ಅನುಮತಿ ಇಲ್ಲದೆ ತನ್ನನ್ನು 'ಸೃಷ್ಟಿ'ಸಿದ್ದಕ್ಕೆ ಪೋಷಕರನ್ನೇ ಕೋರ್ಟಿಗೆಳೆದ ಪುತ್ರ!
ಮುಂಬೈ: ಇಂತಹಾ ವಿಚಿತ್ರ ಪ್ರಸಂಗವನ್ನು ನೀವೆಂದೂ ಹಿಂದೆ ಕೇಳಿರಲಿಕ್ಕಿಲ್ಲ! ಪುತ್ರನೊಬ್ಬ ತನ್ನ ಮಾತಾ-ಪಿತರು ನನ್ನ ಅನುಮತಿ ಇಲ್ಲದೆ ನನ್ನನ್ನು ಸೃಷ್ಟಿಸಿದ್ದಾರೆಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾನೆ. ಇನ್ನೂ ವಿಶೇಷವೆಂದರೆ ಪುತ್ರನ "ನಡತೆ"ಗೆ ತಾಯಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ!
ಮುಂಬೈಯ 27 ರ ಹರೆಯದ ಉದ್ಯಮಿ, ರಾಫೆಲ್ ಸ್ಯಾಮ್ಯುಯೆಲ್ ಎಂಬಾತನೇ ತನ್ನ ಪೋಷಕರ ವಿರುದ್ಧ ನ್ಯಾಯಾಲಯದ ಮೊರೆ ಹೋದ ವ್ಯಕ್ತಿ.ಈತನ ಪ್ರಕಾರ ಭೂಮಿಯಲ್ಲಿ ಜನ್ಮಿಸುವ ಮುನ್ನ ಯಾವುದೇ ವ್ಯಕ್ತಿ ತನ್ನ ತಾಯಿ-ತಂದೆಗಳನ್ನು ಸ್ವತಃ ಆರಿಸಿಕೊಳ್ಳುವುದು ಸಾಧ್ಯ. ಎಂದರೆ ಈತನ ಪ್ರಕಾರ ಹುಟ್ಟು ಆಕಸ್ಮಿಕ ಎಂಬ ನಂಬಿಕೆಯೇ ತಪ್ಪು.ಒಬ್ಬ ವ್ಯಕ್ತಿ ತಪ್ಪಾದ ಪೋಷಕರನ್ನು ಪಡೆದರೆ, ತಪ್ಪಾದ ಸ್ಥಳದಲ್ಲಿ ಹುಟ್ಟಿದರೆ ಆತ ದುಃಖ ಪಡಬೇಕಾಗುವುದು ಎಂದು ರಾಫೆಲ್ ಹೇಳುತ್ತಾನೆ.
ರಾಫೆಲ್ ತನ್ನನ್ನು ಸೃಷ್ಟಿಸಿದ ಕುರಿತಂತೆ ಪೋಷಕರನ್ನು ಪ್ರಶ್ನಿಸಿದ್ದಲ್ಲದೆ ಅವರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲು ತಯಾರಾಗಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆ ಆತ ವಿಶ್ವಾದ್ಯಂತ ಪ್ರಸಿದ್ದನಾದನು.ಫೇಸ್ ಬುಕ್ ನಲ್ಲಿ "ನಿಹಿಲನಾಂದ್" ಎಂಬ ಹೆಸರಿನ ಖಾತೆ ಹೊಂದಿರುವ ರಾಫೆಲ್ ಪೋಷಕರು ಆತನ ಒಪ್ಪಿಗೆಯಿಲ್ಲದೆ ಆತನನ್ನು ಸೃಷ್ಟಿಸಿದ್ದು ತಪ್ಪೆಂದು ವಾದಿಸುತ್ತಾನೆ.
ಗಾರ್ಡಿಯನ್ ಲೇಖನವೊಂದರ ಪ್ರಕಾರ, ಆಂಟಿ ನಟಾಲಿಸಂ ಎನ್ನುವುದು ಜನರ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿದೆ. ನಂಬಿಕೆಯ ಒಂದು ವ್ಯವಸ್ಥೆಯಾಗಿದೆ, ಮತ್ತು ಒಂದು ದೊಡ್ಡ ಪ್ರಮಾಣದ ದುಃಖವನ್ನು ಜನರು ಈ ವ್ಯವಸ್ಥೆಯ ಆಚೆ ನಿಂಟಾಗ ತಪ್ಪಿಸಲು ಸಾಧ್ಯ ಎನ್ನುವ ಸಿದ್ದಾಂತವಾಗಿದೆ. ಇದು ಜಾಗತಿಕವಾಗಿ ಹಲವಾರು ವ್ಯಕ್ತಿಗಳಲ್ಲಿ ಸಿದ್ದಾಂತವಾಗಿ ಬೆಳೆದು ಚಳವಳಿಯಾಗಿ ರೂಪುಗೊಳ್ಳುತ್ತಿದೆ.
ಫೇಸ್ ಬುಕ್ ಪೋಸ್ಟ್ ನಲ್ಲಿ ರಾಫೆಲ್ ತಾನು ತನ್ನ ಹೆತ್ತವರನ್ನು ಪ್ರೀತಿಸುತ್ತಿರುವುದಾಗಿ ಮತ್ತು "ನಾವು ಒಂದು ದೊಡ್ಡ ಸಂಬಂಧವನ್ನು ಹೊಂದಿದ್ದೇವೆ, ಆದರೆ ಅವರ ಸಂತೋಷ ಮತ್ತು ಸುಖಕ್ಕಾಗಿ ಅವರು ನನ್ನನ್ನು ಹೊಂದಿದ್ದರು" ಎಂದು ಹೇಳಿಕೊಂಡಿದ್ದಾನೆ.
ಸಂದರ್ಶನವೊಂದರಲ್ಲಿ, ರಾಫೆಲ್ ಹೇಳುವಂತೆ ಸಂತಾನೋತ್ಪತ್ತಿ ಭೂಮಿಯ ಮೇಲಿನ ಅತ್ಯಂತ ನಾರ್ಸಿಸಿಸ್ಟಿಕ್ ಕ್ರಿಯೆಯಾಗಿದೆ. ಅವನ ಮಾತುಗಳ ಬಳಿಕ ಅನೇಕರು ಅವನ ವಿಚಿತ್ರ ವರ್ತನೆಗೆ ಮರುಕ ವ್ಯಕ್ತಪಡಿಸಿದ್ದಲ್ಲದೆ ಅವನ ಪೋಷಕರ ಬಗ್ಗೆ ಸಹಾನುಭೂತಿ ತೋರಿದ್ದಾರೆ.ಆದರೆ ರಾಫೆಲ್ ಈ ಬಗೆಯ ಸಹಾನುಭೂತಿಯನ್ನು ನಿರಾಕರಿಸುತ್ತಾನೆ.
"ನನ್ನ ಸ್ವತಂತ್ರ ಚಿಂತನೆಗಾಗಿ ನನ್ನ ಹೆತ್ತವರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸಲು ತಯಾರಾಗಿದ್ದಾರೆ" ನಾವು ಒಬ್ಬರಿಗೊಬ್ಬರು ಒಳ್ಳೆಯವರಾಗಿರುತ್ತೇವೆ!"
"ನನ್ನ ಪುತ್ರ ನಮ್ಮನ್ನು ನ್ಯಾಯಾಲಯಕ್ಕೆ ಕರೆಯುತ್ತಿರುವುದು ನನಗೆ ಸಂತಸತಂದಿದೆ.ರಾಫೆಲ್ ನ ಹುಟ್ಟಿನ ಕುರಿತು ನಾವು ಹೇಗೆ ಒಂದು ವಿವೇಚನಾಶೀಲ ವಿವರ ಪಡೆಯಬಹುದು ಎನ್ನುವುದನ್ನು ನಾವಿಲ್ಲಿ ನೋಡಲಿದ್ದೇವೆ." ರಾಫೆಲ್ ತಾಯಿ ಕವಿತಾ ಕಾರ್ನಾಡ್ ಹೇಳಿದ್ದಾರೆ.
"ಮಗನ ಸ್ವತಂತ್ರ ಆಲೋಚನೆಯು ನನಗೆ ಸಂತಸ ತಂದಿದೆ.ಆತನು ತನಗೆ ತಕ್ಕಂತೆ ಸಂತಸದ ಮಾರ್ಗವನ್ನು ಕಾಣಲು ಸ್ವತಂತನಾಗಿದ್ದಾನೆ." ಆಕೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos