ವಿಶೇಷ

ಉಡುಪಿಯ ಬೆಡಗಿ ಅಡ್ಲಿನ್ ಗೆ ಮಿಸ್ ದಿವಾ ಕಿರೀಟ, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕರಾವಳಿ ಕುವರಿ

Raghavendra Adiga

ಮುಂಬೈ: ಕರಾವಳಿ ಕರ್ನಾಟಕದ ಹೆಮ್ಮೆಯ ಪ್ರತಿಭೆ ಉಡುಪಿ ಮೂಲದ  ಅಡ್ಲಿನ್ ಕ್ಯಾಸ್ಟೆಲಿನೋ ಮಿಸ್ ದಿವಾ ಸ್ಪರ್ಧೆಯ ಎಂಟನೇ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ.  ಮತ್ತು ಅವರೀಗ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಆಡ್ಲೈನ್ ​​ಮಿಸ್ ದಿವಾ ಯೂನಿವರ್ಸ್ 2020 ಕಿರೀಟವನ್ನು ಮಿಸ್ ಯೂನಿವರ್ಸ್ ಇಂಡಿಯಾ 2019 ವರ್ತಿಕಾ ಸಿಂಗ್ ಮತ್ತು ಮಿಸ್ ಸುಪ್ರನೇಶನಲ್ ಇಂಡಿಯಾ 2019 ಆಂಟೋನಿಯಾ ಪೋರ್ಸಿಲ್ಡ್ ಅವರಿಂದ ಧರಿಸಲ್ಪಟ್ಟರು.

ಇನ್ನು ಈ ಸಾಲಿನ ಮಿಸ್ ದಿವಾ ಸುಪ್ರನೇಶನಲ್ 2020 ಕಿರೀಟವನ್ನು ಪಡೆದ ಅವಿತ್ರಿ ಚೌಧರಿ ಮಿಸ್ ಸುಪ್ರನೇಶನಲ್ ಸ್ಪರ್ಧೆಯಲ್ಲಿ ಬಾರತವನ್ನು ಪ್ರತಿನಿಧಿಸುತ್ತಾರೆ.

ಈ ಸ್ಪರ್ಧೆಯಲ್ಲಿ ಪುಣೆಯ ನೇಹಾ ಜೈಸ್ವಾಲ್ ಮೊದಲ ರನ್ನರ್ ಅಪ್ ಆಗಿದ್ದಾರೆ.

ಈ ಸ್ಪರ್ಧೆಯ ತೀರ್ಪುಗಾರರಾಗಿ ಬಾಲಿವುಡ್ ನಟರಾದ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ವಿನ್ಯಾಸಕಾರರಾದ ಶಿವನ್ ಮತ್ತು ನರೇಶ್, ಮಿಸ್ ಸುಪ್ರನೇಶನಲ್ 2014 ಆಶಾ ಭಟ್, ಮಿಸ್ ಯೂನಿವರ್ಸ್ ಶ್ರೀಲಂಕಾ 2006 ಜಾಕ್ವೆಲಿನ್ ಫರ್ನಾಂಡಿಸ್, ಡಿಸೈನರ್ ನಿಖಿಲ್ ಮೆಹ್ರಾ ಮತ್ತು ಡಿಸೈನರ್ ಗೇವಿನ್ ಮಿಗುಯೆ ಭಾಗವಹಿಸಿದ್ದರು. ಮಲೈಕಾ ಅರೋರಾ ಗ್ರ್ಯಾಂಡ್ ಫಿನಾಲೆಯನ್ನು ಆಯೋಜಿಸಿದರು.

ಅಡ್ಲಿನ್ ಕ್ಯಾಸ್ಟೆಲಿನೋ ಕಿರು ಪರಿಚಯ

ಅಡ್ಲಿನ್ ಕ್ಯಾಸ್ಟೆಲಿನೋ  ಕುವೈತ್ ನಲ್ಲಿ ಜನಿಸಿದ್ದು ಇವರ ತಂದೆ ಅಲ್ಡುನ್ಸಸ್ ಕ್ಯಾಸ್ಟೆಲಿನೊ ಹಾಗೂ ತಾಯಿ ಮೀರಾ ಕ್ಯಾಸ್ಟೆಲಿನೊ ಅವರು ಉಡುಪಿಯ ಉದ್ಯಾವರ ಮೂಲದವರಾಗಿದ್ದಾರೆ. 15 ವರ್ಷದವರ್ಷದವರಿದ್ದಾಗ ಅಡ್ಲಿನ್ ಮುಂಬೈಗೆಆಗಮಿಸಿದ್ದರು.ವರು ಸೇಂಟ್ ಜೇವಿಯರ್‌ ನಲ್ಲಿ ಶಾಲಾ ಶಿಕ್ಷಣವನ್ನು ಮಾಡಿದರು ಮತ್ತು ವಿಲ್ಸನ್ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಿಂದ ಪದವಿ ಪಡೆದರು.ವೃತ್ತಿಪರ ಮಾಡೆಲ್ ಆಗಿರುವ ಈಕೆ ರೈತರ ಆತ್ಮಹತ್ಯೆ ಮತ್ತು ಅಸಮಾನತೆಯನ್ನು ನಿಗ್ರಹಿಸಲು ಫ್ರೇಮರ್‌ಗಳಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸಲು ಕಾರ್ಯನಿರ್ವಹಿಸುವ ವಿಎಸ್‌ಪಿ ಎಂಬ ಸಂಘಟನೆಯೊಂದಿಗೆ ಕೆಲಸ ಮಾಡಿದ್ದಾರೆ.. ತನ್ನ ಅಜ್ಜಿ ಕೃಷಿಕರಾಗಿದ್ದ ಕಾರಣ ಅವರಿಗೆ ಕೃಷಿ ಅತ್ಯಂತ ಪ್ರಿಯವಾದ ಕ್ಷೇತ್ರವಾಗಿದೆ. 

ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಅಜ್ಜಿಬಹುಬೇಗನೇ ತೀರಿಕೊಂಡಿದ್ದರು."ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯುತ್ತಿರುವುದು ಒಂದು ಪವಾಡ " ಎಂದು ಹೇಳುವ ಅಡ್ಲಿನ್ ತಾವು ಆ ಕನಸನ್ನು ಪ್ರಶಸ್ತಿ ಗೆಲ್ಲುವ ಮೂಲಕ ನನಸಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

SCROLL FOR NEXT