ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಿರಣ್ ಬಾಲು 
ವಿಶೇಷ

ಮಣ್ಣಿನ ಮೂರ್ತಿಗಳಲ್ಲಿ ಭವಿಷ್ಯ ಹುಡುಕುತ್ತಿರುವ ಕಾರ್ಪೋರೇಟ್ ಉದ್ಯೋಗಿ!

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಜಗತ್ತಿನ ಕೋಟ್ಯಂತರ ಜನರ ಭವಿಷ್ಯವನ್ನು ಮಂಕಾಗಿಸಿದ್ದು, ಭಾರತದಲ್ಲಿಯೂ ಇಂತಹ ಹಲವು ಪ್ರಕರಣಗಳು ನಿತ್ಯ ಕಾಣಸಿಗುತ್ತವೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಜಗತ್ತಿನ ಕೋಟ್ಯಂತರ ಜನರ ಭವಿಷ್ಯವನ್ನು ಮಂಕಾಗಿಸಿದ್ದು, ಭಾರತದಲ್ಲಿಯೂ ಇಂತಹ ಹಲವು ಪ್ರಕರಣಗಳು ನಿತ್ಯ ಕಾಣಸಿಗುತ್ತವೆ.

ಇಂತಹುದೇ ಒಂದು ಕಾರ್ಪೋರೇಟ್ ಪ್ರತಿಭೆ ಇದೀಗ ತನ್ನ ಭವಿಷ್ಯವನ್ನುಮಣ್ಣಿನ ಮೂರ್ತಿಗಳಲ್ಲಿ ಹುಡುಕುತ್ತಿದೆ. ಸಾಂಕ್ರಾಮಿಕದಿಂದಾಗಿ ಮಲ್ಟಿನ್ಯಾಷನಲ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಕಿರಣ್ ಬಾಲು ಎಂಬುವವರು ಮಾರ್ಚ್ 2020 ರಲ್ಲಿ ಕೆಲಸ ಕಳೆದುಕೊಂಡು ತಮ್ಮ ಕುಟುಂಬದ ವೃತ್ತಿ ಕುಂಬಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಗಣೇಶ ಹಬ್ಬದ ಹಿನ್ನಲೆಯಲ್ಲಿ ಕಿರಣ್ ಬಾಲು ಅವರ ಕುಟುಂಬ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದೆ.

33 ವರ್ಷದ ಅವರು ಪಾಟರಿ ಟೌನ್ ನಲ್ಲಿ ವಾಸಿಸುತ್ತಿದ್ದು, ಅವರು ಕುಟುಂಬದ ನಾಲ್ಕನೇ ತಲೆಮಾರಿನ ಕುಂಬಾರರಾಗಿದ್ದಾರೆ. ಈಗ, ಅವರು ಗಣೇಶ ಚತುರ್ಥಿಯ ಸಮಯದಲ್ಲಿ ಮಡಿಕೆಗಳು, ವಿಗ್ರಹಗಳು, ಮತ್ತು ದೀಪಾವಳಿಯ ಸಮಯದಲ್ಲಿ ಮಣ್ಣಿನ ದೀಪಗಳನ್ನು ತಯಾರಿಸುತ್ತಾರೆ. ಈ ಹಿಂದೆ ಬಾಲು ಏರ್‌ಲೈನ್ ಟಿಕೆಟಿಂಗ್ ಕೋರ್ಸ್‌ಗಳಲ್ಲಿ ಬಿಬಿಎ ಮತ್ತು ಡಿಪ್ಲೊಮಾ ಮಾಡಿದ್ದರು. ಕುಂಬಾರಿಕೆ ಪಟ್ಟಣದಲ್ಲಿ ಪದವಿ ತನಕ ಓದಿ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ ಕೆಲವೇ ವ್ಯಕ್ತಿಗಳಲ್ಲಿ ಇವರೂ ಕೂಡ ಒಬ್ಬರು.

ಮಣ್ಣಿನ ಮೂರ್ತಿಯ ಕೆಲಸ ಮಾಡುತ್ತಿರುವ ಕಿರಣ್ ಬಾಲು
ತನ್ನ ಅನೇಕ ಮಾಜಿ ಸಹೋದ್ಯೋಗಿಗಳಂತೆ, ಬಾಲು ಕೂಡ 'ಮನೆಯಿಂದ ಕೆಲಸ ಮಾಡುತ್ತಿದ್ದಾನೆ', ಆದರೆ ಪ್ರತಿದಿನ 12 ಗಂಟೆಗಳಿಗಿಂತ ಹೆಚ್ಚು ಸಮಯ ಬಿಸಿಲು ಮತ್ತು ಮಳೆಯಲ್ಲಿ ಶ್ರಮಿಸುತ್ತಾ, ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಒಂದು ಅಡಿ ಎತ್ತರದ  30 ರಿಂದ 40 ವಿಗ್ರಹಗಳನ್ನು ತಯಾರಿಸಲು ಮಣ್ಣನ್ನು ಮಿಶ್ರಣ ಮಾಡಲು ಮೂರ ರಿಂದ 10 ಗಂಟೆ ತೆಗೆದುಕೊಳ್ಳುತ್ತದೆ. ಕೋಲಾರದಿಂದ ಸಂಗ್ರಹಿಸುವ ಒಂದು ಟ್ರಕ್ ಲೋಡ್ ಮಣ್ಣಿಗೆ ರೂ. 6,000 ವೆಚ್ಚವಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಸರ್ಕಾರದ ಆದೇಶದಿಂದ ಸಂಕಷ್ಟ
ಈಗ ರಾಜ್ಯ ಸರ್ಕಾರ ಗಣೇಶ ಚತುರ್ಥಿ ಆಚರಣೆಯನ್ನು ನಿರ್ಬಂಧಿಸಿರುವುದರಿಂದ ಕುಂಬಾರರು ತಮ್ಮ ವಹಿವಾಟಿನ ಬಗ್ಗೆ ಚಿಂತಿತರಾಗಿದ್ದಾರೆ. ಕೋವಿಡ್ ನಿರ್ಬಂಧಗಳಿಂದಾಗಿ, ಜನರು ಗಣೇಶ ಮೂರ್ತಿಗಳ ಖರೀದಿಸುವುದು ಖಚಿತವಾಗಿಲ್ಲ. ಅವರು ಮಾಡಿದರೂ, ಅವುಗಳನ್ನು ಎಲ್ಲಿ ಮುಳುಗಿಸಬೇಕು ಎಂದು ಅವರಿಗೆ ತಿಳಿದಿಲ್ಲ. ನಮ್ಮಲ್ಲಿ ಎರಡು ವರ್ಷಗಳ ಹಿಂದೆ ಮಾಡಲಾಗದ ಅನೇಕ ಮಾರಾಟವಾಗದ ವಿಗ್ರಹಗಳಿವೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಾಲು ಮತ್ತು ಅವರ ಕುಟುಂಬಸ್ಥರು ಐದು ಇಂಚಿನಿಂದ 21.5 ಅಡಿ ಎತ್ತರದ ವಿಗ್ರಹಗಳನ್ನು ತಯಾರಿಸುತ್ತಾರೆ. ಆದಾಗ್ಯೂ, ಈ ವರ್ಷ, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಅನುಮತಿಸದ ಕಾರಣ ಚಿಕ್ಕ ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಕುಂಬಾರರು ಗಣೇಶ ಮೂರ್ತಿಗಳನ್ನು ಖರೀದಿಸಲು ಮತ್ತು ಬದುಕಲು ಸಹಾಯ ಮಾಡುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ.

ಕುಂಬಾರ ಪೇಟೆಯ ಮಂಜುಳಾ ಅವರು ಕೇವಲ 2-3 ಇಂಚಿನ ವಿಗ್ರಹಗಳನ್ನು ತಯಾರಿಸಲು ಯೋಜಿಸಿದ್ದಾರೆ. ಏಕೆಂದರೆ ಅವುಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಮತ್ತು ಮುಳುಗಿಸಬಹುದು. ಆದರೆ ಗ್ರಾಹಕರು ಅಂತಹ ಸಣ್ಣ ಗಾತ್ರದಲ್ಲಿ ವಿಗ್ರಹಗಳನ್ನು ಖರೀದಿಸುತ್ತಾರೆಂಬುದು ಖಚಿತವಾಗಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಚುನಾವಣೆಯಲ್ಲಿ BNP ಭರ್ಜರಿ ಗೆಲುವು: ತಾರಿಕ್ ರೆಹಮಾನ್ ಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ಮೋದಿ ಹೇಳಿದ್ದೇನು?

ಬಾಂಗ್ಲಾದೇಶ ಚುನಾವಣೆ: ಸ್ಪಷ್ಟ ಬಹುಮತ ಪಡೆದ BNP, ಇವರೇನಾ ಮುಂದಿನ ಪ್ರಧಾನ ಮಂತ್ರಿ ?

Karnataka Budget 2026- ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿ, ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿವು...

ತಿಹಾರ್ ಜೈಲಿನಲ್ಲಿದ್ದಾಗ 'ಹಿತ' ಕಾಯುವ ಭರವಸೆ ನೀಡಿದ್ದೀರಿ- ಸೋನಿಯಾ ಮುಂದೆ ಡಿಕೆಶಿ ಅಳಲು: ರಾಹುಲ್ ಭೇಟಿ ಬಳಿಕ ಹಸನ್ಮುಖರಾಗಿ ಹೊರಬಂದ DCM!

ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ: ಸ್ಥಳದಲ್ಲೇ 7 ಮಂದಿ ಸಾವು-Video

SCROLL FOR NEXT