ತುಂಗಾ ನಾಯಿಗೆ ಅಭಿನಂದನೆ 
ವಿಶೇಷ

ದಾವಣಗೆರೆ: 30 ಕೊಲೆ ಪ್ರಕರಣ ಸೇರಿದಂತೆ 60 ಕೇಸ್ ಗಳ ಪತ್ತೆಗೆ ಸಹಾಯ ಮಾಡಿದ 'ತುಂಗಾ'ಗೆ ಸನ್ಮಾನ!

ಕೊಲೆಗಾರನ ಬೆವರಿನ ವಾಸನೆ ಹಿಡಿದು ನಾಯಿಯೊಂದು ಹಂತಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. 30 ಕೊಲೆ ಪ್ರಕರಣ ಸೇರಿದಂತೆ ಒಟ್ಟು 60 ಕೇಸ್ ಗಳನ್ನು ಬೇಧಿಸುವಲ್ಲಿ ತುಂಗಾ ಎಂಬ ಹೆಸರಿನ ನಾಯಿ ಯಶಸ್ವಿಯಾಗಿದೆ

ದಾವಣಗೆರೆ: ಕೊಲೆಗಾರನ ಬೆವರಿನ ವಾಸನೆ ಹಿಡಿದು ನಾಯಿಯೊಂದು ಹಂತಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. 30 ಕೊಲೆ ಪ್ರಕರಣ ಸೇರಿದಂತೆ ಒಟ್ಟು 60 ಕೇಸ್ ಗಳನ್ನು ಬೇಧಿಸುವಲ್ಲಿ ತುಂಗಾ ಎಂಬ ಹೆಸರಿನ ನಾಯಿ ಯಶಸ್ವಿಯಾಗಿದೆ.

ಡಾಗ್ ಸ್ಕ್ವಾಡ್ ನ  ತುಂಗಾ ಎಂಬ ಪೊಲೀಸ್ ನಾಯಿ. ತುಂಗಾ 11 ಕಿ.ಮೀ ಸಂಚರಿಸಿ ನಾಗರಕಟ್ಟೆಯ ನಿವಾಸಿ ಚೇತನ್ ಸೇರಿದಂತೆ ಇತರೆ ಆರೋಪಿಗಳನ್ನು ಹಿಡಿದುಕೊಟ್ಟಿತ್ತು, ಹೀಗಾಗಿ ಎಡಿಜಿಪಿ ಡಾ ಅಮರ್ ಕುಮಾರ್ ಪಾಂಡೆ ತುಂಗಾ ನಾಯಿಕಗೆ ಅಭಿನಂದನೆ ಸಲ್ಲಿಸಿದ್ದಾರೆ.

9 ವರ್ಷದ ತುಂಗಾ ನಾಯಿಯನ್ನು 9 ವರ್ಷಗಳ ಹಿಂದೆ ಡಾಗ್ ಸ್ಕ್ವಾಡ್ ಗೆ ಸೇರಿಸಲಾಗಿತ್ತು.30 ಕೊಲೆ ಪ್ರಕರಣ, 25 ಕಳವು ಪ್ರಕರಣ ಮತ್ತು 5 ಡಕಾಯಿತಿ ಕೇಸ್ ಗಳನ್ನು ಪತ್ತೆ ಹಚ್ಚಿದೆ. ಈ ಡಾಬರ್ ಮನ್ ನಾಯಿ 4 ಗಂಟೆ 45 ನಿಮಿಷಗಳಲ್ಲಿ ಹಲವು ಗ್ರಾಮಗಳನ್ನು ದಾಟಿ ತನ್ನ ಗುರಿ ಸಾಧಿಸಿದೆ.

ರಾತ್ರಿ 9 ಗಂಟೆಗೆ ಆರೋಪಿಗಾಗಿ ಹುಡುಕಾಟ ಆರಂಭವಾಯಿತು, ಜುಲೈ 10ರಂದು ಸೂಳೆಕೆರೆ ಗುಡ್ಡದಲ್ಲಿ ಚಂದ್ರನಾಯ್ಕ್‌ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶ್ವಾನದಳದ ‘ತುಂಗಾ’ದೊಂದಿಗೆ ಸ್ಥಳ ಪರಿಶೀಲನೆಗೆ ಹೋಗಿದ್ದರು. ಆಗ ತುಂಗಾ ಕಾಶಿಪುರದ ತಾಂಡದವರೆಗೂ ಹೋಗಿ ಆರೋಪಿ ಪತ್ತೆಗೆ ಸಹಕರಿಸಿತ್ತು.

ಅನುಮಾನಗೊಂಡ ಪೊಲೀಸರು ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಚಂದ್ರನಾಯ್ಕ್‌ ಚೇತನ್‌ಗೆ  1.70 ಲಕ್ಷ ರು .ಸಾಲ ನೀಡಿದ್ದ. ಅಲ್ಲದೇ ಚೇತನ್‌ ಹಾಗೂ ಸ್ನೇಹಿತರು ಮಾಡುತ್ತಿದ್ದ ಕಳವು ತಿಳಿದಿತ್ತು. ಚಂದ್ರನಾಯ್ಕ್‌ ಈ ಬಗ್ಗೆ ಪೊಲೀಸರಿಗೆ ತಿಳಿಸಬಹುದು ಎಂದು ಶಂಕಿಸಿದ ಆರೋಪಿಗಳು ‘ಸಾಲ ಕೊಡುತ್ತೇವೆ’ ಎಂದು
ನಂಬಿಸಿ ಕಳವು ಮಾಡಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಧಾರವಾಡದ ವಿದ್ಯಾಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಜೂನ್‌ 20ರಂದು ಆರೋಪಿಗಳು ಕೊಲೆಗೆ ಬಳಸಿದ ಪಿಸ್ತೂಲ್‌ ಕಳವು ಮಾಡಿದ್ದರು.‌ 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT