ಬೆಂಗಳೂರು: ಹಿಂದೂಗಳ ಪವಿತ್ರ ಹಬ್ಬ ಮತ್ತೊಂದು ಯುಗಾದಿ ಆಗಮಿಸುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ.
ಹೊಸ ಬಟ್ಟೆ ಖರೀದಿಸಿ, ಮನೆಗೆ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಿ, ಮನೆಯ ಹೊರಭಾಗ ರಂಗೋಲಿ ಹಾಕಿ ಯುಗಾದಿಯನ್ನು ಜನ ಸ್ವಾಗತಿಸುತ್ತಾರೆ. ಹೊಸ ವರ್ಷದ ಆರಂಭದ ದಿನವಾದ ಯುಗಾದಿ ದಿನದಂದು ಮನೆಯವವೆರಲ್ಲಾ ಸೇರಿ ದೇವಸ್ಠಾನಗಳಿಗೆ ಭೇಟಿ ನೀಡುತ್ತಾರೆ.
ಯುಗಾದಿ ಹಬ್ಬದಂದು ಬೇಕಾಗುವ ವಸ್ತುಗಳ ಖರೀದಿಗೆ ಬೆಂಗಳೂರಿನಲ್ಲಿ 5 ಪ್ರಮುಖ ಸ್ಥಳಗಳು ಪ್ರಸಿದ್ಧಿಯಾಗಿವೆ.
ನಗರದ ಎಲ್ಲಾ ಮಾರುಕಟ್ಟೆಗಳಿಗಿಂತ ಅತಿ ದೊಡ್ಡ ಹಾಗೂ ಸದಾ ಬ್ಯುಸಿಯಾಗಿರುತ್ತದೆ ಕೆ.ಆರ್ ಮಾರುಕಟ್ಟೆ, ಎಲ್ಲಾ ರೀತಿಯ ತರಕಾರಿ, ಹೂವು, ಹಣ್ಣು ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಜಯನಗರ 4ನೇ ಬ್ಲಾಕ್ ಮಾರುಕಟ್ಟೆಯಲ್ಲಿ ಮಾಡುವ ಶಾಪೀಂಗ್ ನಿಂದ ನಿಮಗೆ ಖುಷಿಯಾಗುತ್ತದೆ, ರಸ್ತೆ ಅಥವಾ ದೊಡ್ಡ ಅಂಗಡಿಗಳಲ್ಲಿ ನಿಮಗೆ ಯಾವ ರೀತಿ.ಯ ವಸ್ತುಗಳು ಬೇಕೋ ಅದೆಲ್ಲಾ ಸಿಗುತ್ತದೆ, ಜಯನಗರದಲ್ಲಿ ನೀವು ಅಂಗಡಿ ಸಿಲ್ಕ್, ವರಲಕ್ಷ್ಮಿ ಸಿಲ್ಕ್, ಸಾರಿ ಅಂಗಡಿಗಳಿಗೆ ಭೇಟಿ ನೀಡಿ ಖರೀದಿಸಬಹುದಾಗಿದೆ. ಖರೀದಿಸಿದ ಸೀರೆಗಳನ್ನು ಸಾಂಪ್ರಾದಾಯಿಕವಾಗಿ ಲಕ್ಷ್ಮಿ ದೇವತೆ ಮುಂದೆ ಇರಿಸಿ, ನಂತರ ಗಿಫ್ಟ್ ಕೊಡಲಾಗುತ್ತದೆ.
ನಗದ ಪ್ರಮುಖ ಹಾಗೂ ಪ್ರಸಿದ್ಧ ಮಾರ್ಕೆಟ್ ಗಳಲ್ಲಿ ಗಾಂಧಿ ಬಜಾರ್ ಪ್ರಮುಖವಾದದ್ದು, ಹಣ್ಣು, ತರಕಾರಿ, ಕಬ್ಬು ಸೇರಿದಂತೆ ಹಲ ಬಗೆಯ ಸಾಮಾನಗಳು ದೊರೆಯುತವೆ.ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೆ ಕೂಡ ಖರೀದಿಸಬಹುದಾಗಿದೆ.
ಇನ್ನೂ ಮಲ್ಲೇಶ್ವರಂ ಕೂಡ ಶಾಪಿಂಗ್ ಗೆ ಹೇಳಿ ಮಾಡಿಸಿದಂತಿದೆ. 8 ಕ್ರಾಸ್, ಸಂಪಿಗೆ ರೋಡ್ ನ ಪ್ರಮುಖ ಅಂಗಡಿಗಳಲ್ಲಿ ನೀವು ಖರೀದಿಸಬಹುದಾಗಿದೆ. ಯುಗಾದಿ ಬೇಕಾಗುವ ಎಲ್ಲಾ ರೀತಿಯ ವಸ್ತುಗಳು ಲಭ್ಯವಿದೆ,. ಯುಗಾದಿ ಪಚಡಿ, ಹಬ್ಬದ ಪ್ರಮುಖ ತಿಂಡಿ ಊಟ, ರಂಗೋಲಿ ಪುಡಿ, ಪೂಜಾ ಸಾಮಾಗ್ರಿ, ತೆಂಗಿನಕಾಯಿ ಸೇರಿದಂತೆ ಎಲ್ಲಾ ರೀತಿಯ ಪದಾರ್ಥಗಳು ಸಿಗಲಿವೆ.
ಯಶವಂತಪುರ ಮಾರುಕಟ್ಟೆ ಮತ್ತೊಂದು ಪ್ರಮುಥಖ ಖರೀದಿ ಸ್ಥಳವಾಗಿದೆ, ಈ ಬಾರಿಯ ಹಬ್ಬಕ್ಕಾಗಿ ಯಶವಂತಪುರದಲ್ಲಿ ಯುಗಾದಿ ಹಬ್ಬದ ಮೇಳ ಆಯೋಜಿಸಲಾಗಿದೆ, ಹೋಲ್ ಸೇಲ್ ದರದಲ್ಲಿ ವಸ್ತ್ರ ಮತ್ತು ವಿವಿಧ ಉತ್ಪನ್ನಗಳನ್ನು ನೀವಿಲ್ಲಿ ಖರೀದಿಸಬಹುದಾಗಿದೆ, ಹಾಗೂ ನಿಮ್ಮ ಪ್ರೀತಿ ಪಾತ್ರರಿಗೆ ಮೆಚ್ಚಿನ ಉಡುಗೊರೆಯನ್ನು ನೀಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics