ವಿಶೇಷ

ದೃಷ್ಟಿವಿಶೇಷಚೇತನ ನೌಕರನ ಸತತ ಹೋರಾಟಕ್ಕೆ ಸಿಕ್ತು ಪ್ರತಿಫಲ! ಗೂಗಲ್ ಟಿಟಿಎಸ್ ನಲ್ಲೀಗ ಕೇಳತ್ತೆ ಕನ್ನಡ ಧ್ವನಿ

Raghavendra Adiga

ಬೆಳಗಾವಿ: ಇದೀಗ ಗೂಗಲ್ ಟೆಕ್ಸ್ಟ್ ಟು ಸ್ಪೀಚ್ ಅಪ್ಲಿಕೇಷನ್ ನಲ್ಲಿ ಕನ್ನಡ ದ್ವನಿ ಕೇಳಿಸಲು ಪ್ರಾರಂಭವಾಗಿದೆ. ಗೂಗಲ್ ಟೆಕ್ಸ್ಟ್ ಟು ಸ್ಪೀಚ್ (ಟಿಟಿಎಸ್) ಗೆ ಕನ್ನಡದ ದ್ವನಿಯನ್ನು ಈಚಿಗೆ ಸೇರ್ಪಡೆ ಮಾಡಲಾಗಿದೆ.

ಈ ಸಂಬಂಧ ಬೆಳಗಾವಿ ಜಿಲ್ಲೆ ಬೈಲಹೊಂಗಲದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಸಿದ್ದಲಿಂಗೇಶ್ವರ ಇಂಗಳಗಿ ಎನ್ನುವವರು "ಚೇಂಜ್ ಡಾಟ್ ಆರ್ಗ್" ವೆಬ್ ತಾಣದಲ್ಲಿ ಪಿಟಿಷನ್ ಹಾಕಿದ್ದರು.  ಅಲ್ಲದೆ 2017ರಲ್ಲಿ ಈ ಕುರಿತು ಆನ್ ಲೈನ್ ಅಭಿಯಾನ ಪ್ರಾರಂಭಿಸಿದ್ದ ಇವರು ಟಿಟಿಎಸ್ ನಲ್ಲಿ ಕನ್ನಡಕ್ಕಾಗಿ ಸತತ ಒತ್ತಾಯ ಮಾಡುತ್ತಾ ಬಂದಿದ್ದರು.

ಇಂಗಳಗಿ ಅವರ ಕರೆಗೆ ದೇಶ ವಿದೇಶಗಳಿಂಡ ಬೆಂಬಲ ಸಿಕ್ಕಿದ್ದು ಇವರ ಅರ್ಜಿಗೆ ಅರ್ಜಿಗೆ 3,317 ಜನ ಸಹಿ  ಹಾಕಿದ್ದಾರೆ.ಇದೀಗ ಇವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಟಿಟಿಎಸ್ ನಲ್ಲಿ ಕನ್ನಡ ಸೇರಿ ಅನೇಕ ಪ್ರಾದೇಶಿಕ ಭಾರತೀಯ ಭಾಷೆಗಳು ಸೇರ್ಪಡೆಗೊಂಡಿದೆ. 

ವಿಶೇಷವೆಂದರೆ ಇಷ್ಟೆಲ್ಲಾ ಪ್ರಯತ್ನ ಪಟ್ಟು ಕನ್ನಡಕ್ಕಾಗಿ ಅಭಿಯಾನ ನಡೆಸಿದ್ದ ಐಂಗಳಗಿ ದೃಷ್ಟಿವಿಶೇಷಚೇತನ ಸರ್ಕಾರಿ ನೌಕರರಾಗಿದ್ದಾರೆ. "ನಾನು ನಡೆಸಿದ್ದ ಅಭಿಯಾನಕ್ಕೆ ಫಲ ಸಿಕ್ಕಿದೆ" ಎಂದು ಅವರು ಸಂತಸದಿಂದ ನುಡಿದಿದ್ದಾರೆ. 

SCROLL FOR NEXT