ವಿಶೇಷ

ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮುಸ್ಲಿಂ ವಿದ್ಯಾರ್ಥಿ!

Raghavendra Adiga
ಬೆಂಗಳೂರು: ಹಿಂದೂಗಳ ಪಾಲಿನ ಪವಿತ್ರ ಗ್ರಂಥಗಳಲ್ಲಿ ಒಂದಾದ ಭಗವದ್ಗೀತೆ ಕುರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಂಗಳೂರಿನ ಮುಸ್ಲಿಂ ವಿದ್ಯಾರ್ಥಿ ಶೇಖ್ ಮೊಯಿನುದ್ದೀನ್ ಪ್ರಥಮ ಸ್ಥಾನ ಗಳಿಸಿದ್ದಾನೆ.
ಬೆಂಗಳೂರು ಸುಭಾಷ್ ಮೆಮೋರಿಯಲ್ ಆಂಗ್ಲ ಮಾದ್ಯಮ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ ಮೊಯಿನುದ್ದೀನ್ ಸಂಜಯ್ ನಗರದ ಇಸ್ಕಾನ್ ಸಂಸ್ಥೆ ಆಯೋಜಿಸಿದ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣನಾಗಿದ್ದಾನೆ.
ಭಗವದ್ಗೀತೆ ಕುರಿತು ಮಕ್ಕಳಲ್ಲಿರುವ ಜ್ಞಾನದ ಮಟ್ಟ ಅರಿಯಲು ಇಸ್ಕಾನ್ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ರಾಜ್ಯದ 14 ಶಾಲೆಗಳು ಪಾಲ್ಗೊಂಡಿದ್ದವು.
ಇದಕ್ಕೂ ಮೂರು ವರ್ಷಗಳ ಹಿಂದೆ ಇಸ್ಕಾನ್ ಸಂಸ್ಥೆ ಮುಂಬೈನಲ್ಲಿ ಆಯೋಜಿಸಿದ್ದ ಸ್ಪರ್ಧೆಯೊಂದರಲ್ಲಿ 12 ವರ್ಷದ ಮುಸ್ಲಿಂ ಬಾಲಕಿ ಮರಿಯಮ್ ಆಸಿಫ್ ಸಿದ್ದಿಕಿ ಪ್ರಥಮ ಬಹುಮಾನ ಗಳಿಸಿದ್ದಳು.
SCROLL FOR NEXT