ನಿಕ್‌ ಗುಗ್ಗರ್ 
ವಿಶೇಷ

ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಕಥೆ!

ಇದು ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಕಥೆ. ಉಡುಪಿ ಮೂಲದ ನಿಕ್ಲಾಸ್‌ ನಿಕ್‌ ಸ್ಯಾಮ್ಯುಯೆಲ್‌ ಗುಗ್ಗರ್ ಇದೀಗ ಸ್ವಿಜರ್ಲೆಂಡ್‌ ನ ಸಂಸದ ........

ಉಡುಪಿ: ಇದು ಉಡುಪಿಯ ಅನಾಥ ಮಗು ಸ್ವಿಜರ್ಲೆಂಡ್‌ ಸಂಸದನಾದ ಕಥೆ.  ಉಡುಪಿ ಮೂಲದ ನಿಕ್ಲಾಸ್‌ ನಿಕ್‌ ಸ್ಯಾಮ್ಯುಯೆಲ್‌ ಗುಗ್ಗರ್ ಇದೀಗ ಸ್ವಿಜರ್ಲೆಂಡ್‌ ನ ಸಂಸದ ಇದೇ ಮೊದಲ ಬಾರಿಗೆ  ಭಾರತೀಯ ಮೂಲದ ವ್ಯಕ್ತಿ  ಸ್ವಿಜರ್ಲೆಂಡ್‌  ಸಂಸದರಾಗಿದ್ದು ಸಂಸತ್ತಿನ ಅತ್ಯಂತ ಕಿರಿಯ ಸದಸ್ಯ ಎನ್ನುವ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ.
ಇಲ್ಲಿನ ಇನ್ನೊಂದು ವಿಶೇಷವೆಂದರೆ ಉಡುಪಿಯ ಮಿಷನ್‌ ಆಸ್ಪತ್ರೆಯಲ್ಲಿ 4 ದಶಕಗಳ ಹಿಂದೆ ಹೆತ್ತ ತಾಯಿ ತೊರೆದು ಹೋಗಿದ್ದ ಮಗುವೇ ಇಂದು ಈ ಉನ್ನತ ಸ್ಥಾನ ಪಡೆದ ವ್ಯಕ್ತಿ!
ನಿಕ್‌ ಗುಗ್ಗರ್‌(47) 2017ರ ನ. 27ರಂದು ಇವಾಂಜೆಲಿಕಲ್‌ ಪೀಪಲ್ಸ್‌ ಪಾರ್ಟಿ(ಇಪಿಪಿ) ಅಭ್ಯರ್ಥಿಯಾಗಿ ಸ್ವಿಸ್‌ ನ್ಯಾಷನಲ್‌ ಕೌನ್ಸಿಲ್‌ ನ ಸದಸ್ಯತ್ವ ಪಡೆದಿದ್ದಾರೆ.
1970ರ ಮೇ 1ರಂದು ಉಡುಪಿಯ ಮಿಷನ್‌ ಆಸ್ಪತ್ರೆಯಲ್ಲಿ ಜನಿಸಿದ್ದ ಇವರನ್ನು ಅವರ ತಾಯಿ ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಳು ಆಗ ಜರ್ಮನಿ ಮಿಷನರಿಗೆ ಸೇರಿದ ಸ್ವಿಜರ್ಲೆಂಡ್‌ನ ಫ್ರಿಟ್ಸ್‌ ಗುಗ್ಗರ್‌ ಹಾಗೂ ಎಲಿಜಬೆತ್‌ ಗುಗ್ಗರ್‌ ಅವರುಗಳು  ಕೇರಳದ ತಲಶ್ಶೇರಿಯಲ್ಲಿ ಅನಾಥಾಶ್ರಮ ನಡೆಸುತ್ತಿದ್ದು ಉಡುಪಿಯಲ್ಲಿದ್ದ ಈ ಮಗುವನ್ನು ದತ್ತು ಪಡೆದಿದ್ದರು. ಇಲ್ಲಿಂದ ಬಳಿಕ ಅವರಿಗೆ ಜನಿಸಿದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸ್ವಿಜರ್ಲೆಂಡ್‌ಗೆ ತೆರಳಿದ ಆ ದಂಪತಿಗಳು ಅಲ್ಲಿನ ಪ್ರೊಟೆಸ್ಟೆಂಟ್‌ ಚರ್ಚ್‌ಗಳ ಅಭಿವೃದ್ಧಿ ಯೋಜನೆ ಹಾಗೂ ಕಿವುಡ,ಮೂಕರ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸತೊಡಗಿದರು.
ಇದರಿಂದ ನಿಕ್ಲಾಸ್‌  ಗೆ ಭಿನ್ನ ಸಾಮರ್ಥ್ಯ‌ದ ಜನರೊಂದಿಗೆ ಸಂಪರ್ಕ ಹೊಂದುವ ಅವಕಾಶ ಸಿಕ್ಕಿತು, ಅವರು ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಆಸಕ್ತಿ ತಾಳಿದರು.  ಮೆಕ್ಯಾನಿಕ್‌ ಶಿಷ್ಯ ವೃತ್ತಿಯೊಂದಿಗೆ ಶಿಕ್ಷಣ, ಕೊಲಂಬಿಯಾದಲ್ಲಿ ಸಾಮಾಜಿಕ ಇಂಟರ್ನ್‌ಶಿಪ್‌ ಪೂರೈಸಿದ ನಿಕ್ಲಾಸ್‌  ಜನರೊಂದಿಗಿನ ಒಡನಾಟ ಮುಂದುವರಿಸಿದರಲ್ಲದೆ ಸಾಮಾಜಿಕ ಕಾರ್ಯಕರ್ತರ ಪರ ಕೆಲಸ ಮಾಡಿದರು. 1994ರಲ್ಲಿ ವಿವಾಹವಾದ ಇವರು ಇದೀಗ , ಮೂವರು ಮಕ್ಕಳನ್ನು ಹೊಂದಿದ್ದಾರೆ.
ಚಳಿಗಾಲದ ರೆಸ್ಟೋರೆಂಟ್‌ ಕಾನ್ಕಾರ್ಡಿಯಾ ವನ್ನು ನಡೆಸುತ್ತಿರುವ ನಿಕ್ಲಾಸ್‌  ಇವಾಂಜೆಲಿಕಲ್‌ ಪೀಪಲ್ಸ್‌ ಪಾರ್ಟಿ(ಇಪಿಪಿ) ಕೇಂದ್ರ ಮಂಡಳಿ ಸದಸ್ಯರಾಗಿದ್ದಾರೆ.  2002-2014ರ ಅವಧಿಯಲ್ಲಿ ಸಿಟಿ ಕೌನ್ಸಿಲ್‌ ಸದಸ್ಯರಾಗಿದ್ದ ಇವರು 2008ರಿಂದ ಇಪಿಪಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು. 2014-2017ರ ಅವಧಿಯಲ್ಲಿ ಜ್ಯೂರಿಚ್‌ ಕ್ಯಾಂಟನ್‌ ಕೌನ್ಸಿಲ್‌ ಸದಸ್ಯರಾಗಿಯೂ ಅವರು ಅನುಭವಗಳಿಸಿದ್ದಾರೆ. ರಾಜಕೀಯ ಸಂವಹನದಲ್ಲಿ ಉನ್ನತ ಅಧ್ಯಯನ ಮಾಡಿದ ನಿಕ್ಲಾಸ್‌ ಸುನಾಮಿ ನಿಗಾ ತಂಡದ ಸದಸ್ಯರಾಗಿದ್ದರು. ಬಡವರಿಗೆ ಅನುಕೂಲ ಕಲ್ಪಿಸುವ ಕೆಲಸದಲ್ಲಿ ತೊಡಗಿದ್ದ ಇವರು  ಕಡಿಮೆ ಕ್ಯಾಲರಿಯುಳ್ಳ ಆಯುರ್ವೇದ ಶುಂಠಿ ಪಾನೀಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!