ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಜನಿಸಿದ ನವಜಾತ ಶಿಶು 
ವಿಶೇಷ

ಅಚ್ಚರಿ! ಜನಿಸಿದ ಎರಡು ಗಂಟೆಗಳ ನಂತರ ಶೌಚಾಲಯದಲ್ಲಿ ಪತ್ತೆಯಾದ ಮಗು

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವೈದ್ಯರು ಮತ್ತು ಪೊಲೀಸರು ಸ್ವಾತಂತ್ರ್ಯ ದಿನದಂದು ಶೌಚಾಲಯವೊಂದರಲ್ಲಿ ಜನಿಸಿದ್ದ ಎರಡು ಗಂಟೆಗಳ ಬಳಿಕ ಜೀವಂತವಾಗಿರುವ ಮಗುವಿನ್ನು ಕಂಡು ಅಚ್ಚರಿಗೊಂಡಿದ್ದಾರೆ

ಭೋಪಾಲ್:: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವೈದ್ಯರು ಮತ್ತು ಪೊಲೀಸರು ಸ್ವಾತಂತ್ರ್ಯ ದಿನದಂದು ಶೌಚಾಲಯವೊಂದರಲ್ಲಿ ಜನಿಸಿದ್ದ ಎರಡು ಗಂಟೆಗಳ ಬಳಿಕ ಜೀವಂತವಾಗಿರುವ ಮಗುವಿನ್ನು ಕಂಡು ಅಚ್ಚರಿಗೊಂಡಿದ್ದಾರೆ. .
ಘಟನೆ ನಡೆದದ್ದು ಹೀಗೆ- ಬಾಂಗ್ರೋಡ್ ಗ್ರಾಮದ ನಿವಾಸಿಯಾದ 28 ವರ್ಷದ ಪಪಿತ ಗುರ್ಜಾರ್ ಎಂಬಾಕ ಶೌಚಾಲಯದಿಂದ ಹೊರ ಬರುವಾಗ ತೀವ್ರ ಹೊಟ್ಟೆ ನೋವು ಕಂಡು ಬಂದಿರುವುದಾಗಿ ತನ್ನ ಪತಿ ಘನ್ಶ್ಯಾಮ್ ಗುರ್ಜರ್ ಗೆ ತಿಳಿಸಿದ್ದಳು. ಪತಿ ಅವಳನ್ನು ತಕ್ಷಣವೇ ವಿಜಯಪುರ್ ಪ್ರದೇಶ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ ಅಲ್ಲಿ ವೈದ್ಯರು ಪಪಿತ ಳನ್ನು ಪರೀಕ್ಷಿಸಿದಾಗ ಅವಳ ಹೊಟ್ಟೆಯಲ್ಲಿ ಮಗುವೇ ಇರದಿದ್ದದ್ದು ತಿಳಿದಿತ್ತು. 
ಎಂದರೆ ಪಪಿತ ಶೌಚಾಲಯದಲ್ಲಿರುವಾಗಲೇ ಮಗುವಿನ ಜನನ ಆಗಿರಬೇಕೆಂದು ವೈದ್ಯರು ಸಂದೇಹ ವ್ಯಕ್ತಪಡಿಸಿದರು.ಅದೇ ತಕ್ಷಣ ತುರ್ತು ಚಿಕಿತ್ಸಾ ಝನದಲ್ಲಿ ವೈದ್ಯರು ಮತ್ತು ಆಕೆಯ ಪತಿ ಹಳ್ಳಿಯಲ್ಲಿದ್ದ ಅವಳ ಮನೆಗೆ ಬಂದು ಶೌಚಾಲಯದಲ್ಲಿ ಪರಿಶೀಲನೆ ನಡೆಸಿದರು. ಅಲ್ಲಿ ಅದಾಗಲೇ ಹುಟ್ಟಿ ಸುಮಾರು ಎರಡು ಗಂಟೆಗಳಾಗಿದ್ದ ನವಜಾತ ಶಿಶು ಅಳುತ್ತಲಿತ್ತು. ಸುತ್ತಲಿನ ಗಲೀಜು ವಾತಾವರಣದಲ್ಲಿಯೂ ಎರಡು ಗಂಟೆಗಳ್ ಕಾಲ ಜೀವ ಉಳಿಸಿಕೊಂಡಿದ್ದದ್ದು ಆ ಶಿಶುವಿನ ಅದೃಷ್ಟವೋ ಅಥವಾ ತಾಯಿ  ಪಪಿತ  ಪುಣ್ಯವೋ ಹೇಳಲಾಗದು. ಬಳಿಕ ವೈದ್ಯರು ಆ ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ದು ಾದರ ಹುಕ್ಕಳ ಬಳ್ಳಿಯನ್ನು ಕತ್ತರಿಸಿ ತುರ್ತು ನಿಗಾ ಘಟಕದಲ್ಲಿ ಇರಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT