ಜಾರ್ಖಂಡ್ ಗ್ರಾಮದ ಈ ಶಾಲೆಯಲ್ಲಿ ಸ್ವಾವಲಂಬನೆಯೇ ಮೊದಲ ಪಾಠ! 
ವಿಶೇಷ

ಜಾರ್ಖಂಡ್ ಗ್ರಾಮದ ಈ ಶಾಲೆಯಲ್ಲಿ ಸ್ವಾವಲಂಬನೆಯೇ ಮೊದಲ ಪಾಠ!

ಜಾರ್ಖಂಡ್ ನಲ್ಲಿ ಗ್ರಾಮೀಣ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳಿಗೆ ಸ್ವಾವಲಂಬಿಗಳಾಗುವ ಪಾಠವನ್ನು ಬೋಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಜಾರ್ಖಂಡ್ ನಲ್ಲಿ ಗ್ರಾಮೀಣ ಶಾಲೆಯ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗಳಿಗೆ ಸ್ವಾವಲಂಬಿಗಳಾಗುವ ಪಾಠವನ್ನು ಬೋಧಿಸಿ ಎಲ್ಲರ ಗಮನ ಸೆಳೆದಿದ್ದಾರೆ. 

ದುಮ್ಕಾದ ದುಮರ್ಥಾರ್ ಗ್ರಾಮದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದ ಪ್ರಾಂಶುಪಾಲರಾದ ಸಪನ್ ಕುಮಾರ್, ಧ್ವನಿ ವರ್ಧಕಗಳ ಮೂಲಕ ಶಿಕ್ಷಕರು ನೀಡುವ ಶೈಕ್ಷಣಿಕ ಪಠ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನು ಗೋಡೆಯ ಮೇಲೆ ಬರೆದು ಬಗೆಹರಿಸುವ ಮೂಲಕ ಇಡಿ ಗ್ರಾಮವನ್ನೇ ತರಗತಿಯನ್ನಾಗಿ ಬದಲಾವಣೆ ಮಾಡಿ ಸುದ್ದಿಯಾಗಿದ್ದರು. 

ಈಗ ಕೋವಿಡ್-19 ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ವಾವಲಂಬನೆಯ ಪಾಠವನ್ನು ಬೋಧಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. 

ಸೀಮೆಸುಣ್ಣಗಳು, ಕುಳಿತುಕೊಳ್ಳುವುದಕ್ಕೆ ಚಾಪೆ, ಪೊರಕೆಗಳು ಮುಂತಾದ ತರಗತಿಗಳನ್ನು ನಡೆಸುವುದಕ್ಕೆ ಅಗತ್ಯವಿರುವ ವಸ್ತುಗಳನ್ನು ವಿದ್ಯಾರ್ಥಿಗಳಿಂದಲೇ ತಯಾರಿಸುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ.

"ತರಗತಿಗಳು ಮುಕ್ತಾಯಗೊಂಡ ಬಳಿಕ ವಿದ್ಯಾರ್ಥಿಗಳು ಸ್ಥಳೀಯವಾಗಿ ಲಭ್ಯವಿರುವ ಸೀಮೆಸುಣ್ಣ, ಚಾಪೆ, ಪೊರಕೆಗಳನ್ನು ತಯಾರಿಸುತ್ತಾರೆ. 

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ವಾವಲಂಬನೆ ತುಂಬಾ ಮುಖ್ಯವಾದದ್ದು ಎನ್ನುತ್ತಾರೆ ಕುಮಾರ್. " ಸೀಮೆ ಸುಣ್ಣ ಖರೀದಿಸುವುದು ಬಹಳ ದುಬಾರಿಯಾಗಿತ್ತು. ಬಹಳ ದಿನಗಳ ನಂತರ ಯೋಚನೆ ಮಾಡಿ ನಮ್ಮ ವಿದ್ಯಾರ್ಥಿಗಳಿಂದಲೇ ಸೀಮೆ ಸುಣ್ಣ ಮೊದಲಾದ ತರಗತಿಗಳಿಗೆ ಅಗತ್ಯವಿರುವುದನ್ನು ತಯಾರಿಸುವಂತೆ ಮಾಡಿದೆ. ಪ್ರತಿದಿನವೂ ಈಗ ವಿದ್ಯಾರ್ಥಿಗಳು 200 ಸೀಮೆಸುಣ್ಣವನ್ನು ತಯಾರಿಸುತ್ತಾರೆ. ಹೊಸ ಕೌಶಲ್ಯವನ್ನು ಕಲಿಯುತ್ತಿರುವುದಕ್ಕೆ ವಿದ್ಯಾರ್ಥಿಗಳೂ ಸಂತಸಗೊಂಡಿದ್ದಾರೆ ಎಂದು ಕುಮಾರ್ ಸ್ವಾವಲಂಬನೆ ಪಾಠ ಮಾಡಿರುವ ಬಗ್ಗೆ 8 ನೇ ತರಗತಿಯ ವಿದ್ಯಾರ್ಥಿ ಸೋನಾದಿ ಮರಾಂಡಿ, ಇದು ನಮಗೆ ಹೊಸ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT