ಶಕುಂತಲಾ ಪುತ್ರಿ ಅನುಪಮಾ ಬ್ಯಾನರ್ಜಿ 
ವಿಶೇಷ

'ನಾನು ಅವರ ಬಹಳ ದೊಡ್ಡ ಅಭಿಮಾನಿ': ಗಣಿತಶಾಸ್ತ್ರಜ್ಞೆ, 'ಮಾನವ ಕಂಪ್ಯೂಟರ್' ಶಕುಂತಲಾ ದೇವಿ ಪುತ್ರಿ

'ಮಾನವ ಕಂಪ್ಯೂಟರ್' ಎಂದೇ ಜಗತ್ಪ್ರಸಿದ್ದರಾದ ಶಕುಂತಲಾ ದೇವಿ ಜೀವನ ಕಥೆಯಾಧಾರಿತ ಚಿತ್ರ ನಾಡಿದ್ದು ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ತೆರೆಗೆ ಬರುತ್ತಿದೆ. ವಿದ್ಯಾಬಾಲನ್ ನಟನೆಯ ಚಿತ್ರವಿದು.

ಬೆಂಗಳೂರು: 'ಮಾನವ ಕಂಪ್ಯೂಟರ್' ಎಂದೇ ಜಗತ್ಪ್ರಸಿದ್ದರಾದ ಶಕುಂತಲಾ ದೇವಿ ಜೀವನ ಕಥೆಯಾಧಾರಿತ ಚಿತ್ರ ನಾಡಿದ್ದು ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ತೆರೆಗೆ ಬರುತ್ತಿದೆ. ವಿದ್ಯಾಬಾಲನ್ ನಟನೆಯ ಚಿತ್ರವಿದು.

ಈ ಸಂದರ್ಭದಲ್ಲಿ ಶಕುಂತಲಾ ದೇವಿ ಅವರ ಪುತ್ರಿ ಅನುಪಮಾ ಬ್ಯಾನರ್ಜಿಯವರನ್ನು ಮಾಧ್ಯಮಗಳು ಮಾತನಾಡಿಸುತ್ತಿವೆ, ಸಂದರ್ಶನ ಮಾಡುತ್ತಿವೆ, ತಮ್ಮ ತಾಯಿಯ ಬಗ್ಗೆ ನೆನಪು ಮಾಡಿಕೊಳ್ಳುವುದೆಂದರೆ ಖುಷಿಯ ಸಂಗತಿ ಎಂದು ಅನುಪಮಾ ಹೇಳುತ್ತಾರೆ. ಚಿತ್ರದಲ್ಲಿ ಅನುಪಮಾ ಪಾತ್ರವನ್ನು ಸನ್ಯ ಮಲ್ಹೋತ್ರಾ ಮಾಡಿದ್ದಾರೆ.

ಬ್ಯಾನರ್ಜಿಯವರ ಜೀವನ ಲಂಡನ್ ಮತ್ತು ಬೆಂಗಳೂರು ಮಧ್ಯೆ ಕಳೆದುಹೋಗುತ್ತದೆ. ಪ್ರಸ್ತುತ ಲಂಡನ್ ನಲ್ಲಿದ್ದರೂ ಕೂಡ ಬೆಂಗಳೂರು ಕೂಡ ಅವರಿಗೆ ತವರು ಮನೆ ಇದ್ದಂತೆ. 17 ವರ್ಷ ಬೆಂಗಳೂರಿನಲ್ಲಿ ಕಳೆದಿದ್ದರಂತೆ. ಇಲ್ಲಿಯೇ ಅವರ ಪತಿಯನ್ನು ಆ ಸಮಯದಲ್ಲಿ ಭೇಟಿ ಮಾಡಿದ್ದರಂತೆ.ಇಬ್ಬರು ಪುತ್ರಿಯರು ಜನಿಸಿದ್ದೂ ಇಲ್ಲಿಯೇ ಎನ್ನುವ ಅನುಪಮಾ ಇಲ್ಲಿಗೆ ವರ್ಷಕ್ಕೊಮ್ಮೆ ಬರುತ್ತಿರುತ್ತಾರಂತೆ.

ಇಡೀ ವಿಶ್ವ ಶಂಕುತಲಾ ದೇವಿಯವರನ್ನು ದೊಡ್ಡ ಗಣಿತಶಾಸ್ತ್ರಜ್ಞೆ ಎಂದು ನೆನಪು ಮಾಡಿಕೊಳ್ಳುತ್ತದೆ. ಅನುಪಮಾರನ್ನು ಬಹಳ ಪ್ರೀತಿಯಿಂದ ಬೆಳೆಸಿದ ಶಕುಂತಲಾ ಮಗಳಿಗೆ ತಂದೆ-ತಾಯಿ ಇಬ್ಬರ ಪಾತ್ರವನ್ನೂ ನಿರ್ವಹಿಸುತ್ತಿದ್ದರಂತೆ. ತಮ್ಮ ತಾಯಿ ಒಬ್ಬ ಹಾಸ್ಯ ಪ್ರಜ್ಞೆಯಿದ್ದ ಅಭೂತಪೂರ್ವ ವ್ಯಕ್ತಿಯಾಗಿದ್ದರು ಎಂದು ನೆನಪಿ ಮಾಡಿಕೊಳ್ಳುತ್ತಾರೆ,

ಇನ್ನು ಅನುಪಮಾ ಪತಿ ಅಜಯ್ ಅಭಯ ಕುಮಾರ್, ಶಕುಂತಲಾ ದೇವಿಯವರಿಗೆ ಅನು ಒಬ್ಬಳೇ ಒಬ್ಬ ಮಗಳು. ಅವರು ತಂದೆ-ತಾಯಿ ಇಬ್ಬರ ಪಾತ್ರವನ್ನೂ ನಿರ್ವಹಿಸುತ್ತಿದ್ದರಿಂದ ಸಹಜವಾಗಿ ಅನು ಮೇಲೆ ಪ್ರೀತಿ, ಕಾಳಜಿ ಹೆಚ್ಚಾಗಿರುತ್ತಿತ್ತು. ಅವರನ್ನು ತೃಪ್ತಿಪಡಿಸುವುದು, ಸಂತೋಷಪಡಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ತುಂಬಾ ಭಾವುಕ ಜೀವಿ ಎನ್ನುತ್ತಾರೆ.

ಶಕುಂತಲಾ ದೇವಿಯವರು ದಕ್ಷಿಣ ಭಾರತೀಯ ಸ್ನಾಕ್ಸ್ ಗಳಾದ ಕೋಡುಬಳೆ, ನಿಪ್ಪಟ್ಟನ್ನು ಬಹಳ ಇಷ್ಟಪಡುತ್ತಿದ್ದರಂತೆ. ಹುಷಾರಿಲ್ಲದಿದ್ದರೂ ತಿನ್ನುತ್ತಿದ್ದರಂತೆ. ಸಕ್ಕರೆ ಖಾಯಿಲೆ ಹೊಂದಿದ್ದ ಶಕುಂತಲಾ ದೇವಿಯವರನ್ನು ಈ ತಿನಿಸುಗಳನ್ನು ತಿನ್ನದಂತೆ ಅಡುಗೆ ಮನೆಯ ಡಬ್ಬದಿಂದ ಅಡಗಿಸಿಡುವುದು ಬಹಳ ಕಷ್ಟವಾಗಿತ್ತಂತೆ. ಮಗಳು ಹೀಗೆ ಮಾಡುತ್ತಿದ್ದಾಳೆ ಎಂದು ಗೊತ್ತಾಗಿ ಕಸದ ಬುಟ್ಟಿಯಲ್ಲಿ ಅಡಗಿಸಿಡುತ್ತಿದ್ದರಂತೆ. ಏಕೆಂದರೆ ಅಮ್ಮ ಎಲ್ಲಿ ಬಚ್ಚಿಟ್ಟಿದ್ದಾಳೆ ಎಂದು ಮಗಳು ಕೊನೆಗೆ ಹುಡುಕುವುದು ಡಸ್ಟ್ ಬಿನ್ ನ್ನು. ಅಮ್ಮನ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಾಗಿ ಆಹಾರ ಸೇವನೆಯನ್ನು ನೋಡಿಕೊಳ್ಳುತ್ತಿದ್ದ ಮಗಳಿಗೆ ಮಾಮು(ಪ್ರೀತಿಯಿಂದ ಮಗಳನ್ನು ಶಕುಂತಲಾ ಕರೆಯುತ್ತಿದ್ದುದು) ಈಗ ಮಮ್ಮಿ ಆಗಿದ್ದಾಳೆ ಎನ್ನುತ್ತಿದ್ದರಂತೆ.

ಶಕುಂತಲಾ ದೇವಿಯವರಲ್ಲಿ ಹಾಸ್ಯಪ್ರಜ್ಞೆ ಚೆನ್ನಾಗಿತ್ತು ಎನ್ನುತ್ತಾರೆ ಅನುಪಮಾ ಬ್ಯಾನರ್ಜಿ. ನಮ್ಮ 15ನೇ ಮದುವೆ ವಾರ್ಷಿಕೋತ್ಸವ ದಿನ ನಾನು ಮತ್ತು ಅಜಯ್ ಅವರನ್ನು ಭೇಟಿ ಮಾಡಲು ಹೋದಾಗ ಲಗುಬಗೆಯಿಂದಿದ್ದ ತಾಯಿ ನಮಗೆ ಅಭಿನಂದನೆ ಹೇಳಿ,ನನಗೆ ಇದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದರು ಎಂದು ನೆನಪಿಸಿಕೊಂಡರು.

ಅಷ್ಟು ದೊಡ್ಡ ವ್ಯಕ್ತಿಯ ಮಗಳಾಗಿ ಅವರಂತೆ ನನಗೂ ಗಣಿತದಲ್ಲಿ ಆಸಕ್ತಿ ಇದೆಯಾ ಎಂದು ಜನ ಭಾವಿಸುವುದು, ನನ್ನ ಬಗ್ಗೆ ನಿರೀಕ್ಷೆ ಇರುವುದು ಸಹಜ. ಆದರೆ ನಾವು ಜೀವನದ ಜಂಜಾಟದಲ್ಲಿ ಕಳೆದುಹೋಗುತ್ತೇವೆ. ನನ್ನ ಅಮ್ಮನಷ್ಟು ಗಣಿತದಲ್ಲಿ ಆಸಕ್ತಿ ಇರುವವರು ಇದ್ದಾರೆಯೇ ಎಂದು ನನಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅವರ ಬಹಳ ದೊಡ್ಡ ಅಭಿಮಾನಿ ನಾನು ಎನ್ನುತ್ತಾರೆ ಅನುಪಮಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT