ವಿಶೇಷ

ನೀವು ನಂಬ್ತಿರೋ ಇಲ್ವೋ, ಭಾರತದಲ್ಲಲ್ಲ, ಕಟ್ಟಾ ಮುಸ್ಲಿಂ ರಾಷ್ಟ್ರದ ನೋಟಿನಲ್ಲಿದ್ದಾನೆ ಗಣೇಶ!

Vishwanath S

ವಿಘ್ನ ವಿನಾಯಕ, ಗಣಗಳ ಅಧಿಪತಿ, ವರಸಿದ್ಧಿ ವಿನಾಯಕನಿಗೆ ಅಗ್ರ ಪೂಜೆ ಸಲ್ಲಿಸುತ್ತಾರೆ. ಇನ್ನು ಭಾರತದಲ್ಲಿ ಅಲ್ಲದೆ ಹಲವು ರಾಷ್ಟ್ರಗಳಲ್ಲೂ ಸಹ ಗಣೇಶನ ಆರಾಧನೆ ನಡೆಯುತ್ತಿದೆ. ಇನ್ನು ಕಟ್ಟಾ ಮುಸ್ಲಿಂ ರಾಷ್ಟ್ರವೊಂದರ ನೋಟಿನ ಮೇಲೆ ಗಣೇಶ ಸ್ಥಾನಪಡೆದಿರುವುದು ಅಚ್ಚರಿಯೇ ಸರಿ.

ಇನ್ನು ನೋಟಿನಲ್ಲಿ ಗಣೇಶನ ಚಿತ್ರವಿರುವುದು ಭಾರತದ ನೋಟುಗಳಲ್ಲಲ್ಲ. ಅದು ಇಂಡೋನೇಷ್ಯಾದ ನೋಟಿನ ಮೇಲೆ. ಬರೋಬ್ಬರಿ 20 ಸಾವಿರ ರುಪಾಯಿ ನೋಟಿನ ಮೇಲೆ ಗಣೇಶನ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದಲ್ಲಿನ ವಾತಾಪಿ ಗಣಪತಿಯನ್ನೇ ಹೋಲುತ್ತದೆ.

ಇಂಡೋನೇಷ್ಯಾದಲ್ಲಿ ಸುಮಾರು 87ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿದ್ದು ಹಿಂದೂಗಳ ಸಂಖ್ಯೆ ಕೇವಲ 3ರಷ್ಟು. ಹೀಗಿದ್ದರೂ 20 ಸಾವಿರ ರುಪಾಯಿ ನೋಟಿನ ಮೇಲೆ ಗಣಪತಿ ಫೋಟೋವನ್ನು ಹಾಕಲಾಗಿದೆ. ಗಣೇಶನ ಫೋಟೋ ಪಕ್ಕದಲ್ಲಿ ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟಗಾರ ಕೀ ಹಾಜಾರ್ ಫೋಟೋವೂ ಇದೆ. 

ಶತಮಾನಗಳ ಹಿಂದೆ ಇಂಡೋನೇಷ್ಯಾದಲ್ಲಿ ಹಿಂದೂ ಸಂಪ್ರದಾಯ ಆಚರಣೆಯಲ್ಲಿತ್ತು. ಹೀಗಾಗಿ ಈಗಲೂ ಕೂಡ ಆ ಸಂಪ್ರದಾಯವನ್ನೂ ಅಲ್ಲಿ ಮುಂದುವರೆಸಿಕೊಂಡು ಬರಲಾಗಿದೆ. ಅಲ್ಲದೇ ಇಂಡೋನೇಷ್ಯಾದಲ್ಲಿ ಗಣೇಶ ದೇವರನ್ನು ಕಲೆ, ವಿಜ್ಞಾನ ಮತ್ತು ಜ್ಞಾನದ ಅಧಿದೇವತೆ ಎಂದು ನಂಬಿದ್ದಾರೆ. 

ಇಂಡೋನೇಷ್ಯಾ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾಗ ಅಲ್ಲಿ 20 ಸಾವಿರದ ನೋಟನ್ನು ಜಾರಿಗೆ ತರಲಾಯಿತು. ಆ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿತ್ತು. ಇದಾದ ಬಳಿಕ ಅಲ್ಲಿನ ಅರ್ಥ ವ್ಯವಸ್ಥೆ ಹತೋಟಿಗೆ ಬಂತಂತೆ. ಹೀಗಾಗಿಯೇ ಅಲ್ಲಿನ ಸರ್ಕಾರ ಇಂದಿಗೂ ಸಹ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸುತ್ತಿದೆ. 

ಬಾಲಿವುಡ್ ಚಿತ್ರ ನಿರ್ಮಾಪಕ ತಂಜು ಗಾರ್ಗ್ ಇತ್ತೀಚೆಗಷ್ಟೇ ಇಂಡೋನೇಷ್ಯಾಗೆ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿನ ನೋಟಿನ ಮೇಲೆ ಗಣೇಶನ ಚಿತ್ರವನ್ನು ನೋಡಿ ಶಾಕ್ ಆಗಿದ್ದಾರೆ. ನೋಟಿನ ಫೋಟೋವನ್ನು ಟ್ವೀಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

SCROLL FOR NEXT