ಡೆನಿಸ್ ಮುವ್ವೆಜ್ ಹಾಗೂ ನಾಡಿಯಾ ಮುರಾದ್ 
ವಿಶೇಷ

ಲೈಂಗಿಕ ಹಿಂಸೆಯ ವಿರುದ್ಧ ಹೋರಾಡಿದ ಚಾಂಪಿಯನ್ನರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಗರಿ

ಲೈಂಗಿಕ ಹಿಂಸಾಚಾರದ ವಿರುದ್ಧದ ಹೋರಾಡಿದ ಚಾಂಪಿಯನ್ಸ್ ಕಾಂಗೋಲೀಸ್ ವೈದ್ಯ ಡೆನಿಸ್ ಮುವ್ವೆಜ್ ಹಾಗೂ ಯಜೂದಿ ಕಾರ್ಯಕರ್ತ ನಾಡಿಯಾ ಮುರಾದ್ ಅವರುಗ....

ಓಸ್ಲೋ: ಲೈಂಗಿಕ ಹಿಂಸಾಚಾರದ ವಿರುದ್ಧದ ಹೋರಾಡಿದ ಚಾಂಪಿಯನ್ಸ್ ಕಾಂಗೋಲೀಸ್ ವೈದ್ಯ ಡೆನಿಸ್ ಮುವ್ವೆಜ್ ಹಾಗೂ ಯಜೂದಿ ಕಾರ್ಯಕರ್ತ  ನಾಡಿಯಾ ಮುರಾದ್ ಅವರುಗಳು ಸೋಮವಾರ ನೊಬೆಲ್ ಶಾಂತಿ ಪುರಸ್ಕಾರ ಸ್ವೀಕರಿಸಲಿದ್ದಾರೆ. ಇವರು ಈ ವರ್ಷ ಯುದ್ಧದ ಆಯುಧವಾಗಿ ಅತ್ಯಾಚಾರವನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಮಹತ್ವದ ವಿಚಾರಗಳನ್ನು ಬೆಳಕಿಗೆ ತಂದಿದ್ದರು.
ಆಸ್ಟ್ರಿಯಾದ ನಾರ್ವೆ ನೊಬೆಲ್ ಸಮಿತಿಯು "ಲೈಂಗಿಕ ಆಕ್ರಮಣವನ್ನು ಯುದ್ಧದಲ್ಲಿನ ಒಂದು ಆಯುಧವಾಗಿ ಬಳಸುವುದರ ವಿರುದ್ಧ ಅವರು ಮಾಡುವ ಪ್ರಯತ್ನಗಳನ್ನು ಗುರುತಿಸಿ" ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದೆ.
ಮುವ್ವೆಜ್  ತನ್ನ ಶಸ್ತ್ರಚಿಕಿತ್ಸಾ ಪರಿಣತಿಗಾಗಿ "ಡಾಕ್ಟರ್ ಮುವ್ವೆಜ್" ಎಂದು ಕಲ್ರೆಯಲ್ಪಡುತ್ತಾರೆ. ಇವರು ಯುದ್ಧದ ಸಮಯದಲ್ಲಿ  ಮಹಿಳೆಯರಿಗೆ ಆಗುವ ಹಠಾತ್ ಗಾಯಗಳು ಮತ್ತು ತೀವ್ರವಾದ ಭಾವನಾತ್ಮಕ ಆಘಾತಗಳಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ಇವರು ಇಪ್ಪತ್ತು ವರ್ಷಗಳ ಕಾಲ ಜ್ಕಳೆದಿದ್ದಾರೆ. ಯುದ್ಧದ ವೇಳೆ ನಡೆಯುವ  ಲೈಂಗಿಕ ಹಿಂಸಾಚಾರದ ಬಗ್ಗೆ  ಜಾಗತಿಕ ನಾಯಕರು ಮೌನ ವಹಿಸುವುದನ್ನು ಅವರು ಖಂಡಿಸಿದ್ದಾರೆ.
"ನಾವು ರಾಸಾಯನಿಕ ಶಸ್ತ್ರಾಸ್ತ್ರಗಳು, ಜೈವಿಕ ಆಯುಧಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಡಲು ಸಮರ್ಥರಾಗಿದ್ದೇವೆ ಎಂದು ಅವರು 2016 ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ನಾವು ಅತ್ಯಾಚಾರವನ್ನು ಯುದ್ಧದ ಆಯುಧದಂತೆ ಬಳಸುವುದನ್ನು ತಡೆಯಬೇಕು ಎಂದಿದ್ದಾರೆ.
ಇನ್ನೋರ್ವ ಪ್ರಶಸ್ತಿ ವಿಜೇತರಾದ ಮುರಾದ್ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರ ಸೆರೆಯಿಂದ ಪಾರಾಗಿ ಬಂದವರಾಗಿದ್ದು ಯಾಜಿದೀಸ್ ಹಕ್ಕುಗಳಿಗಾಗಿ ದಣಿವರಿಯದೆ ಹೋರಾಡುತ್ತಿದ್ದಾರೆ.ಇವರು ಕುರ್ದಿಷ್-ಮಾತನಾಡುವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಇರಾಕ್ ಮತ್ತು ಸಿರಿಯಾದ ಸ್ವಾತಂತ್ರ್ಯ ಕುರಿತು ಹೇಳುತ್ತಾರೆ.
2014ರಲ್ಲಿ ಇವರನ್ನು ಭಯೋತ್ಪಾದಕರು ವಶಕ್ಕೆ ಪಡೆದಿದ್ದರು. ಅಲ್ಲಿ ಆಕೆ ಬಲವಂತದ ವಿವಾಹ, ಭೀಕರ ಸಾಮೂಹಿಕ ಅತ್ಯಾಚಾರ, ಹಿಂಸಾಚಾರಕ್ಕೆ  ಒಳಗಾಗಿದ್ದರು.
ಈ ಜೋಡಿಯು ಲೈಂಗಿಕ ಹಿಂಸಾಚಾರವನ್ನು ಎದುರಿಸಿದ ಸಾವಿರಾರು ಮಹಿಳೆಯರಿಗೆ ತಮ್ಮ ಅತ್ಯುನ್ನತ ಗೌರವವನ್ನು ಸಮರ್ಪಣೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT