ವಿಶೇಷ

ಉತ್ತರ ಪ್ರದೇಶ: ಅತ್ಯಾಚಾರದಿಂದ ರಕ್ಷಣೆಗಾಗಿ 'ರೇಪ್ ಪ್ರೂಫ್' ಒಳಉಡುಪು ತಯಾರಿಸಿದ ಯುವತಿ

Raghavendra Adiga
ಫರೂಖಾಬಾದ್ (ಉತ್ತರ ಪ್ರದೇಶ): ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಇಂತಹಾ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ಉತ್ತರ ಪ್ರದೇಶದ ಯುವತಿಯೊಬ್ಬಳು ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಒಳಉಡುಪನ್ನು ತಯಾರಿಸಿದ್ದಾರೆ.
ಉತ್ತರ ಪ್ರದೇಶ ಫರೂಖಾಬಾದ್ ನ ಸೀನು ಕುಮಾರಿ ಎನ್ನುವ ಯುವತಿ ಈ ವಿಶೇಷ ಉಡುಪಿನ ಅವಿಷ್ಕಾರ ಮಾಡಿದ್ದಾರೆ. ಜಿಪಿಎಸ್ ತಂತ್ರಜ್ಞಾನ ಅಳವಡಿಸಿರುವ ಈ ಉಡುಪಿನಲ್ಲಿ ಚಿಕ್ಕ ಲಾಕ್ ಸಹ ಇದ್ದು ಇದನ್ನು ತೆರೆಯಲು ಪಾಸ್ ವರ್ಡ್ ನೀಡುವುದು ಅಗತ್ಯ. ಇನ್ನು ಇದರಲ್ಲಿ ಜಿಪಿಎಸ್ ಅಳವಡಿಸಿರುವ ಕಾರಣ ಉಡುಪು ಧರಿಸಿದವರಿದ್ದ ಸ್ಥಳದ ಮಾಹಿತಿಯನ್ನು ಅವರ ಪೋಷಕರು, ಆಪ್ತರಿಗೆ ತಿಳಿಸಲು ಅನುಕೂಲಾಗಲಿದೆ.
ಉಡುಪಿನ ನಡುವೆ ಲಾಕ್ ಇದ್ದರೆ ಕಡೆಯ ಭಾಗದಲ್ಲಿ ಕ್ಯಮಾರಾ ಅಲವಡಿಸಿದೆ. ಯಾವುದೇ ಕಾಮುಕರು, ಅತ್ಯಾಚಾರಿಗಳ ಗುಂಪು ಾತ್ಯಾಚಾರಕ್ಕೆ ಪ್ರಯತ್ನಿಸಿದಾಗ  ಜಿಪಿಎಸ್ ಮೂಲಕ ಸಂದೇಶ ಕಳಿಸಬಹುದಾಗಿದೆ. ಆಗ ಅತ್ಯಾಚಾರಕ್ಕೆ ಪ್ರಯತ್ನಿಸುವವರ ಮುಖವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಅವಕಾಶವಿದ್ದು ಅತ್ಯಾಚಾರಿಗಳ ಪತ್ತೆಗೆ ಇದರಿಂದ ಅನುಕೂಲವಾಗಲಿದೆ.
ಸೀನು ಕುಮಾರಿ ಈ ವಿಶೇಷ ಒಳ ಉಡುಪು ತಯಾರಿಕೆಗಾಗಿ 4300 ರೂ. ಖರ್ಚು ಮಾಡಿದ್ದಾರೆ ಮತ್ತು ಅವರೀಗ ಈ ಉಡುಪನ್ನು ಅಲಹಾಬಾದ್ ನ ನ್ಯಾಷನಲ್ ಇನೋವೆಷನ್ ಫೌಂಡೇಶನ್ ಗೆ ನೀಡಲು ನಿರ್ಧರಿಸಿದ್ದಾರೆ.
SCROLL FOR NEXT