ವಿಶೇಷ

ವಿಶೇಷ ಚಿತ್ರ ಲೇಖನ: 'ಐರನ್ ಲೇಡಿ ಆಫ್ ಪ್ಯಾರೀಸ್' ಐಫೆಲ್ ಟವರ್ ಗೆ 130 ವರ್ಷ!

Raghavendra Adiga
ಪ್ಯಾರೀಸ್: ವಿಶ್ವದ ಏಳು ಅದ್ಭುತಗಳಲ್ಲೊಂದಾದ ಐಫೆಲ್ ಟವರ್ ನಿರ್ಮಾಣವಾಗಿ ಇಂದಿಗೆ ಬರೋಬ್ಬರಿ 130 ವರ್ಷ. 
ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶತಮಾನದ ಬೃಹತ್ ಮಾನವ ನಿರ್ಮಿತ ಗೋಪುರ ಇಂದಿಗೂ ಪ್ಯಾರೀಸ್ ಸೇರಿ ಇಡೀ ಯುರೋಪ್ ಪ್ರವಾಸದ ಪ್ರಮುಖ ಆಕರ್ಷಣೆಯಾಗಿದೆ.
130ನೇ ವರ್ಷಾಚರಣೆ ಸಮಯದಲ್ಲಿ ಐಫೆಲ್ ತವರ್ ನ್ನು ಸಂಪೂರ್ಣ ಲೇಸರ್ ಲೈಟ್ ಗಳಿಂಡ ಶ್ಂಗರಿಸಲಾಗಿದ್ದು ರಾತ್ರಿ ವೇಳೆ ಇಡೀ ಗೋಪುರ ಬಣ್ಣ ಬಣ್ಣದ ಲೇಸರ್ ಕಿರಣಗಳಿಂದ ಕಂಗೊಳಿಸುವುದನ್ನು ಕಾಣುವುದೇ ಕಣ್ಣಿಗೆ ಹಬ್ಬ.
1889ರಲ್ಲಿ ನಿರ್ಮಾಣಗೊಂಡ ಈ ಐಫೆಲ್ ಟವರ್ 324 ಮೀ. ಎತ್ತರವಿದ್ದು 7,300 ಟನ್ ತೂಕವಿದೆ.ಈ ಗೋಪುರ ವೀಕ್ಷಣೆ ವರ್ಷಕ್ಕೆ ಸರಾಸರಿ 7  ಮಿಲಿಯನ್ ಪ್ರವಾಸಿಗರು ಆಗಮಿಸುತ್ತಾರೆ.
SCROLL FOR NEXT