ವಿದ್ಯಾರ್ಥಿಗಳಾದ ಶ್ರಾವಣಿ ಎನ್ ಮತ್ತು ಪುರುಷೋತ್ತಮ್ ಎನ್
ಬೆಂಗಳುರು: ಅಡಿಗೆ ಅನಿಲ ಸಿಲೆಂಡರ್ ಗಳ ಸ್ಪೋಟ ಇತ್ತೀಚೆಗೆ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳುರಿನ ಇಬ್ಬರು ಸಹೋದರರು ಹೊಸ ಸಾಧನವೊಂದನ್ನು ಕಂಡು ಹಿಡಿದಿದ್ದಾರೆ. ಅಡಿಗೆ ಅನಿಲ ಸೋರಿಕೆಯನ್ನು ಮುಂಚಿತವಾಗಿ ಕಂಡು ಹಿಡಿದು ಸಂದೇಶ ತಿಳಿಸುವ ಸೆನ್ಸಾರ್ ಸಾಧನವೊಂದನ್ನು ಅವರು ಅಭಿವೃದ್ದಿ ಪಡಿಸಿದ್ದಾರೆ.
ಉತ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಎನ್. ಪುರುಷೋತ್ತಮ್ ಹಾಗೂ ದಯಾನಂದ ಸಾಗರ ಕಾಲೇಜಿನಲ್ಲಿ ಪಿಯು ವ್ಯಾಸಂಗದಲ್ಲಿ ತೊಡಗಿರುವ ಶ್ರಾವಣಿ ಈ ಸಾಧನವನ್ನು ರಚಿಸಿದ್ದು ದಯಾನಂದ ಸಾಗರ ಕಾಲೇಜಿನಲ್ಲಿ ನಡೆದ ಟ್ಯಾಲೆಂಟ್ ಸರ್ಚ್ ಸ್ಪರ್ಧೆಯಲ್ಲಿ ಪ್ರದರ್ಶಿಸಿದ್ದಾರೆ.
"ಆಕಸ್ಮಿಕ ಬೆಂಕಿ ಅವಘಡ ಮತ್ತು ಅನಿಲದ ಸಿಲೆಂಡರ್ ಗಳ ಸ್ಪೋಟ ಸಮಸ್ಯೆಗೆ ಪರಿಹಾರವಾಗಿ, ನಾವು ಮೈಕ್ರೋ-ನಿಯಂತ್ರಕ, MQ5 ಸಂವೇದಕವಾದ ಆರ್ಡುನೊ ಯುನೊ ನ್ನು ಬಳಸುತ್ತೇವೆ, ಇದು ವಿಶೇಷವಾಗಿ ಎಲ್ಪಿಜಿ ಗ್ಯಾಸ್, ಎಲ್ಸಿಡಿ, ವೋಲ್ಟೇಜ್ ಅನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಒಂದು ಸಂಭಾವ್ಯ ಮಾಪಕ (ವೋಲ್ಟೇಜ್ ಅನ್ನು ಅಳೆಯುವ ಉಪಕರಣ) ಆಗಿದ್ದು ಗ್ಯಾಸ್ ಲೀಕ್ ಇದ್ದರೆ, ಎಲ್ಇಡಿ ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಸರ್ವೋ ಮೋಟರ್ ಸ್ವಯಂಚಾಲಿತವಾಗಿ ಸಿಲಿಂಡರ್ ಅನ್ನು ಆಫ್ ಮಾಡುತ್ತದೆ. " ತಮ್ಮ ಹೊಸ ಸಾಧನದ ಕುರಿತು ಪುರುಷೋತ್ತಮ್ ವಿವರಿಸಿದರು.]
"ಇದರಲ್ಲಿ, ಮಾನವ ಹಸ್ತಕ್ಷೇಪ ಅಗತ್ಯವಿಲ್ಲ. ಹೊರಟರು. ಮಹಿಳೆಯರನ್ನು, ವಿಶೇಷವಾಗಿ ತಾಯಂದಿರನ್ನು ಉಳಿಸುವುದು ನಮ್ಮ ಉದ್ದೇಶ. ನಾವು GSM ತಂತ್ರಜ್ಞಾನವನ್ನು ಕೂಡ ಸೇರಿಸಿದರೆ ಅದು ಇನ್ನೂ ಹೆಚ್ಚು ಉತ್ತಮವಾಗಿರುತ್ತದೆ, ಏಕೆಂದರೆ ಆಗ ಸಂದೇಶಗಳನ್ನು ಕಳುಹಿಸಲು ಸಹ ಸಾಧ್ಯವಾಗುತ್ತದೆ. ನಾವು ಮೂಲಮಾದರಿಯನ್ನು ಇನ್ನಷ್ಟು ಅಭಿವೃದ್ದಿ ಪಡಿಸಲು ಇಚ್ಚಿಸಿದ್ದೇವೆ" ಪುರುಷೋತ್ತಮ್ ಹೇಳಿದರು.
"ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಎಂಬ ಸಂಘಟನೆಯೊಂದಿಗೆ ನಾವು ಸಂಪರ್ಕ ಇಟ್ಟುಕೊಂಡಿದ್ದೇವೆ. ಶಾಲೆಯಲ್ಲಿ ನಾವು ಸಕ್ರಿಯ ಲ್ಯಾಬ್ ಅನ್ನು ಹೊಂದಿದ್ದೇವೆ ಮತ್ತು ಈ ಮಾದರಿಯನ್ನು ಅಲ್ಲಿ ವಿನ್ಯಾಸಗೊಳಿಸಿದ್ದೇವೆ. ಗ್ರೀನ್ ಹ್ಯಾಕಾಥಾನ್ ಮತ್ತು ಮೇಕರ್ ಫಾಯರ್ ಮುಂತಾದ ಹಲವು ಸ್ಪರ್ಧೆಗಳಲ್ಲಿ ನಾವು ಭಾಗವಹಿಸಿದ್ದೇವೆ." ಪುರುಷೋತ್ತಮ್ ಅವರ ಕಂಪ್ಯೂಟರ್ ಶಿಕ್ಷಕಿ ಶೃಉತಿ ಶಶಿಕುಮಾರ್ ಹೇಳಿದರು.
ಕೃಷ್ಣಮೂರ್ತಿ ಹಾಗೂ ಕಲಾವತಿ ದಂಪತಿ ಈ ಯುವ ಸಾಧಕರ ಪೋಷಕರಾಗಿದ್ದು ಕೃಷ್ಣಮೂರ್ತಿ ಆಟೋ ಚಾಲಕರಾದರೆ ಕಲಾವತಿ ಟೈಲರಿಂಗ್ ವೃತ್ತಿಯಲ್ಲಿದ್ದಾರೆ. ಮಕ್ಕಳ ಈ ಸಾಧನೆಯಿಂದ ಅವರಿಗೆ ಅತ್ಯಂತ ಹೆಮ್ಮೆಯಾಗಿರುವುದಾಗಿ ಅವರು ತೀಲಿಸಿದ್ದಾರೆ.