್ಚು ಜನ ಸೇರಿದ್ದರು.

೧೯೦೨ ಮೇ ೨೬ ರಂದು ಜನಿಸಿದ ಈ ಮಹಾತಾಯಿ ತಮ್ಮ ಐದು ಪೀಳಿಗೆಯೆ ಸಂತತಿ ಆರೋಗ್ಯಕರ ಜೀವನ ನಡೆಸುವುದನ್ನು ಕಣ್ಣಾರೆ ಕಂಡಿದ್ದಾರಂತೆ. ಮೂರು ವರ್ಷಗಳ  ಹಿಂದೆಯಷ್ಟೇ ಅಜ್ಜಿಯ 110 ನೇ ಹುಟ್ಟುಹಬ್ಬ ಆಚರಿಸಲು ಕುಟುಂಬವೆಲ್ಲ ಒಟ್ಟಿಗೆ ಸೇರಿತ್ತು.

ಅವರ ಮೊಮ್ಮಕ್ಕಳಲ್ಲಿ ಒಬ್ಬರಾದ ವೆಂಹಟಾಚಲಮ್ (೬೫), ನಿವೃತ್ತ ಸರ್ಕಾರಿ ನೌಕರ ಹೇಳುವಂತೆ "ಕೃಷ್ಣಮ್ಮಾಲ್ ಅವರು ಸೇಲಮ್ ಜಿಲ್ಲೆಯ ಸವುರಿಯೂರ್ ನಲ್ಲಿ ಜನಿಸಿದ್ದು. ಅವರು ಧರ್ಮಪುರಿಯ ಮುನ್ನುಸಾಮಿ ಅವರನ್ನು ಮದುವೆಯಾದರು. ಅವರ ಮಗಳು ಸರಸ್ವತಿ ನನ್ನ ತಾಯಿ. ಹೀಗೆ ನಮ್ಮ ಪೀಳಿಗೆ ಜನ್ಮ ತಳೆದದ್ದು"

"ಅವರು ಒಳ್ಳೆಯ ಜೀವನ ಶೈಲಿ ಮತ್ತು ಆಹಾರದಿಂದ ಸುಧೀರ್ಘ ಆರೋಗ್ಯಕರ ಜೀವನ ನಡೆಸಿದರು. ಅವರಿಗೆ ಯಾವುದೇ ರೋಗ ಇರಲಿಲ್ಲ. ಕನಿಷ್ಠ ಜ್ವರ ಅಥವಾ ತಲೆನೋವೂ ಕೂಡ ಅವರಿಗೆ ಬಂದಿರಲಿಲ್ಲ. ನಮ್ಮ ತಂದೆ ಕೂಡ ೮೪ ವರ್ಷ ಬದುಕಿದ್ದರು" ಎಂದು ವಿವರಿಸುತ್ತಾರೆ.

SCROLL FOR NEXT