ವಿಶೇಷ

ವಿಜಯಪುರ: ಸೈನ್ಯ ಸೇರಲು ಪ್ರೇರಣೆ, ಸೈನಿಕ ಶಾಲೆ ಶಿಕ್ಷಕನಿಂದ ಸೈಕಲ್ ಜಾಥಾ

Raghavendra Adiga
ವಿಜಯಪುರ: ಸೈನ್ಯ ಸೇರುವಂತೆ ಯುವಕರಿಗೆ ಪ್ರೇರಣೆ ನೀಡುವ ಸಲುವಾಗಿ ವಿಜಯಪುರದ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ 700 ಕಿಮೀ ನಷ್ಟು ದೀರ್ಘ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.
ವಿಜಯಪುರದಿಂದ ಮಡಿಕೇರಿಯವರೆಗೆ ತಮೋಜಿತ್ ಬಿಸ್ವಾಸ್ ಪ್ರಯಾಣಿಸಲಿದ್ದು ಒಟ್ಟು ಆರು ಜಿಲ್ಲೆಗಳ ಮೂಲಕ 700 ಕಿಮೀ ದೂರವನ್ನು ಕ್ರಮಿಸಲಿದ್ದಾರೆ. ದಿನಕ್ಕೆ 200 ಕಿಮೀ ದೂರ ಕ್ರಮಿಸುವ ಗುರಿಯೊದನೆ ಪ್ರಯಾಣ ಹೊರಟಿರುವ ಇವರು ಅ.31 ರಂದು ಕೊಡಗಿನ ಸೈನಿಕ ಶಾಲೆ ತಲುಪಲಿದ್ದಾರೆ.
"ದೇಶರಕ್ಷಣೆ ಅತ್ಯಂತ ಪವಿತ್ರ ಕೆಲಸವಾಗಿದೆ. ಅಧಿಕ ಅಂಕಗಳನ್ನು ಗಳಿಸುವುದು ಮಾತ್ರವೇ ದೊಡ್ಡ ಸಾಧನೆ ಅಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸವಾಗುವಂತಹಾ ಶಿಕ್ಷಣ ಬೇಕು. ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ ಬೆಳೆಸಬೇಕು. ದೇಶದ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬ ಯುವಕರೂ ಸಿದ್ದರಾಗಬೇಕು" ತಮೋಜಿತ್ ಬಿಸ್ವಾಸ್ ವಿಶ್ವಾಸದಿಂದ  ಹೇಳುತ್ತಾರೆ.
ಸೈನ್ಯದ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಇಂತಹಾ ಸಾಹಸಕ್ಕೆ ಮುಂದಾದ ತಮೋಜಿತ್ ಬಿಸ್ವಾಸ್ ಅವರಿಗೆ ಸೈನಿಕ ಶಾಲೆ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
SCROLL FOR NEXT