ವಿಶೇಷ

ನಾಯಿಗೆ ಗೌರವ ಡಾಕ್ಟರೇಟ್ ನೀಡಿದ ವರ್ಜೀನಿಯಾ ವಿಶ್ವ ವಿದ್ಯಾಲಯ!

Srinivas Rao BV

ವರ್ಜೀನಿಯಾ: ವರ್ಜೀನಿಯಾ ಟೆಕ್ ವಿಶ್ವವಿದ್ಯಾಲಯ ತನ್ನ ಸಿಬ್ಬಂದಿಯ ಪೈಕಿ ಒಬ್ಬರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಆದರೆ ಈ ಸಿಬ್ಬಂದಿ ಯಾರೆಂದು ಗೊತ್ತಾದರೆ ನಿಮಗೆ ಅಚ್ಚರಿಯಾಗಲಿದೆ!!. ಇದರ ಹೆಸರು ಮೂಸ್ ಡೇವಿಸ್. ಈ ಸಿಬ್ಬಂದಿ ಒಂದು ಶ್ವಾನ...!

ಕೊರೊನಾ ಸಂದರ್ಭದಲ್ಲಿ,  2020 ರಲ್ಲಿ ಆನ್‌ಲೈನ್‌ನಲ್ಲಿ ಪದವಿ ಪೂರ್ಣಗೊಳಿಸಿದವರಿಗೆ ಪದವಿ ಪ್ರದಾನ ಸಮಾರಂಭ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಂಟುವರ್ಷದ ಮೂಸ್‌ಗೆ ಪಶುವೈದ್ಯಕೀಯ ಔಷಧದಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು. ಈ ವಿಷಯವನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. 

ಡಾ. ಮೂಸ್ ಅನಾರೋಗ್ಯದಿಂದ ಬಳಲುತ್ತಿದ್ದರೂ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹಲವು ಕಾರ್ಯಕ್ರಮಗಳಲ್ಲಿ ತನ್ನ ಸೇವೆ ಸಲ್ಲಿಸಿದ್ದಕ್ಕಾಗಿ ವಿಶ್ವವಿದ್ಯಾಲಯ ಮೂಸ್ ಸೇವೆ ಪರಿಗಣಿಸಿ ಡಾಕ್ಟರೇಟ್ ನೀಡಿದೆ. ಲ್ಯಾಬ್ರಡಾರ್ ರಿಟ್ರೈವರ್ ಶ್ವಾನ  2014 ರಿಂದ ವಿಶ್ವವಿದ್ಯಾಲಯದಲ್ಲಿದ್ದು, ಕುಕ್ ಕೌನ್ಸೆಲಿಂಗ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ನಾಲ್ಕು ನಾಯಿಗಳಲ್ಲಿ ಇದು ಸಹ ಒಂದಾಗಿದೆ. 

ಮೂಸ್ ಅನಾರೋಗ್ಯದ ಹೊರತಾಗಿಯೂ ವಿಶ್ವವಿದ್ಯಾಲಯದ ಆವರಣದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಾನಸಿಕ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಉಲ್ಲಾಸಿತರಾಗಿಸುತ್ತದೆ. ಕ್ಯಾಂಪಸ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಮೂಸ್‌ನನ್ನು ಇಷ್ಟಪಡುತ್ತಾರೆ ಎಂದು ವಿಶ್ವವಿದ್ಯಾಲಯದ ಅನಿಮಲ್ ಅಸಿಸ್ಟೆಡ್ ಥೆರಪಿ ಕಾರ್ಯಕ್ರಮದ ಸಲಹೆಗಾರ ಡೇವಿಸ್ ಹೇಳಿದ್ದಾರೆ. 

ಡಾ. ಮೂಸ್‌ಗೆ ಇತ್ತೀಚೆಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ತೀವ್ರ ಅನಾರೋಗ್ಯದ ನಡುವೆಯೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಹಾಯ ಮಾಡುತ್ತಿದೆ. ಚಿಕಿತ್ಸೆಯ ಭಾಗವಾಗಿ, ಮೂಸ್ ವಿಕಿರಣ ಮತ್ತು ಕೀಮೋಥೆರಪಿಗೆ ಒಳಗಾಗುತ್ತಿದೆ. ಆದರೂ, ಸದಾ ಉತ್ಸಾಹದಿಂದ ಆರೋಗ್ಯವಂತ ಪ್ರಾಣಿಯಂತೆ ಕಾಣಿಸುತ್ತದೆ ಅವರು ಹೇಳುತ್ತಾರೆ. ವರ್ಜೀನಿಯಾ ಟೆಕ್ ವಿಶ್ವವಿದ್ಯಾಲಯದಲ್ಲಿ ಆರು ವರ್ಷಗಳಲ್ಲಿ ಮೂಸ್ 7,500ಕ್ಕೂ ಹೆಚ್ಚು ಕೌನ್ಸಿಲಿಂಗ್ ಸೆಷನ್ ಮತ್ತು 5೦೦ ಕ್ಕೂ ಟ್ರೀಚ್ ಈವೆಂಟ್ ಗಳಿಗೆ ಸಹಾಯ ಮಾಡಿದೆ. ಬಿಡುವಿನ ವೇಳೆಯಲ್ಲಿ, ಈಜು, ಟಗ್-ಆಫ್-ವಾರ್ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತದೆ.

SCROLL FOR NEXT