ವಿಶೇಷ

ಹೊಸ ಪ್ರಭೇದದ ಆಕ್ಟೋಪಸ್ ಪತ್ತೆ ಹಚ್ಚಿದ ವಿಜ್ಞಾನಿಗಳು

Vishwanath S

ಹೊನೊಲುಲು: ಪೆಸಿಫಿಕ್ ಸಾಗರದ ಹವಾಯಿಯನ್ ದ್ವೀಪಗಳಲ್ಲಿ ಹೊಸ ಪ್ರಭೇದದ ಆಕ್ಟೋಪಸ್ ಅನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಫೆಸಿಫಿಕ್ ಸಾಗರದ ನೆಕ್ಕರ್ ದ್ವೀಪದಲ್ಲಿ ಕಳೆದ ಫೆಬ್ರವರಿ 27 ರಂದು ಸಣ್ಣ ಬೆಳಕಿನ ಬಣ್ಣದ ಆಕ್ಟೋಪಸ್ ಅನ್ನು ಸಾಗರದ 2.5 ಮೈಲು ಆಳದಲ್ಲಿ ಪತ್ತೆ ಹಚ್ಚಿರುವುದಾಗಿ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತದ ವಿಜ್ಞಾನಿ ಮೈಕಲ್ ವೆಚ್ಚಿಯೋನ್ ಹೇಳಿದ್ದಾರೆ.

ಹೊಸ ಪ್ರಭೇದದ ಆಕ್ಟೋಪಸ್ ಗೆ ರೆಕ್ಕೆಗಳು ಇರಲಿಲ್ಲ ಮತ್ತು ಅದರ ಎಲ್ಲಾ ಪ್ರತಿ ತೋಳಿನ ಮೇಲೆ ಒಂದು ಸಾಲು ಇತ್ತು ಮತ್ತು ಬೆಳಕಿನ ಬಣ್ಣ ಹೊಂದಿತ್ತು ಎಂದು ಮೈಕಲ್ ಹೇಳಿದ್ದಾರೆ.

ಸಮುದ್ರದ ಆಳದಲ್ಲಿ ಬಾರಿ ತೋಳುಗಳಿಲ್ಲದ ಇಂತಹ ಆಕ್ಟೋಪಸ್ ಕಂಡುಹಿಡಿಯುವುದು ಅಸಾಮಾನ್ಯ ಎಂದು ಮೈಕಲ್ ಹೇಳಿದ್ದಾರೆ.

SCROLL FOR NEXT