ಸಂಗ್ರಹ ಚಿತ್ರ 
ವಿಶೇಷ

ಸಲಿಂಗಕಾಮ ಅಪರಾಧವಲ್ಲ: ಸಲಿಂಗ ವಿವಾಹ ಕಾನೂನುಬದ್ದ ಎನ್ನುವ ದೇಶಗಳಾವುದು ಗೊತ್ತೆ?

ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಇಂದು (ಗುರುವಾರ) ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ನವದೆಹಲಿ: ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಇಂದು (ಗುರುವಾರ) ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ತೀರ್ಪು ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ವಿರುದ್ಧ ಹೋರಾಟ ಬಹಳ ಹಿಂದಿನಿಂದ ನಡೆದು ಬಂದಿತ್ತು.  1861ರಲ್ಲೇ ಪ್ರಕೃತಿಯ ವಿರುದ್ಧದ ಲೈಂಗಿಕತೆಯನ್ನು ಕಾನೂನು ಪ್ರಕಾರ ಅಪರಾಧ ಎನ್ನುವ ನಿಯಮ ಜಾರಿಯಲ್ಲಿತ್ತು.
ಇಂದು ಸುಪ್ರೀಂ ತೀರ್ಪು ನೀಡುವುದರೊಡನೆ ಜಾಗತಿಕವಾಗಿ ಸಲಿಂಗ ಕಾಮವನ್ನು ಒಪ್ಪಿಕೊಂಡಿರುವ 25 ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದಾಗಲೇ ಸಲಿಂಗ ಕಾಮವನ್ನು ಕಾನೂನುಬದ್ದಗೊಳಿಸಿದ ದೇಶಗಳಾವುವು ಎನ್ನುವುದನ್ನು ನಾವಿಲ್ಲಿ ನೋಡೋಣ- 
ನೆದರ್ಲ್ಯಾಂಡ್ಸ್: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶ ನೆದರ್ಲ್ಯಾಂಡ್ಸ್ ಇಲ್ಲಿ ಏಪ್ರಿಲ್ 1, 2001ರಿಂದ ಸಲಿಂಗ ಕಾಮ ಕಾನೂನುಬದ್ದವೆನ್ನುವ ನೀತಿ ಜಾರಿಗೆ ಬಂದಿದೆ.
ಬೆಲ್ಜಿಯಂ: ಜೂನ್ 1, 2003 ರಂದು ಸಲಿಂಗ ಮದುವೆಗೆ ಬೆಲ್ಜಿಯಂ ರಾಷ್ಟ್ರ ಕಾನೂನಿನ ಮಾನ್ಯತೆ ನೀಡಿದೆ.
ಮೆಕ್ಸಿಕೋ: ಮೆಕ್ಸಿಕೋರಲ್ಲಿ ಸಲಿಂಗಕಾಮವನ್ನು ರಾಷ್ಟ್ರ ಕೆಲವು ವ್ಯಾಪ್ತಿಯಲ್ಲಿ ಕಾನೂನುಬದ್ದಗೊಳಿಸಿ 2009ಕ್ಕೆ ಕಾನೂನು ಜಾರಿಗೊಳಿಸಲಾಗಿದೆ.
ಇನ್ನು ಪಟ್ಟಿಯಲ್ಲಿರುವ ಇತರೆ ರಾಷ್ಟ್ರಗಳು ಹಾಗೂ ಸಲಿಂಗ ಕಾಮ ಕಾನೂನುಬದ್ದಗೊಳಿಸಿದ್ದ ವರ್ಷಗಳ ವಿವರ ಹೀಗಿದೆ-
ಐಸ್ಲ್ಯಾಂಡ್ (2010)
ಅರ್ಜೆಂಟೀನಾ (2010)
ನ್ಯೂಜಿಲೆಂಡ್ (2013)
ಫಿನ್ಲ್ಯಾಂಡ್ (2015)
ಯುನೈಟೆಡ್ ಸ್ಟೇಟ್ಸ್ (2015)
ಕೆನಡಾ (2005)
ಸ್ಪೇನ್ (2005)
ದಕ್ಷಿಣ ಆಫ್ರಿಕಾ (2006)
ನಾರ್ವೆ (2008)
ಪೋರ್ಚುಗಲ್ (2010)
 ಸ್ವೀಡನ್ (2009)
ಡೆನ್ಮಾರ್ಕ್ (2011)
ಉರುಗ್ವೆ (2013)
ಫ್ರಾನ್ಸ್ (2013)
ಬ್ರೆಜಿಲ್ (2013)
ಯುನೈಟೆಡ್ ಕಿಂಗ್ಡಮ್ (2013)
ಲಕ್ಸೆಂಬರ್ಗ್ (2014)
ಐರ್ಲೆಂಡ್ (2015)
 ಕೊಲಂಬಿಯಾ (2016)
ಜರ್ಮನಿ (2017)
ಮಾಲ್ಟಾ (2017)
ಆಸ್ಟ್ರೇಲಿಯಾ (2017)
ಇದರಲ್ಲಿ ಡೆನ್ಮಾರ್ಕ್ ತನ್ನ ಸ್ವಾಯತ್ತ ಪ್ರದೇಶ ಗ್ರೀನ್ ಲ್ಯಾಂಡ್ ನಲ್ಲಿ ಕಾನೂನಿನ ಮಾನ್ಯತೆ ನಿಡಲಾಗಿದೆ. ಇಷ್ಟಲ್ಲದೆ ಇಂಗ್ಲೆಂಡ್ ಮತ್ತು ವೇಲ್ಸ್ 2013ರಲ್ಲಿ, ಸ್ಕಾಟ್ಲೆಂಡ್ ನಲ್ಲಿ 2014ರಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಒಪ್ಪಿಗೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT